RCB ತಂಡ 9 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡನ್ನ ಮಾತ್ರ. ಉಳಿದ ಐದು ಪಂದ್ಯಗಳನ್ನ ಗೆದ್ರೆ 14 ಪಾಯಿಂಟ್ ಗಳಿಸಲಿದೆ. ಯಾವುದಾದ್ರೂ ಒಂದು ತಂಡ 14 ಅಂಕಗಳಿಸಿ, 4ನೇ ತಂಡವಾಗಿ ಪ್ಲೇ ಆಫ್ಗೆ ಎಂಟ್ರಿ ಪಡೆಯಲಿದೆ.
ಅಹಮದಾಬಾದ್(ಏ.28) ಐಪಿಎಲ್‌ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ. ಎರಡು ತಂಡಕ್ಕೂ ಡು ಆರ್ ಡೈ ಮ್ಯಾಚ್. ಆರ್‌ಸಿಬಿಯು ಉಳಿದ ಐದು ಪಂದ್ಯ ಗೆದ್ದು ಪ್ಲೇ ಆಫ್ಗೇರಲು ಪ್ಲಾನ್ ಮಾಡುತ್ತಿದೆ. ಆದ್ರೆ ಅದಕ್ಕೆ ಇಂದೇ ಅಡ್ಡಗಾಲು ಹಾಕಲು ಗುಜರಾತ್ ಟೈಟನ್ಸ್ ಪ್ಲಾನ್ ಮಾಡಿದೆ. ಲಕ್ಷ ಪ್ರೇಕ್ಷಕರ ಎದುರು ಯಾರದ್ದು ಗೆಲುವು ಅನ್ನೋ ಕುತೂಹಲವಿದೆ.
ಮೋದಿ ಸ್ಟೇಡಿಯಂನಲ್ಲಿಂದು ಆರ್‌ಸಿಬಿ-ಗುಜರಾತ್ ಫೈಟ್
ಅದೇನೋ ಹೇಳ್ತಾರಲ್ಲ, ಟ್ರೈನ್ ಹೋದ್ಮೇಲೆ ಟಿಕೆಟ್ ತೆಗೆದುಕೊಂಡ್ರು ಅಂತ. ಹಾಗೆ ಆಗಿದೆ RCB ಕಥೆ. ಪ್ಲೇ ಆಫ್ ರೇಸ್ನಿಂದ ಬಹುತೇಕ ಹೊರಬಿದ್ದಿರುವ RCB, ಈಗ ಗೆಲುವಿನ ಲಯ ಕಂಡುಕೊಂಡಿದೆ. ಆದ್ರೆ ಉಳಿದ ಐದಕ್ಕೆ ಐದು ಪಂದ್ಯ ಗೆದ್ದರೂ ಪ್ಲೇ ಆಫ್ಗೆ ಎಂಟ್ರಿ ಪಡೆಯುತ್ತೆ ಅನ್ನೋ ಖಚಿತತೆ ಇಲ್ಲ. ಆದ್ರೂ ಇನ್ನುಳಿದ ಐದು ಪಂದ್ಯಗಳನ್ನ ಗೆಲ್ಲಲು ಎದುರು ನೋಡ್ತಿದೆ. ಅದರಲ್ಲಿ ಒಂದು ಪಂದ್ಯವನ್ನ ಇಂದು ಆಡ್ತಿದೆ. ಅಹಮದಾಬಾದ್ನಲ್ಲಿ ಇಂದು ಮಧ್ಯಾಹ್ನ 3.30ರಿಂದ RCB ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿಯಾಗ್ತಿವೆ. ಈ ಸೀಸನ್ನಲ್ಲಿ ಈ ಎರಡು ಟೀಮ್ಸ್ ಪೇಸ್ ಟು ಪೇಟ್ ಆಗ್ತಿರೋದು ಇದೇ ಫಸ್ಟ್ ಟೈಮ್.
