ವಿಶಾಖಪಟ್ಟಣಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿದ್ದು, ಅಕ್ಷರ್ ಪಟೇಲ್ ಡೆಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ರಿಷಭ್ ಪಂತ್ ಲಖನೌ ತಂಡದ ನಾಯಕರಾಗಿದ್ದು, ಈ ಪಂದ್ಯ ಕುತೂಹಲ ಕೆರಳಿಸಿದೆ.
ವಿಶಾಖಪಟ್ಟಣಂ: ಈ ಬಾರಿ ಹೊಸ ನಾಯಕತ್ವದೊಂದಿಗೆ ಕಣಕ್ಕಿಳಿಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಸೋಮವಾರ ಪರಸ್ಪರ ಮುಖಾಮುಖಿಯಾಗಲಿವೆ. ಡೆಲ್ಲಿ ತಂಡವನ್ನು ಅಕ್ಷರ್ ಪಟೇಲ್ ಮುನ್ನಡೆಸುತ್ತಿದ್ದು, ಐಪಿಎಲ್ ನ ಅತಿ ದುಬಾರಿ ಆಟಗಾರ ಎನಿಸಿಕೊಂಡಿರುವ ರಿಷಭ್ ಪಂತ್ ಲಖನೌ ನಾಯಕರಾಗಿದ್ದಾರೆ.
ರಿಷಭ್ ಕಳೆದ ಆವೃತ್ತಿವರೆಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರು. ಹರಾಜಿನಲ್ಲಿ ಅವರನ್ನು ಲಖನೌ ₹27 ಕೋಟಿ ನೀಡಿ ಲಖನೌ ಫ್ರಾಂಚೈಸಿಯು ಖರೀದಿಸಿತ್ತು. ಈ ಮೊತ್ತಕ್ಕೆ ಅವರು ನ್ಯಾಯ ಒದಗಿಸಲಿದ್ದಾರೆಯೇ ಎಂಬ ಕುತೂಹಲವಿದೆ. ಅಲ್ಲದೆ, ಭಾರತ ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಆಸೆ ಹೊಂದಿರುವ ರಿಷಭ್, ಬ್ಯಾಟಿಂಗ್ ನಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಿದೆ. ತಂಡದಲ್ಲಿ ನಿಕೋಲಸ್ ಪೂರನ್, ಡೇವಿಡ್ ಮಿಲ್ಲರ್, ಮಿಚೆಲ್ ಮಾರ್ಷ್‌ರಂತಹ ಸ್ಫೋಟಕ ಆಟಗಾರರಿದ್ದಾರೆ. ಆದರೆ ಭಾರತೀಯ ಬ್ಯಾಟರ್ಸ್ ಕೊರತೆ ತಂಡಕ್ಕೆ ಎದುರಾಗಬಹುದು.
ಐಪಿಎಲ್‌ನಲ್ಲಿ ಸೊನ್ನೆ ಸುತ್ತುವುದರಲ್ಲೂ ರೋಹಿತ್ ಶರ್ಮಾ ಹೊಸ ದಾಖಲೆ!
ಮತ್ತೊಂದೆಡೆ ಡೆಲ್ಲಿ ಸಮತೋಲಿತವಾಗಿದೆ. ಜೇಕ್ ಪ್ರೇಸರ್, ಫಾಫ್ ಡು ಪ್ಲೆಸಿ ಆರಂಭಿಕರಾಗಿ ಕಣಕ್ಕಿಳಿಯಬಹುದು. ಕೆ.ಎಲ್.ರಾಹುಲ್ ಗೈರಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅವರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಒಂದು ವೇಳೆ ಪಂದ್ಯಕ್ಕೆ ಲಭ್ಯವಿದ್ದರೆ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಉಳಿದಂತೆ ಅಭಿಷೇಕ್ ಪೊರೆಲ್, ಟ್ರಿಸ್ಟನ್ ಸ್ಟಬ್, ಅಶುತೋಶ್ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬ ಲಿದ್ದಾರೆ. ಅಕ್ಷರ್ ಪಟೇಲ್ ಆಲ್ರೌಂಡ್ ಆಟ ತಂಡಕ್ಕೆ ನಿರ್ಣಾಯಕ.
ಸಂಭವನೀಯ ಆಟಗಾರರ ಪಟ್ಟಿ:
ಡೆಲ್ಲಿ ಕ್ಯಾಪಿಟಲ್ಸ್: ಜೇಕ್‌ಫ್ರೇಸರ್ ಮೆಕ್‌ಗರ್ಕ್, ಫಾಫ್ ಡು ಪ್ಲೆಸಿಸ್, ಇಶಾನ್ ಪೊರೆಲ್, ಕೆ ಎಲ್ ರಾಹುಲ್, ಅಕ್ಷರ್ ಪಟೇಲ್(ನಾಯಕ), ಟ್ರಿಸ್ಟನ್ ಸ್ಟಬ್ಸ್, ಅಶುತೋಷ್ ಶರ್ಮಾ, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್, ಟಿ ನಟರಾಜನ್, ಸಮೀರ್ ರಿಜ್ವಿ.
ಲಖನೌ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಆರ್ಯನ್ ಜುಯೆಲ್, ರಿಷಭ್ ಪಂತ್(ನಾಯಕ), ನಿಕೋಲಸ್ ಪೂರನ್, ಆಯುಶ್ ಬದೋನಿ, ಡೇವಿಡ್ ಮಿಲ್ಲರ್, ಶಾಬಾಜ್ ಅಹಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಆಕಾಶ್ ಸಿಂಗ್, ಶಾಮಾರ್ ಜೋಸೆಫ್, ಅಬ್ದುಲ್ ಸಮದ್.
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಪಿಚ್ ರಿಪೋರ್ಟ್
ವಿಶಾಖಪಟ್ಟಣಂ ಪಿಚ್ ಬ್ಯಾಟಿಂಗ್ ಸ್ನೇಹಿ. ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚು, ಕಳೆದ ವರ್ಷ ಡೆಲ್ಲಿ ವಿರುದ್ಧ ಕೆಕೆಆರ್ ಇದೇ ಕ್ರೀಡಾಂಗಣಲ್ಲಿ 272 ರನ್ ಕಲೆಹಾಕಿತ್ತು.