IPL 2024 ಸಿಎಸ್‌ಕೆ ಮಣಿಸಿದ ಹೈದರಾಬಾದ್, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿಕೆ!

By Suvarna News  |  First Published Apr 5, 2024, 10:57 PM IST

ಆರಂಭಿಕ 2 ಪಂದ್ಯದಲ್ಲಿ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಸತತ 2ನೇ ಸೋಲು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಬಳಿಕ ಇದೀಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧವೂ ಸೋಲು ಕಂಡಿದೆ. 


ಹೈದಾಬಾದ್(ಏ.05) ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ಮೂಲಕ ಶುಭಾರಂಭ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಸತತ 2ನೇ ಸೋಲು ಅನುಭವಿಸಿದೆ.  ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಮುಗ್ಗರಿಸಿದೆ. ಸೋಲಿನಿಂದ ಕಂಗೆಟ್ಟಿದ್ದ ಎಸ್‌ಆರ್‌ಹೆಚ್ ಇದೀಗ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಸಿಎಸ್‌ಕೆ ವಿರುದ್ಧ 6 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಹೈದರಾಬಾದ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

ಅದ್ಭುತ ಬೌಲಿಂಗ್ ದಾಳಿ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಚೆನ್ನೈ ತಂಡವನ್ನು 165 ರನ್‌ಗೆ ಕಟ್ಟಿಹಾಕಿತ್ತು. 166 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಸ್ಫೋಟಕ ಆರಂಭ ಪಡೆಯಿತು. ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಆರಂಭಕ್ಕೆ ಸಿಎಸ್‌ಕೆ ಬೆಚ್ಚಿ ಬಿದ್ದಿತ್ತು. ಅಭಿಷೇಕ್ ಶರ್ಮಾ 12 ಎಸೆತದಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 37 ರನ್ ಸಿಡಿಸಿ ಔಟಾದರು.

Latest Videos

undefined

ಮಯಾಂಕ್ ಯಾದವ್ ಮಾರಕ ವೇಗಕ್ಕೆ ಮನಸೋತ ದಿಗ್ಗಜ ಕ್ರಿಕೆಟಿಗರು..!

ಅಭಿಷೇಕ್ ಶರ್ಮಾ ಒಂದೆಡೆಯಿಂದ ಅಬ್ಬರಿಸಿದರೆ ಇತ್ತ ಟ್ರಾವಿಸ್ ಹೆಡ್ ಕೂಡ ಉತ್ತಮ ಆರಂಭ ನೀಡಿದರು. ಹೆಡ್ 24 ಎಸೆತದಲ್ಲಿ 31 ರನ್ ಸಿಡಿಸಿದರು. ಆರಂಭಿಕರ ವಿಕೆಟ್ ಪತನದ ಬಳಿಕ ಆ್ಯಡಿನ್ ಮರ್ಕ್ರಮ್  ಬ್ಯಾಟಿಂಗ್ ಹೈದರಾಬಾದ್ ತಂಡಕ್ಕೆ ನೆರವಾಯಿತು. ಇದೇ ವೇಲೆ ಮರ್ಕ್ರಮ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆಲುವಿನ ಹಾದಿಯಲ್ಲಿ ಸಾಗಿತು.

ಆ್ಯಡಿನ್ ಮರ್ಕ್ರಮ್ 36 ಎಸೆತದಲ್ಲಿ 50 ರನ್ ಸಿಡಿಸಿದರು. ಶೆಹಬಾಜ್ ಅಹಮ್ಮದ್ 18 ರನ್ ಸಿಡಿಸಿ ಔಟಾದರು. ಹೆನ್ರಿಚ್ ಕ್ಲಾಸೆನ್ ಹಾಗೂ ನಿತೀಶ್ ರೆಡ್ಡಿ ಅಂತಿಮ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಿತೀಶ್ ರೆಡ್ಡಿ ಅಜೇಯ 14 ರನ್ ಹಾಗೂ ಕ್ಲಾಸೆನ್ ಅಜೇಯ 10 ರನ್ ಸಿಡಿಸಿದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ 18.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಚೆನ್ನೈ ಇನ್ನಿಂಗ್ಸ್:
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಅಬ್ಬರಿಸಲು ವಿಫಲವಾಯಿತು.ಪ್ರಮುಖವಾಗಿ ಸನ್‌ರೈಸರ್ಸ್ ಬೌಲಿಂಗ್ ದಾಳಿಗೆ ಸ್ಫೋಟಕ ಬ್ಯಾಟಿಂಗ್ ಮೂಡಿಬರಲಿಲ್ಲ. ಹೀಗಾಗಿ ಚೆನ್ನೈ 5 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿತು. 

ರಿಷಭ್ ಪಂತ್ ಹೃದಯ ಕದ್ದ ಇಶಾ ನೇಗಿ..! ಇಲ್ಲಿದೆ ಕ್ಯೂಟ್ ಜೋಡಿಯ ಇಂಟ್ರೆಸ್ಟಿಂಗ್ ಲವ್ ಸ್ಟೋರಿ
 

click me!