ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ಆಡುತ್ತಿದ್ದರೂ ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಮೂರು ಬಾರಿ ಫೈನಲ್ ಪ್ರವೇಶಿಸಿದ್ದೇ, ಆರ್‌ಸಿಬಿ ತಂಡದ ಗರಿಷ್ಠ ಸಾಧನೆ ಎನಿಸಿಕೊಂಡಿದೆ. ಇನ್ನು ಇದು ಹೊಸ ಅಧ್ಯಾಯ ಎನ್ನುವ ಘೋಷಣೆಯೊಂದಿಗೆ ಕಣಕ್ಕಿಳಿದ ಆರ್‌ಸಿಬಿ ತಂಡದ ಹಣೆಬರಹ ಮಾತ್ರ ಒಂಚೂರು ಬದಲಾಗಿಲ್ಲ.
ಬೆಂಗಳೂರು(ಏ.16) ಚಿನ್ನಸ್ವಾಮಿ ಕ್ರೀಡಾಂಗಣ ಸೋಮವಾರ ರನ್ ಹೊಳೆಗೆ ಸಾಕ್ಷಿಯಾಯಿತು. ದಾಖಲೆಗಳ ಸುರಿಮಳೆಯೇ ಸುರಿಯಿತು. ಸನ್‌ರೈಸರ್ಸ್ 287 ರನ್ ಸಿಡಿಸಿ ಐಪಿಎಲ್‌ನಲ್ಲಿ ಗರಿಷ್ಠ ರನ್ ದಾಖಲೆಯನ್ನು ಉತ್ತಮಗೊಳಿಸಿಕೊಂಡರೆ, ಅತ್ಯುತ್ತಮ ಹೋರಾಟ ತೋರಿದ ಆರ್‌ಸಿಬಿ 262 ರನ್ ಕಲೆಹಾಕಿ, 25 ರನ್‌ಗಳ ಸೋಲು ಕಂಡಿತು. ಪಂದ್ಯದಲ್ಲಿ ದಾಖಲಾಗಿದ್ದು ಒಟ್ಟು 549 ರನ್! ಇನ್ನೂ ಪಂದ್ಯದಲ್ಲಿ ಒಟ್ಟು 38 ಸಿಕ್ಸರ್‌ಗಳು ಸಿಡಿದವು. ಇದೂ ಕೂಡ ದಾಖಲೆ.
ಭರ್ಜರಿ ಹೋರಾಟ ತೋರಿದರೂ, ಆರ್‌ಸಿಬಿ 7 ಪಂದ್ಯಗಳಲ್ಲಿ 6ನೇ ಸೋಲು ಕಂಡಿದೆ. ತಂಡದ ನೆಟ್ ರನ್ ರೇಟ್ ಪಾತಾಳಕ್ಕೆ ಕುಸಿದಿದ್ದು, ಪ್ಲೇ-ಆಫ್ ಬಾಗಿಲು ಹೆಚ್ಚೂ ಕಡಿಮೆ ಮುಚ್ಚಿದೆ. ಪ್ಲೇ-ಆಫ್ ಪ್ರವೇಶಿಸಬೇಕಿದ್ದರೆ ಆರ್‌ಸಿಬಿ ಬಾಗಿಲು ಮುರಿದು ಮುನ್ನಗ್ಗಬೇಕಷ್ಟೆ. ಇನ್ನು ಆರ್‌ಸಿಬಿ ತಂಡದ ಈ ಆವೃತ್ತಿಯ ಐಪಿಎಲ್ ಪ್ರದರ್ಶನದ ಬಗ್ಗೆ ಹಲವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಟೆನಿಸ್ ದಂತಕಥೆ ಮಹೇಶ್ ಭೂಪತಿ ಕೂಡಾ, ಅರ್‌ಸಿಬಿ ಮ್ಯಾನೇಜ್‌ಮೆಂಟ್ ಕುರಿತಂತೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
549 ರನ್, 81 ಬೌಂಡ್ರಿ: ಆರ್‌ಸಿಬಿ-ಸನ್‌ರೈಸರ್ಸ್ ನಡುವಿನ ಪಂದ್ಯದಲ್ಲಿ ಹಲವು ರೆಕಾರ್ಡ್ಸ್ ನುಚ್ಚುನೂರು..!
ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ಆಡುತ್ತಿದ್ದರೂ ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಮೂರು ಬಾರಿ ಫೈನಲ್ ಪ್ರವೇಶಿಸಿದ್ದೇ, ಆರ್‌ಸಿಬಿ ತಂಡದ ಗರಿಷ್ಠ ಸಾಧನೆ ಎನಿಸಿಕೊಂಡಿದೆ. ಇನ್ನು ಇದು ಹೊಸ ಅಧ್ಯಾಯ ಎನ್ನುವ ಘೋಷಣೆಯೊಂದಿಗೆ ಕಣಕ್ಕಿಳಿದ ಆರ್‌ಸಿಬಿ ತಂಡದ ಹಣೆಬರಹ ಮಾತ್ರ ಒಂಚೂರು ಬದಲಾಗಿಲ್ಲ. ಇದರ ಬೆನ್ನಲ್ಲೇ ಭಾರತದ ಟೆನಿಸ್ ದಂತಕಥೆ ಮಹೇಶ್ ಭೂಪತಿ, ಸಾಮಾಜಿಕ ಜಾಲತಾಣವಾದ 'ಎಕ್ಸ್' ಮೂಲಕ ಭಾವನಾತ್ಮಕ ಕಿವಿಮಾತು ಹೇಳಿದ್ದಾರೆ.
For the sake of the Sport , the IPL, the fans and even the players i think BCCI needs to enforce the Sale of RCB to a New owner who will care to build a sports franchise the way most of the other teams have done so.
— Mahesh Bhupathi (@Maheshbhupathi)"ಕ್ರೀಡೆಯ ದೃಷ್ಟಿಯಿಂದ, ಐಪಿಎಲ್ ಹಾಗೂ ಅಭಿಮಾನಿಗಳ ಹಾಗೂ ಆಟಗಾರರ ಹಿತಾದೃಷ್ಟಿಯಿಂದ ಸುಮ್ಮನೆ ಆರ್‌ಸಿಬಿ ತಂಡವನ್ನು ಮಾರಾಟ ಮಾಡಿಬಿಡಿ. ಇದರ ಜತೆಗೆ ಮಾಲೀಕತ್ವವನ್ನು ಬದಲಾಯಿಸಿತು. ಈ ವಿಚಾರವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಬೇಕು. ಇದಾದ ಬಳಿಕವಾದರೂ ಹೊಸ ಮಾಲೀಕತ್ವದಲ್ಲಿ ಬಲಿಷ್ಠ ತಂಡ ರೂಪುಗಳ್ಳಲು ಅವಕಾಶ ಮಾಡಿದಂತಾಗುತ್ತದೆ. ಹಲವು ತಂಡಗಳು ಈ ರೀತಿ ಮಾಡಿವೆ" ಎಂದು ಮಹೇಶ್ ಭೂಪತಿ ಎಕ್ಸ್ ಮಾಡಿದ್ದಾರೆ. ಇದರ ಜತೆಗೆ ಹ್ಯಾಶ್‌ಟ್ಯಾಗ್‌ನಲ್ಲಿ ದುರಂತ(#Tragic) ಬರೆದುಕೊಂಡಿದ್ದಾರೆ.
IPL 2024 ಆರ್‌ಸಿಬಿಗೆ ಅರ್ಧದಲ್ಲೇ ಕೈಕೊಟ್ಟ ಮ್ಯಾಕ್ಸ್‌ವೆಲ್..! ಆದ್ರೂ ಒಂದು ಮಾತು ಕೊಟ್ಟ ಸ್ಟಾರ್ ಆಲ್ರೌಂಡರ್
ಸನ್‌ರೈಸರ್ಸ್ ಹೈದರಾಬಾದ್ ಎದುರು ತವರಿನಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಟ್ರಾವಿಸ್ ಹೆಡ್ ಸ್ಪೋಟಕ ಶತಕ ಹಾಗೂ ಹೆನ್ರಿಚ್ ಕ್ಲಾಸೇನ್ ವಿಸ್ಪೋಟಕ ಅರ್ಧಶತಕ ಹಾಗೂ ಕೊನೆಯಲ್ಲಿ ಅಬ್ದುಲ್ ಸಮದ್ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 287 ರನ್ ಕಲೆಹಾಕಿತು.
ಇನ್ನು ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಕೆಚ್ಚೆದೆಯ ಅರ್ಧಶತಕದ ಹೊರತಾಗಿಯೂ 262 ರನ್ ಬಾರಿಸಲಷ್ಟೇ ಶಕ್ತವಾಯಿತು. ಈ ಮೂಲಕ 25 ರನ್ ಅಂತರದ ಸೋಲು ಅನುಭವಿಸಿತು.
ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ 7 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಹಾಗೂ 6 ಸೋಲುಗಳೊಂದಿಗೆ 2 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ, ಇನ್ನು ಲೀಗ್ ಹಂತದ ಎಲ್ಲಾ 7 ಪಂದ್ಯಗಳಲ್ಲಿ ಜಯ ದಾಖಲಿಸಬೇಕಿದೆ.