RCB ತಂಡ 9 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡನ್ನ ಮಾತ್ರ. ಉಳಿದ ಐದು ಪಂದ್ಯಗಳನ್ನ ಗೆದ್ರೆ 14 ಪಾಯಿಂಟ್ ಗಳಿಸಲಿದೆ. ಯಾವುದಾದ್ರೂ ಒಂದು ತಂಡ 14 ಅಂಕಗಳಿಸಿ, 4ನೇ ತಂಡವಾಗಿ ಪ್ಲೇ ಆಫ್ಗೆ ಎಂಟ್ರಿ ಪಡೆಯಲಿದೆ. ಆ ತಂಡ ನಮ್ಮದೇ ಯಾಕೆ ಆಗಬಾರದು ಅಂತ ಲೆಕ್ಕಾಚಾರ ಹಾಕುತ್ತಿದೆ. ಅಲ್ಲಿಗೆ RCB ಐದು ಪಂದ್ಯಗಳನ್ನ ಭಾರಿ ಅಂತರದಿಂದ ಗೆಲ್ಲುವುದರ ಜೊತೆ ಅದೃಷ್ಟ ಕೈ ಹಿಡಿಯಬೇಕು. ಆಗ ಮಾತ್ರ ಪ್ಲೇ ಆಫ್ಗೆ ಎಂಟ್ರಿ ಪಡೆಯಲಿದೆ. ಕ್ರಿಕೆಟ್‌ನನಲ್ಲಿ ಏನು ಬೇಕಾದರು ಆಗಬಹುದು. 14 ಅಂಕಗಳಿಸಿದ ತಂಡ ಪ್ಲೇ ಆಫ್‌ಗೆ ಹೋದ ಉದಾಹರಣೆಗಳು ಸಾಕಷ್ಟಿವೆ.
ಫಾರ್ಮ್‌ಗೆ ಮರಳಿದ್ದಾರೆ ಎಲ್ಲಾ ಆಟಗಾರರು!
RCB ತಂಡದಲ್ಲಿ ಕೆಲ ಆಟಗಾರರು ಫಾರ್ಮ್ನಲ್ಲಿದ್ದರೆ, ಕೆಲವರು ಕಳಪೆ ಫಾರ್ಮ್ನಲ್ಲಿದ್ದರು. ಆದ್ರೀಗ ಎಲ್ಲರೂ ಫಾರ್ಮ್ಗೆ ಬಂದಿದ್ದಾರೆ. ಈಗ ರೆಡ್ ಆರ್ಮಿ ಪಡೆ ಬಲಿಷ್ಠವಾಗಿ ಕಾಣುತ್ತಿದೆ. ಕೊಹ್ಲಿ, ಫಾಫ್, ಜಾಕ್ಸ್, ರಜತ್, ಗ್ರೀನ್, DK ಹೀಗೆ ಎಲ್ಲರೂ ರನ್ ಹೊಳೆಯನ್ನೇ ಹರಿಸ್ತಿದ್ದಾರೆ. ಅದರಲ್ಲೂ ರಜತ್ ಪಾಟೀದರ್, ಮೂರು ಹಾಫ್ ಸೆಂಚುರಿಗಳು ಎಲ್ಲರನ್ನೂ ದಂಗು ಬಡಿಸಿವೆ. 8 ಇನಿಂಗ್ಸ್‌ನಿಂದ 211 ರನ್ ಗಳಿಸಿರುವ ರಜತ್, 175ರ ಸ್ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಡಿಕೆ ಸ್ಟ್ರೈಕ್ರೇಟ್ 195 ಇದೆ. ಇನ್ನು ವಿರಾಟ್ ಕೊಹ್ಲಿ 430 ರನ್ ಹೊಡೆದಿದ್ದು, ಇಂದು 500 ರನ್ ರೀಚ್ ಆಗಲಿದ್ದಾರೆ. ಕಿಂಗ್ ಕೊಹ್ಲಿ, ಆರೆಂಜ್ ಕ್ಯಾಪ್ ಬಿಡುವಂತೆ ಕಾಣ್ತಿಲ್ಲ.
ಮ್ಯಾಕ್ಸ್‌ವೆಲ್ ವಾಪಾಸ್, ಇಂಡಿಯನ್ ಬೌಲರ್ಸ್ ಕಣಕ್ಕೆ..!
ಕಳೆದ 9 ಪಂದ್ಯಗಳಲ್ಲಿ ಮೂವರು ವಿದೇಶಿ ಬೌಲರ್ಸ್ ಆಡಿಸಿದ್ರೂ ಏನು ಪ್ರಯೋಜನವಾಗಲಿಲ್ಲ. ಟಾಪ್ಲೆ, ಜೋಸೆಫ್, ಫರ್ಗ್ಯೂಸನ್ ಹೀಗೆ ಮೂವರು ವಿಕೆಟ್ ಪಡೆಯುವುದಕ್ಕಿಂತ ಧಾರಾಳವಾಗಿ ರನ್ ನೀಡಿದ್ದೇ ಜಾಸ್ತಿ. ಹಾಗಾಗಿ ಇಂದು ಬರೀ ಇಂಡಿಯನ್ ಬೌಲರ್ಗಳೊಂದಿಗೆ ಆಡಲು RCB, ಪ್ಲಾನ್ ಮಾಡುತ್ತಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಕಮ್‌ಬ್ಯಾಕ್ ಮಾಡಲು ರೆಡಿಯಾಗಿದ್ದು, ಲಾಕಿ ಫರ್ಗ್ಯೂಸನ್ ಡ್ರಾಪ್ ಆಗಲಿದ್ದಾರೆ. ಆಗ ಬರೀ ಭಾರತೀಯ ಬೌಲರ್‌ಗಳನ್ನ ಆಡಿಸಬೇಕಾಗುತ್ತೆ. ಇದಕ್ಕೆ ಟೀಂ ಮ್ಯಾನೇಜ್ಮೆಂಟ್ ಸಿದ್ದತೆ ನಡೆಸಿದೆ.
ಗುಜರಾತ್ ಟೈಟಾನ್ಸ್‌ಗೂ ಡು ಆರ್ ಡೈ ಮ್ಯಾಚ್
ಗುಜರಾತ್ ಟೈಟನ್ಸ್ ತಂಡ 9 ಮ್ಯಾಚ್ನಲ್ಲಿ ನಾಲ್ಕು ಗೆದ್ದು ಐದು ಸೋತಿದೆ. ಉಳಿದ ಐದರಲ್ಲಿ ಕನಿಷ್ಠ ನಾಲ್ಕನ್ನ ಗೆಲ್ಲಬೇಕು. ಹಾಗಾಗಿ ಪ್ರತಿ ಪಂದ್ಯವೂ ಟೈಟನ್ಸ್ ಪಾಲಿಗೆ ಡು ಆರ್ ಡೈ ಎನಿಸಿದೆ. ಗುಜರಾತ್ ಅಸ್ಥಿರ ಪ್ರದರ್ಶನ ನೀಡುತ್ತಿದ್ದು, ತವರಿನಲ್ಲಿ ಆಡಿರೋ ನಾಲ್ಕರಲ್ಲಿ ಎರಡು ಗೆದ್ದು ಎರಡು ಸೋತಿದೆ. ಈಗ ಇಂದು ಗೆಲ್ಲಬೇಕಾದ ಒತ್ತಡದಲ್ಲಿದೆ. ಸಾಂಘಿಕ ಪ್ರದರ್ಶನ ನೀಡಿದ್ರೆ ಅಷ್ಟೇ ಗೆಲುವು ಸಾಧ್ಯ. ಇಲ್ಲವಾದ್ರೆ ತವರಿನಲ್ಲಿ ಮತ್ತೊಂದು ಸೋಲು ಅನುಭವಿಸಿದ್ರೂ ಆಶ್ಚರ್ಯವಿಲ್ಲ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್