
ಅಹಮ್ಮದಾಬಾದ್(ಮಾ.25) ಐಪಿಎಲ್ ಟೂರ್ನಿಯಲ್ಲಿ ಬ್ಯೂಸಿಯಾಗಿರುವ ತಂಡಗಳು ಇದೀಗ ಬಣ್ಣಗಳ ಹಬ್ಬ ಹೋಳಿ ಆಚರಿಸಿದೆ. ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ತಂಡದ ಜೊತೆ ಹಾಗೂ ಕುಟುಂಬದ ಜೊತೆ ಹೋಳಿ ಹಬ್ಬ ಆಚರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಆಟಗಾರರಿಗೆ ಅದ್ಧೂರಿಯಾಗಿ ಹೋಳಿ ಹಬ್ಬ ಆಚರಿಸಿದೆ. ಈ ಆಚರಣೆಯಲ್ಲಿ ರೋಹಿತ್ ಶರ್ಮಾ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ಕುಟುಂಬ ಹಾಗೂ ತಂಡದ ಸಹ ಆಟಗಾರರ ಜೊತೆ ಹೋಳಿ ಆಚರಿಸಿದ ವಿಡಿಯೋ ಭಾರಿ ವೈರಲ್ ಆಗಿದೆ.
ಆರಂಭದಲ್ಲಿ ಬಣ್ಣದ ಪುಡಿ ಎರಚಿ ಹೋಳಿ ಆಚರಿಸಲಾಯಿತು. ಪತ್ನಿ ಹಾಗೂ ಪುತ್ರಿ ಜೊತೆಗೆ ಮಕ್ಕಳಾದ ರೋಹಿತ್ ಶರ್ಮಾ ಬಣ್ಣ ಹಚ್ಚಿ ಸಂಭ್ರಮಿಸಿದರು. ಬಳಿಕ ತಂಡದ ಸಹ ಆಟಗಾರರಿಗೂ ಬಣ್ಣ ಹಚ್ಚಿದ್ದಾರೆ. ಇತ್ತ ಪೈಪ್ ಮೂಲಕ ನೀರು ಹಾಕಿ ಹೋಳಿ ಹಬ್ಬ ಆಚರಣೆಯನ್ನು ಮತ್ತಷ್ಟು ರೋಚಕವಾಗಿಸಿದ್ದಾರೆ. ಮುಂಬೈ ಇಂಂಡಿಯನ್ಸ್ ತಂಡ ಹೋಳಿ ಹಬ್ಬ ಆಚರಣೆ ವಿಡಿಯೋ ಪೋಸ್ಟ್ ಮಾಡಿದೆ.
IPL 2024 Full Schedule: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಫೈನಲ್‌ಗೆ ಚೆನ್ನೈ ಆತಿಥ್ಯ
ಹೋಳಿ ಆಚರಣೆಯಿಂದ ಇಡೀ ಆವರಣ ಬಣ್ಣದಲ್ಲಿ ಮುಳುಗಿತ್ತು. ರೋಹಿತ್ ಶರ್ಮಾ ಸೇರಿದಂತೆ ಆಟಗಾರರು ಬಣ್ಣದಲ್ಲಿ ಗುರತೇ ಸಿಗದಷ್ಟು ಬದಲಾಗಿದ್ದರು. ಅದ್ಧೂರಿ ಹೋಳಿ ಆಚರಣೆಯಲ್ಲಿ ವಿದೇಶಿ ಕ್ರಿಕೆಟಿಗರು ಪಾಲ್ಗೊಂಡಿದ್ದರು. ಬಣ್ಮಗಳನ್ನು ಎರಚಿ ಸಂಭ್ರಮಪಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯದಲ್ಲಿ ಮುಗ್ಗರಿಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಮುಂಬೈ ಸೋಲು ಕಂಡಿದೆ. ಈ ಪಂದ್ಯದ ಸೋಲಿನ ಜೊತೆಗೆ ಮುಂಬೈ ಇಂಡಿಯನ್ಸ್ ನಾಯಕತ್ವ ಕೂಡ ಭಾರಿ ಚರ್ಚೆಯಾಗುತ್ತಿದೆ. ಗುಜರಾತ್ ಟೈಟಾನ್ಸ್ ತಂಡ ತೊರೆದು ಮುಂಬೈ ಇಂಡಿಯನ್ಸ್ ಸೇರಿಕೊಂಡ ಹಾರ್ದಿಕ್ ಪಾಂಡ್ಯ ವಿರುದ್ದ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಇತ್ತ ಹೈದರಾಬಾದ್ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೊನೆಯ ಕ್ಷಣದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದ ಕಾರಣ ಆಕ್ರೋಶಗೊಂಡಿದ್ದಾರೆ. ಇಷ್ಟೇ ಅಲ್ಲ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ ಗೆಲವನ್ನು ಸಂಭ್ರಮಿಸಿದ್ದಾರೆ.
ನೀನು ಬೌಂಡರಿ ಗೆರೆಯಲ್ಲಿ ಫೀಲ್ಡಿಂಗ್ ಮಾಡು...! ರೋಹಿತ್ ಶರ್ಮಾಗೆ ಶಾಕ್ ಕೊಟ್ಟ ಹಾರ್ದಿಕ್ ಪಾಂಡ್ಯ..! ನೆಟ್ಟಿಗರು ಗರಂ
ಟಾಸ್ ವೇಳೆ ಪಾಂಡ್ಯ ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಪಂದ್ಯದ ನಡುವೆ ರೋಹಿತ್ ಶರ್ಮಾರನ್ನು ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಕಳುಹಿಸಿದ ರೀತಿಗೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಇದರ ಜೊತೆಗೆ ಸೋಲನ್ನು ಟ್ರೋಲ್ ಮಾಡುತ್ತಿದ್ದಾರೆ. ರೋಹಿತ್ ಶರ್ಮಾಗೆ ನಾಯಕತ್ವ ನೀಡಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.