ರಾಜಸ್ಥಾನ 6 ಪಂದ್ಯಗಳಲ್ಲಿ 5 ಗೆದ್ದಿದ್ದು, ಕೋಲ್ಕತಾ 5ರಲ್ಲಿ 4 ಪಂದ್ಯಗಳಲ್ಲಿ ಜಯಗಳಿಸಿವೆ. ತಮ್ಮ ಸ್ಫೋಟಕ ಬ್ಯಾಟಿಂಗ್, ಸ್ಪಿನ್ ಕೈಚಳಕದಿಂದ ಎದುರಾಳಿಗಳಲ್ಲಿ ಭಯ ಹುಟ್ಟಿಸಿರುವ ನರೈನ್ ಕೆಕೆಆರ್‌ನ ಟ್ರಂಪ್‌ಕಾರ್ಡ್.
ಕೋಲ್ಕತಾ(ಏ.16): ಈ ಬಾರಿ ಐಪಿಎಲ್‌ನಲ್ಲಿ ಪ್ಲೇ-ಆಫ್ ಪ್ರವೇಶಿಸುವ 2 ನೆಚ್ಚಿನ ತಂಡಗಳು ಎನಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮಂಗಳವಾರ ಪರಸ್ಪರ ಮುಖಾಮುಖಿಯಾಗಲಿವೆ. ರಾಜಸ್ಥಾನ ಗೆದ್ದರೆ ಅಗ್ರಸ್ಥಾನ ಭದ್ರಪಡಿಸಿಕೊಳ್ಳಲಿದ್ದು, ಕೆಕೆಆರ್ ಈ ಪಂದ್ಯದ ಗೆಲುವಿನ ಮೂಲಕ ನಂ.1 ಸ್ಥಾನಕ್ಕೇರಲು ಕಾಯುತ್ತಿದೆ.
ರಾಜಸ್ಥಾನ 6 ಪಂದ್ಯಗಳಲ್ಲಿ 5 ಗೆದ್ದಿದ್ದು, ಕೋಲ್ಕತಾ 5ರಲ್ಲಿ 4 ಪಂದ್ಯಗಳಲ್ಲಿ ಜಯಗಳಿಸಿವೆ. ತಮ್ಮ ಸ್ಫೋಟಕ ಬ್ಯಾಟಿಂಗ್, ಸ್ಪಿನ್ ಕೈಚಳಕದಿಂದ ಎದುರಾಳಿಗಳಲ್ಲಿ ಭಯ ಹುಟ್ಟಿಸಿರುವ ನರೈನ್ ಕೆಕೆಆರ್‌ನ ಟ್ರಂಪ್‌ಕಾರ್ಡ್.
ಕ್ಯಾಂಡಿಡೇಟ್ಸ್ ಚೆಸ್: ವಿಶ್ವ ನಂ.3 ಹಿಕರು ವಿರುದ್ಧ ವಿದಿತ್‌ಗೆ ಸತತ 2ನೇ ಜಯ
ಫಿಲ್ ಸಾಲ್ಟ್, ರಸೆಲ್ ಸ್ಫೋಟಕ ಆಟವಾಡುತ್ತಿದ್ದು, ವೇಗಿ ಮಿಚೆಲ್ ಸ್ಟಾರ್ಕ್ ಲಯಕ್ಕೆ ಮರಳಿದ್ದು ತಂಡಕ್ಕೆ ಪ್ಲಸ್‌ಪಾಯಿಂಟ್. ಬೌಲಿಂಗ್ ವಿಭಾಗದಲ್ಲಿ ಹರ್ಷಿತ್ ರಾಣಾ, ವೈಭವ್ ಅರೋರ, ವರುಣ್ ಚಕ್ರವರ್ತಿ ರಾಜಸ್ಥಾನದ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.
ಅತ್ತ ರಾಜಸ್ಥಾನ ಕಳೆದೆರಡು ಪಂದ್ಯಗಳಲ್ಲಿ ಮಂಕಾದಂತೆ ಕಂಡುಬಂದರೂ ಟೂರ್ನಿಯುದ್ದಕ್ಕೂ ಸಂಘಟಿತ ಪ್ರದರ್ಶನ ನೀಡಿದೆ. ಬಟ್ಲರ್ ಈ ಪಂದ್ಯಕ್ಕೆ ಫಿಟ್ ಇದ್ದಾರೊ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಚಹಲ್, ಬೌಲ್ಟ್, ಆವೇಶ್, ಅಶ್ವಿನ್, ಕೇಶವ್ ವಿರುದ್ಧ ಕೆಕೆಆರ್ ಬ್ಯಾಟರ್ಸ್ ಸೂಕ್ತ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ.
IPL 2024 ಸನ್‌ರೈಸರ್ಸ್ ಹೈದರಾಬಾದ್ ಎದುರು ಹೋರಾಡಿ ಸೋಲುಂಡ ಆರ್‌ಸಿಬಿ..!
ಒಟ್ಟು ಮುಖಾಮುಖಿ: 27
ರಾಜಸ್ಥಾನ: 13
ಕೋಲ್ಕತಾ: 14
ಸಂಭವನೀಯ ಆಟಗಾರರ ಪಟ್ಟಿ
ರಾಜಸ್ಥಾನ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ರಿಯಾನ್ ಪರಾಗ್, ಧೃವ್ ಜುರೆಲ್, ಶಿಮ್ರೊನ್ ಹೆಟ್ಮೇಯರ್, ರವಿಚಂದ್ರನ್ ಅಶ್ವಿನ್, ಕೇಶವ್ ಮಹರಾಜ್, ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಯುಜುವೇಂದ್ರ ಚಹಲ್.
ಕೋಲ್ಕತಾ: ಫಿಲ್ ಸಾಲ್ಟ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ),ಅಂಗಕೃಷ್ ರಘುವಂಶಿ, ಆಂಡ್ರೆ ರಸೆಲ್, ರಮನ್‌ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವೈಭವ್ ಅರೋರ, ವರುಣ್ ಚಕ್ರವರ್ತಿ.
ಪಂದ್ಯ: ಸಂಜೆ 7.30ಕ್ಕೆ. ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಸಿನಿಮಾ.