ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ, ತಮ್ಮ ಪುತ್ರನನ್ನು ಭೂಮಿಗೆ ಸ್ವಾಗತಿಸುವ ಸಲುವಾಗಿ ತವರಿನಲ್ಲಿ ನಡೆದ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಗೆ ಗೈರಾಗಿದ್ದರು. ಕಳೆದ ತಿಂಗಳ 15ರಂದು ಅನುಷ್ಕಾ ಶರ್ಮಾ ಅಕಾಯ್ ಕೊಹ್ಲಿಗೆ ಜನ್ಮ ನೀಡಿದ್ದರು.
ಚೆನ್ನೈ(ಮಾ.22): ಬರೋಬ್ಬರಿ ಎರಡು ತಿಂಗಳುಗಳ ಬಳಿಕ ವಿರಾಟ್ ಕೊಹ್ಲಿ ಇದೀಗ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇಂದಿನಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಚೆಪಾಕ್ ಮೈದಾನ ಆತಿಥ್ಯವನ್ನು ವಹಿಸಿದೆ.
ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ, ತಮ್ಮ ಪುತ್ರನನ್ನು ಭೂಮಿಗೆ ಸ್ವಾಗತಿಸುವ ಸಲುವಾಗಿ ತವರಿನಲ್ಲಿ ನಡೆದ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಗೆ ಗೈರಾಗಿದ್ದರು. ಕಳೆದ ತಿಂಗಳ 15ರಂದು ಅನುಷ್ಕಾ ಶರ್ಮಾ ಅಕಾಯ್ ಕೊಹ್ಲಿಗೆ ಜನ್ಮ ನೀಡಿದ್ದರು. ಇದೀಗ ಸುಮಾರು ಎರಡು ತಿಂಗಳ ಬಿಡುವಿನ ಬಳಿಕ ವಿರಾಟ್ ಕೊಹ್ಲಿ, ಕ್ರಿಕೆಟ್‌ಗೆ ವಾಪಾಸ್ಸಾಗಿದ್ದು, 2024ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
undefined
ಆರ್‌ಸಿಬಿಗೆ ಕಪ್ ಗೆದ್ದು ಇದೀಗ ಆಸೀಸ್ ಪರ ಹೊಸ ಇತಿಹಾಸ ನಿರ್ಮಿಸಿದ ಪೆರ್ರಿ..!
ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಉದ್ಘಾಟನಾ ಪಂದ್ಯವು ಇಂದು ಸಂಜೆ 8 ಗಂಟೆಯಿಂದ ಆರಂಭವಾಗಲಿದೆ. ಇದೀಗ ವಿರಾಟ್ ಅಭಿಮಾನಿಗಳು ಮತ್ತೊಮ್ಮೆ ಕೊಹ್ಲಿ ಆಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಕ್ರಿಕೆಟ್ ಆಡುವಾಗಲೆಲ್ಲಾ ಅವರ ಪತ್ನಿ ಅನುಷ್ಕಾ ಶರ್ಮಾ ಮೈದಾನಕ್ಕೆ ಬಂದು ತಮ್ಮ ಪತಿಯನ್ನು ಹುರಿದುಂಬಿಸುತ್ತಾ ಬಂದಿದ್ದನ್ನು ನಾವು ನೀವೆಲ್ಲರೂ ನೋಡಿದ್ದೇವೆ. ಅದೇ ರೀತಿ ಈ ಬಾರಿ ಕೂಡಾ ಅನುಷ್ಕಾ ಶರ್ಮಾ ಮೈದಾನಕ್ಕೆ ಬಂದು ಕೊಹ್ಲಿಗೆ ಜೋಶ್ ತುಂಬುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ಈ ಕುತೂಹಲದ ಪ್ರಶ್ನೆಗೆ ಉತ್ತರ ಹೌದು ಎನ್ನುತ್ತಿವೆ ಹಲವು ಸುದ್ದಿಮೂಲಗಳು. ಹಾಗಂತ ಅನುಷ್ಕಾ ಶರ್ಮಾ ಸಿಎಸ್‌ಕೆ ಎದುರಿನ ಉದ್ಘಾಟನಾ ಪಂದ್ಯಕ್ಕೆ ಮೈದಾನಕ್ಕೆ ಬರುತ್ತಿಲ್ಲ. ಅನುಷ್ಕಾ ಶರ್ಮಾ ತಮ್ಮ ಗಂಡು ಮಗು ಅಕಾಯ್‌ಗೆ ಜನ್ಮನೀಡಿ ಇನ್ನು ಕೇವಲ ಒಂದೂವರೆ ತಿಂಗಳಷ್ಟೇ ಕಳೆದಿದೆ. ಸದ್ಯ ಅನುಷ್ಕಾ ಶರ್ಮಾ ತಮ್ಮ ತಾಯಿ ಹಾಗೂ ಮಗಳು ವಮಿಕಾ ಜತೆ ಲಂಡನ್‌ನಲ್ಲಿದ್ದಾರೆ. ಆದರೆ ಒಂದಲ್ಲಾ ಒಂದು ಐಪಿಎಲ್ ಮ್ಯಾಚ್ ಅನ್ನು ಮೈದಾನಕ್ಕೆ ಬಂದು ಕೊಹ್ಲಿಯನ್ನು ಅನುಷ್ಕಾ ಹುರಿದುಂಬಿಸಲಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಚೆನ್ನೈನಲ್ಲಿ RCB ಕೊನೆ ಸಲ CSK ವಿರುದ್ಧ ಗೆದ್ದಾಗ... ಆಗಿನ್ನೂ ವಾಟ್ಸ್‌ಆ್ಯಪ್ ಇರಲಿಲ್ಲ..!
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹಲವು ವರ್ಷಗಳ ಡೇಟಿಂಗ್ ಬಳಿಕ 2018ರಲ್ಲಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿ ಈ ಸೆಲಿಬ್ರಿಟಿ ಜೋಡಿ 2021ರಲ್ಲಿ ವಮಿಕಾ ಎನ್ನುವ ಹೆಣ್ಣು ಮಗಳನ್ನು ತಮ್ಮ ಸುಂದರ ಕುಟುಂಬಕ್ಕೆ ಸ್ವಾಗತಿಸಿದ್ದರು.