IPL 2024 ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ, ಸಿಎಸ್‌ಕೆಗೆ ಶುರುವಾಯ್ತ ನಡುಕ!

By Suvarna NewsFirst Published Mar 22, 2024, 7:41 PM IST
Highlights

ಐಪಿಎಲ್ 2024 ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ವರ್ಣರಂಜಿತ ಉದ್ಘಾಟನಾ ಸಮಾರಂಭ ಬಳಿಕ ನಡೆಯುತ್ತಿರುವ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ರೋಚಕ ಹೋರಾಟದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
 

ಚೆನ್ನೈ(ಮಾ.22) ಐಪಿಎಲ್ 2024ರ ಟೂರ್ನಿಗೆ ಚಾಲನೆ ಸಿಕ್ಕಿದೆ. ಇನ್ನೆರಡು ತಿಂಗಳು ಕ್ರಿಕೆಟ್ ಹಬ್ಬ. ವರ್ಣರಂಜಿತ ಸಮಾರಂಭದ ಬಳಿಕ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಬೌಲಿಂಗ್ ಗಮನದಲ್ಲಿಟ್ಟುಕೊಂಡಿರುವ ಆರ್‌ಸಿಬಿ ಅಲ್ಜಾರಿ ಜೊಸೆಫ್‌ಗೆ ಸ್ಥಾನ ನೀಡಿದೆ. ಇತ್ತ ಸಿಎಸ್‌ಕೆ ತಂಡದಲ್ಲಿ ಮಿಸ್ಟ್ರಿ ಸ್ಪಿನ್ನರ್ ಸಮೀರ್ ರಿಜ್ವಿಗೆ ಅವಕಾಶ ನೀಡಲಾಗದೆ.  

ಆರ್‌ಸಿಬಿ ಪ್ಲೇಯಿಂಗ್ 11
ಫಾಫ್ ಡುಪ್ಲಸಿಸ್(ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಕರಣ್ ಶರ್ಮಾ, ಅಲ್ಜಾರಿ ಜೊಸೆಫಿ, ಮಯಾಂಕ್ ಡಗಾರ್, ಮೊಹಮ್ಮದ್ ಸಿರಾಜ್ 

ಚೆನ್ನೈನಲ್ಲಿ RCB ಕೊನೆ ಸಲ CSK ವಿರುದ್ಧ ಗೆದ್ದಾಗ... ಆಗಿನ್ನೂ ವಾಟ್ಸ್‌ಆ್ಯಪ್‌ ಇರಲಿಲ್ಲ..!

ಸಿಎಸ್‌ಕೆ ಪ್ಲೇಯಿಂಗ್ 11
ರುತರಾಜ್ ಗಾಯಕ್ವಾಡ್(ನಾಯಕ), ರಾಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ, ದೀಪಕ್ ಚಹಾರ್, ಮಹೇಶ್ ತೀಕ್ಷಾನ, ಮುಸ್ತಾಫಿಜುರ್ ರಹಮಾನ್, ತುಷಾರ್ ಪಾಂಡೆ 

ಚೆನ್ನೈನಲ್ಲಿ ನಡೆಯುತ್ತಿರುವ ಈ ಪಂದ್ಯ ಉದ್ಘಾಟನಾ ಪಂದ್ಯ ಮಾತ್ರವಲ್ಲ, ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಈಗಾಗಲೇ ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಗೆದ್ದುಕೊಂಡಿದೆ. ಹೀಗಾಗಿ ಫಾಫ್ ಡುಪ್ಲಿಸಿಸ್ ತಂಡದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಎಂಎಸ್ ಧೋನಿ ತ್ಯಜಿಸಿದ್ದಾರೆ. ರುತುರಾಜ್ ಗಾಯಕ್ವಾಡ್‌ಗೆ ನಾಯಕತ್ವ ನೀಡಲಾಗಿದೆ. ಇದೇ ರೀತಿ ಈ ಹಿಂದೆ ಪ್ರಯತ್ನ ಮಾಡಿ ರವೀಂದ್ರ ಜಡೇಜಾಗೆ ನಾಯಕತ್ವ ನೀಡಿ ಸಿಎಸ್‌ಕೆ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಹೀಗಾಗಿ ಟೂರ್ನಿ ಆರಂಭದಲ್ಲೇ ಸಿಎಸ್‌ಕೆಗೆ ನಡುಕ ಶುರುವಾಗಿದೆ.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಬೌಲರ್‌ಗೆ ಒಂದು ಓವರ್‌ನಲ್ಲಿ ಎರಡು ಬೌನ್ಸರ್ ಎಸೆಯಲು ಅವಕಾಶ ಮಾಡಲಾಗಿದೆ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಮತ್ತಷ್ಟು ರೋಚಕವಾಗಿಸಲು ಬಿಸಿಸಿಐ ಎಲ್ಲಾ ತಯಾರಿ ನಡೆಸಿದೆ. 

ಧೋನಿ ಪದತ್ಯಾಗದ ಬಳಿಕ ಐಪಿಎಲ್‌ನ ಅತ್ಯಂತ ಅನುಭವಿ ನಾಯಕ ಶ್ರೇಯಸ್‌ ಅಯ್ಯರ್!

ಆರ್‌ಸಿಬಿ ಹಳೆ ಟ್ರಾಕ್ ರೆಕಾರ್ಡ್ ಕುರಿತು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಈಗಾಗಲೇ ಮಹಿಳಾ ತಂಡದ ಗೆಲುವಿನ ಖುಷಿ, ಸಮತೋಲನ ತಂಡ, ಹೊಸ ಆವೃತ್ತಿಯಿಂಂದ ಪುರುಷರ ತಂಡ ಕೂಡ ಉತ್ಸಾಹದಲ್ಲಿದೆ. ಚೆನ್ನೈನಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ 8 ಬಾರಿ ಮುಖಾಮಮುಖಿಯಾಗಿದೆ. 1 ಬಾರಿ ಆರ್‌ಸಿಬಿ ಗೆಲುವು ದಾಖಲಿಸಿದ್ದರೆ, ಇನ್ನುಳಿದದ 7 ಪಂದ್ಯದಲ್ಲಿ ಚೆನ್ನೈ ತವರಿನಲ್ಲಿ  ಸಿಎಸ್‌ಕೆ ಗೆಲುವು ಕಂಡಿದೆ. ಈ ಬಾರಿ ರುತುರಾಜ್ ನಾಯಕತ್ವದಲ್ಲಿ ಸಿಎಸ್‌ಕೆ ಅಖಾಡಕ್ಕಿಳಿದಿದೆ. ಹೀಗಾಗಿ ಚೆನ್ನೈ ತಂಡಕ್ಕೆ ಸವಾಲು ಹೆಚ್ಚಾಗಿದೆ.
 

click me!