RCB ಮಾಜಿ ವೇಗಿ ಹರ್ಷಲ್ ಪಟೇಲ್‌ಗೆ ಒಂದೇ ಓವರ್‌ನಲ್ಲಿ 25 ರನ್ ಚಚ್ಚಿದ ಡೆಲ್ಲಿ ಹುಡುಗ..!

By Naveen Kodase  |  First Published Mar 23, 2024, 5:51 PM IST

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಶಿಖರ್ ಧವನ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಉತ್ತಮ ಆರಂಭ ಒದಗಿಸಿಕೊಟ್ಟರು.


ಚಂಡಿಗಢ(ಮಾ.23): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸವಾಲಿನ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಆರ್‌ಸಿಬಿ ತಂಡದ ಮಾಜಿ ವೇಗಿ ಹರ್ಷಲ್ ಪಟೇಲ್ ಇದೀಗ ಡೆಲ್ಲಿ ಎದುರು ಕೊನೆಯ ಓವರ್‌ನಲ್ಲಿ 21 ವರ್ಷದ ಯುವ ಬ್ಯಾಟರ್ ಅಭಿಷೇಕ್ ಪೋರೆಲ್ 25 ರನ್ ಸಿಡಿಸಿದ್ದಾರೆ. ಇದರ ಬೆನ್ನಲ್ಲೇ ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಲಾರಂಭಿಸಿದ್ದಾರೆ.

ಹೌದು, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಶಿಖರ್ ಧವನ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಉತ್ತಮ ಆರಂಭ ಒದಗಿಸಿಕೊಟ್ಟರು. ವಾರ್ನರ್ 29 ರನ್ ಸಿಡಿಸಿದರೆ, ಮಿಚೆಲ್ ಮಾರ್ಷ್ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಶಾಯ್ ಹೋಪ್ 33 ಹಾಗೂ ನಾಯಕ ರಿಷಭ್ ಪಂತ್ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

Latest Videos

undefined

ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಕಿ ಬೋಯಿ(3) ಹಾಗೂ ಟ್ರಿಸ್ಟಿನ್ ಸ್ಟಬ್ಸ್‌(5) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಇನ್ನು ಅಕ್ಷರ್ ಪಟೇಲ್ 21 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು.

ಮತ್ತೆ ದುಬಾರಿಯಾದ ಹರ್ಷಲ್ ಪಟೇಲ್: ಆರ್‌ಸಿಬಿ ತಂಡದ ಡೆತ್ ಓವರ್ ಸ್ಪೆಷಲಿಸ್ಟ್ ಆಗಿದ್ದ ಹರ್ಷಲ್ ಪಟೇಲ್ ಅವರನ್ನು ಈ ಬಾರಿಯ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟಿತ್ತು. ಹರ್ಷಲ್ ಪಟೇಲ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಖರೀದಿಸಿತ್ತು. ಮೊದಲ ಮೂರು ಓವರ್‌ನಲ್ಲಿ ಹರ್ಷಲ್ ಪಟೇಲ್ ಕೇವಲ 22 ರನ್ ನೀಡಿ ಎರಡು ಪ್ರಮುಖ ವಿಕೆಟ್ ಕಬಳಿಸಿದ್ದರು. 

ಇನ್ನು 19 ಓವರ್ ಅಂತ್ಯದ ವೇಳೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 8 ವಿಕೆಟ್ ಕಳೆದುಕೊಂಡು 149 ರನ್ ಬಾರಿಸಿತ್ತು. ಇನ್ನು 20 ಓವರ್ ಬೌಲಿಂಗ್ ಮಾಡಲಿಳಿದ ಹರ್ಷಲ್ ಪಟೇಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ 21 ವರ್ಷದ ಅಭಿಷೇಕ್ ಪೋರೆಲ್ 25 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಹರ್ಷಲ್ ಪಟೇಲ್ ಒಂದೇ ಓವರ್‌ನಲ್ಲಿ ಪೋರೆಲ್ 3 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ತಂಡಕ್ಕೆ ಆಸರೆಯಾದರು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿದೆ

𝐓𝐡𝐞 𝐈𝐦𝐩𝐚𝐜𝐭 👊

Abhishek Porel delivered and provided the late flourish for 👏 👏

Watch the match LIVE on and 💻📱 | pic.twitter.com/8awvqO712N

— IndianPremierLeague (@IPL)

ಇನ್ನು ಹರ್ಷಲ್ ಪಟೇಲ್ ದುಬಾರಿಯಾಗುತ್ತಿದ್ದಂತೆಯೇ ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದ್ದಾರೆ. ಹೀಗಿದೆ ನೋಡಿ ಕೆಲವು ಮೀಮ್ಸ್‌ಗಳು.

Porel to Harshal Patel in last over 😹pic.twitter.com/0xnKmtXNmS

— Desi Bhayo (@desi_bhayo88)


Bro Harshal Patel sent in trauma by impact player Porel pic.twitter.com/t4lMHPUM7y

— Shivani (@meme_ki_diwani)

Harshal Patel is Leaking Runs but not for RCB pic.twitter.com/PMzpdfS1kE

— Pulkit🇮🇳 (@pulkit5Dx)

Harshal Patel last over 25 runs pic.twitter.com/71KxRETXDK

— Desi Bhayo (@desi_bhayo88)

RCBians to Harshal Patel 🏃 pic.twitter.com/aOB81wMOXE

— Wellu (@Wellutwt)
click me!