ವಿರಾಟ ರೂಪ, ಕಾರ್ತಿಕ್ ಸಿಕ್ಸರ್ ಆಟಕ್ಕೆ ಪಂಜಾಬ್ ಧೂಳೀಪಟ, ಆರ್‌ಸಿಬಿ 4 ವಿಕೆಟ್ ಗೆಲುವು!

By Suvarna News  |  First Published Mar 25, 2024, 11:17 PM IST

ಐಪಿಎಲ್ 2024 ಟೂರ್ನಿಯಲ್ಲಿ ಆರ್‌ಸಿಬಿ ಗೆಲುವಿನ ಲಯ ಕಂಡುಕೊಂಡಿದೆ. ತವರಿನಲ್ಲಿ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್, ಅಂತಿಮ ಹಂತದಲ್ಲಿ ದಿನೇಶ್ ಕಾರ್ತಿಕ್ ಹಾಗೂ ಲೊಮ್ರೊರ್ ಸಿಕ್ಸರ್ ಹೊಡೆತದಿಂದ ಆರ್‌ಸಿಬಿ 4 ವಿಕೆಟ್ ಗೆಲುವು ದಾಖಲಿಸಿದೆ.


ಬೆಂಗಳೂರು(ಮಾ.25) ಐಪಿಎಲ್ 2024ನ್ನು ಸೋಲಿನಿಂದ ಆರಂಬಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಭರ್ಜರಿ ಗೆಲುವಿನ ಮೂಲಕ ಕಮ್‌ಬ್ಯಾಕ್ ಮಾಡಿದೆ. ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಅಭಿಮಾನಿಗಳನ್ನು ಕುಣಿಸಿತ್ತು. ಕೊಹ್ಲಿಯ ಅಬ್ಬರದ ಬ್ಯಾಟಿಂಗ್ ಮುಂದೆ ಪಂಜಾಬ್ ಕಿಂಗ್ಸ್ ನೀಡಿದ 177ರನ್ ಟಾರ್ಗೆಟನ್ನು ಆರ್‌ಸಿಬಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕೊಹ್ಲಿ ವಿಕೆಟ್ ಪತನದ ಬಳಿಕ ತಂಡದ ಆತಂಕ ಹೆಚ್ಚಾಗಿತ್ತು. ಆದರೆ ಮಹಿಪಾಲ್ ಲೊಮ್ರೊರ್ ಹಾಗೂ ದಿನೇಶ್ ಕಾರ್ತಿಕ್ ಹೋರಾಟದಿಂದ ಆರ್‌ಸಿಬಿ ಗೆಲುವಿನ ದಡ ಸೇರಿತು.

177 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದರು. ಆದರೆ ನಾಯಕ ಫಾಫ್ ಡುಪ್ಲೆಸಿಸ್ ಬಹುಬೇಗನೆ ವಿಕೆಟ್ ಕೈಚೆಲ್ಲಿ ನಿರಾಸೆ ಮೂಡಿಸಿದರು. ಡುಪ್ಲಿಸಿ ವಿಕೆಟ್ ಪತನ ಆರ್‌ಸಿಬಿ ಅಭಿಮಾನಿಗಳ ಆತಂಕ ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ಕ್ಯಾಮರೂನ್ ಗ್ರೀನ್ ವಿಕೆಟ್ ಪತನಗೊಂಡಿತು. ಡುಪ್ಲಿಸಿಸ್ ಹಾಗೂ ಗ್ರೀನ್ ತಲಾ 3 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು.

Latest Videos

undefined

IPL 2024 Full Schedule: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಫೈನಲ್‌ಗೆ ಚೆನ್ನೈ ಆತಿಥ್ಯ

ಗ್ಲೆನ್ ಮ್ಯಾಕ್ಸ್‌ವೆಲ್ ಪಂಜಾಬ್ ವಿರುದ್ಧವೂ ಮುಗ್ಗರಿಸಿದರು. ಕೇವಲ 3 ರನ್ ಸಿಡಿಸಿ ಔಟಾದರು. ಆದರೆ ಕೊಹ್ಲಿ ಹೋರಾಟ ಮುಂದುವರಿದಿತ್ತು.ಕೊಹ್ಲಿ ಕ್ರೀಸ್‌ನಲ್ಲಿರುವುದೇ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿತ್ತು. ಇತ್ತ ರಜತ್ ಪಾಟೀದಾರ್ ಸಾಥ್ ಹೆಚ್ಚು ಹೊತ್ತು ಇರಲಿಲ್ಲ. ಪಾಟೀದಾರ್ 18 ರನ್ ಸಿಡಿಸಿ ಔಟಾದರು. ಕೊಹ್ಲಿ ತಮ್ಮ ಏಕಾಂಗಿ ಹೋರಾಟ ಮುಂದುವರಿಸಿದರು.  

ಹಾಫ್ ಸೆಂಚುರಿ ಸಿಡಿಸಿದ ವಿರಾಟ್ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಲು ಮತ್ತಷ್ಟು ಅಗ್ರೆಸ್ಸೀವ್ ಆಟಕ್ಕೆ ಮುಂದಾದರು. 49 ಎಸೆತದಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಕೊಹ್ಲಿ 77 ರನ್ ಸಿಡಿಸಿ ಔಟಾದರು. ಕೊಹ್ಲಿ ವಿಕೆಟ್ ಪತನ ತಂಡದ ಆತಂಕ ಹೆಚ್ಚಿಸಿತ್ತು. ಇತ್ತ ಅಭಿಮಾನಿಗಳಲ್ಲೂ ಸೋಲಿನ ಭಯ ಕಾಡತೊಡಗಿತ್ತು. ಇದರ ಬೆನ್ನಲ್ಲೇ ಅನೂಜ್ ರಾವತ್ 11 ರನ್ ಸಿಡಿಸಿ ಔಟಾದರು.  ಆದರೆ ಮಹಿಪಾಲ್ ಲೊಮ್ರೊರ್ ಹಾಗೂ ದಿನೇಶ್ ಕಾರ್ತಿಕ್ ಆಟ ಪಂದ್ಯದ ಗತಿಯನ್ನು ಬದಲಿಸಿತು. 

IPL ಮ್ಯಾಚ್ ನಡೆಯುವಾಗಲೇ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ ಫ್ಯಾನ್ಸ್ ಬಡಿದಾಟ..! ವಿಡಿಯೋ ವೈರಲ್

ಅಂತಿಮ ಓವರ್‌ನಲ್ಲಿ 10 ರನ್ ಅವಶ್ಯಕತೆ ಇತ್ತು. ಮೊದಲ ಎಸೆತವನ್ನೇ ಸಿಕ್ಸರ್ ಸಿಡಿಸಿದ ಕಾರ್ತಿಕ್, ಮರು ಎಸೆತದಲ್ಲಿ ಬೌಂಡರಿ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಲೊಮ್ರೊರ್ ಹಾಗೂ ಕಾರ್ತಿಕ್ ಬೌಂಡರಿ ಸಿಕ್ಸರ್ ಆಟ ಬೆಂಗಳೂರು ತಂಡಕ್ಕೆ ಗೆಲುವಿನ ಸಿಹಿ ನೀಡಿತು. ಕಾರ್ತಿಕ್ 10 ಎಸೆತದಲ್ಲಿ ಅಜೇಯ 28 ರನ್ ಸಿಡಿಸಿದರೆ, ಲೊಮ್ರೊರ್ ಅಜೇಯ 17 ರನ್ ಸಿಡಿಸಿದರು. 19.2 ಓವರ್‌ಗಳಲ್ಲಿ ಆರ್‌ಸಿಬಿ 4 ವಿಕೆಟ್ ಗೆಲುವು ಕಂಡಿತು. 
 

click me!