IPL 2024 ಟಾಸ್ ಗೆದ್ದ ಸನ್‌ರೈಸರ್ಸ್, ಬಲಿಷ್ಠ ಪ್ಲೇಯಿಂಗ್ 11 ಕಣಕ್ಕಿಳಿಸಿದ ಕೆಕೆಆರ್!

By Suvarna News  |  First Published Mar 23, 2024, 7:12 PM IST

ಕೆಕೆಆರ್ ವಿರುದ್ದ ಸನ್‌ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇತ್ತ ಕೆಕೆಆರ್ ಬಲಿಷ್ಠ ಪ್ಲೇಯಿಂಗ್ ಕಣಕ್ಕಿಳಿಸಿದೆ. ಉಭಯ ತಂಡದಲ್ಲಿ ಯಾರಿದ್ದಾರೆ? 
 


ಕೋಲ್ಕತಾ(ಮಾ.23) ಐಪಿಎಲ್ 2024 ಟೂರ್ನಿ ರೋಚಕತೆ ಹೆಚ್ಚಾಗಿದೆ. ಇಂದು ನಡೆಯುತ್ತಿರುವ 2ನೇ ಪಂದ್ಯದಲ್ಲಿ ಕೆಕೆಆರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್‌ರೈಸರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಸೇರಿದಂತೆ ಜಾನ್ಸನ್, ಕ್ಲಾಸೆನ್ ಹಾೂ ಮರ್ಕ್ರಮ್ ವಿದೇಶಿ ಆಟಗಾರಾಗಿದ್ದಾರೆ. 

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಆ್ಯಡಿನ್ ಮರ್ಕ್ರಮ್, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮಾದ್, ಶಹಬಾಜ್ ಅಹಮ್ಮದ್, ಮಾರ್ಕೋ ಜಾನ್ಸೆನ್, ಪ್ಯಾಟ್ ಕಮಿನ್ಸ್(ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್ 

Latest Videos

undefined

CSK ಪಡೆಯನ್ನೇ ಒಂದು ಕ್ಷಣ ತಬ್ಬಿಬ್ಬು ಮಾಡಿದ ಈ ಅನೂಜ್ ರಾವತ್ ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಕೋಲ್ಕತಾ ನೈಟ್ ರೈಡರ್ಸ್ ಪ್ಲೇಯಿಂಗ್ 11
ಫಿಲಿಪ್ ಸಾಲ್ಟ್, ವೆಂಕಟೇಶ್ ಐಯ್ಯರ್, ಶ್ರೇಯಸ್ ಐಯ್ಯರ್(ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ರಮನದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಶಿತ್ ರಾಣಾ, ವರುಣ್ ಚಕ್ರವರ್ತಿ

ಮೇಲ್ನೋಟಕ್ಕ ಕೆಕೆಆರ್ ತಂಡ ಬಲಿಷ್ಠವಾಗಿದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ಸಮತೋಲನದಿಂದ ಕೂಡಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಬ್ಯಾಲೆನ್ಸ್ ಮಾಡಿಕೊಂಡಿರುವ ಹೈದರಾಬಾದ್, ಕೆಕೆಆರ್ ಕಟ್ಟಿಹಾಕುವ ವಿಶ್ವಾಸದಲ್ಲಿದೆ.

ಕೆಕೆಆರ್ ತಂಡದಲ್ಲಿರುವ ಆ್ಯಂಡ್ರೆ ರಸೆಲ್, ಫಿಲಿಪ್ ಸಾಲ್ಟ್, ಸುನಿಲ್ ನರೈನ್ ಹಾಗೂ ಮೆಚೆಲ್ ಸ್ಟಾರ್ಕ್ ವಿದೇಶಿ ಕ್ರಿಕೆಟಿಗ ಬಣ ಯಾವುದೇ ಕ್ಷಣದಲ್ಲೂ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಆಟಗಾರರು. ಹೀಗಾಗಿ ಇಂದಿನ ಹೋರಾಟದ ರೋಚಕತೆ ಮತ್ತಷ್ಟು ಹೆಚ್ಚಾಗಿದೆ. 

ರಚಿನ್ ರವೀಂದ್ರ ಮೇಲೆ ವಿರಾಟ ರೂಪ ತೋರಿದ ಕೊಹ್ಲಿ, ಇದಕ್ಕೇ RCB ಸೋಲೋದು ಎನ್ನುತ್ತಿದ್ದಾರೆ ನೆಟ್ಟಿಗರು!

ಹೈದರಾಬಾದ್ ತಂಡ ಈ ಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ನಾಯಕತ್ವದಡಿ ಆಡುತ್ತಿದೆ. ಹೀಗಾಗಿ ಈ ಬಾರಿ ಸನ್‌ರೈಸರ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಭಾರತವನ್ನೇ ಮಣಿಸಿದ ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು. ಇದೇ ರೀತಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಟ್ರೋಫಿ ಗೆಲ್ಲಲಿದೆ ಅನ್ನೋದು ಹೈದರಾಬಾದ್ ಅಭಿಮಾನಿಗಳ ವಿಶ್ವಾಸವಾಗಿದೆ.

ಸೌತ್ ಆಫ್ರಿಕಾ ಟಿ20 ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸತತ 2ನೇ ಬಾರಿ ಟ್ರೋಫಿ ಗೆದ್ದುಕೊಂಡಿದೆ. ಹೀಗಾಗಿ ಅದೃಷ್ಠವೂ ಹೈದರಾಬಾದ್ ತಂಡದಲ್ಲಿದೆ ಅನ್ನೋದು ಅಭಿಮಾನಿಗಳ ಮಾತು.
 

click me!