IPL 2024 ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿಂದು ಸನ್‌ರೈಸರ್ಸ್ ಹೈದರಾಬಾದ್ ಚಾಲೆಂಜ್

By Naveen Kodase  |  First Published Apr 28, 2024, 10:53 AM IST

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ 4 ಬಾರಿ ಮುಖಾಮುಖಿಯಾಗಿದ್ದು, ನಾಲ್ಕು ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವಿನ ನಗೆ ಬೀರಿದೆ. ಇಂದಾದರೂ ಚೆನ್ನೈಗೆ ತವರಿನಲ್ಲಿ ಆರೆಂಜ್ ಆರ್ಮಿ ಸೋಲಿನ ರುಚಿ ತೋರಿಸುತ್ತಾ ಕಾದು ನೋಡಬೇಕಿದೆ. 


ಚೆನ್ನೈ(ಏ.28): ಹಾಲಿ ಚಾಂಪಿಯನ್‌ ಪಟ್ಟದೊಂದಿಗೆ ಈ ಬಾರಿ ಐಪಿಎಲ್‌ಗೆ ಕಾಲಿರಿಸಿದ್ದರೂ ಅಸ್ಥಿರ ಆಟದಿಂದಾಗಿ ಆತ್ಮವಿಶ್ವಾಸ ಕಳೆದುಕೊಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಭಾನುವಾರ ಸನ್‌ರೈಸರ್ಸ್‌ ಹೈದ್ರಾಬಾದ್‌ ಸವಾಲು ಎದುರಾಗಲಿದೆ. ಚೆನ್ನೈ ತಂಡ ಸತತ 2 ಸೋಲಿನ ಸರಪಳಿಯನ್ನು ತವರಿನಲ್ಲಿ ಕಳಚುವ ವಿಶ್ವಾಸದಲ್ಲಿದ್ದರೆ, ಹೈದ್ರಾಬಾದ್‌ ಮತ್ತೆ ಗೆಲುವಿನ ಹಳಿಗೆ ಮರಳುವ ಕಾತರದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 8ರಲ್ಲಿ 4 ಗೆದ್ದಿದ್ದರೆ, ಸನ್‌ರೈಸರ್ಸ್‌ 8ರಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ತನ್ನದೇ ತವರಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 210 ರನ್‌ ಗುರಿ ಬೆನ್ನತ್ತಿರುವುದು ಚೆನ್ನೈನ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿದೆ. ಅತ್ತ ಸನ್‌ರೈಸರ್ಸ್‌ ತನ್ನ ಬ್ಯಾಟಿಂಗ್‌ ಮೂಲಕವೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದೆ. ಆದರೆ ಮೊದಲು ಬ್ಯಾಟ್‌ ಮಾಡಿದಾಗ ಬೃಹತ್‌ ಮೊತ್ತ ಕಲೆಹಾಕುವ ತಂಡ, ದೊಡ್ಡ ಮೊತ್ತವನ್ನು ಬೆನ್ನತ್ತಲಾಗದೆ ಸೋಲುವುದು ತಂಡದ ಮೈನಸ್‌ ಪಾಯಿಂಟ್‌.

Latest Videos

undefined

IPL 2024 ನರೇಂದ್ರ ಸ್ಟೇಡಿಯಂನಲ್ಲಿಂದು ಆರ್‌ಸಿಬಿಗೆ ಗುಜರಾತ್ ಟೈಟಾನ್ಸ್ ಚಾಲೆಂಜ್‌

ರಾಯಲ್ ಚಾಲೆಂಂಜರ್ಸ್ ಬೆಂಗಳೂರು ಎದುರು 35 ರನ್ ಅಂತರದ ಸೋಲು ಕಾಣುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮುಖಭಂಗ ಅನುಭವಿಸಿದೆ. ಇದೀಗ ಕಳೆದ ಪಂದ್ಯದ ಸೋಲಿನ ಬಳಿಕ ಎಚ್ಚೆತ್ತುಕೊಂಡು ಗೆಲುವಿನ ಹಳಿಗೆ ಮರಳಲು ಪ್ಯಾಟ್ ಕಮಿನ್ಸ್ ಪಡೆ ಸಜ್ಜಾಗಿದೆ.

IPL 2024: ಲಖನೌ ಎದುರು ರಾಜಸ್ಥಾನ ರಾಯಲ್ಸ್‌ಗೆ ಭರ್ಜರಿ ಜಯ, ಪ್ಲೇ ಆಫ್ ಟಿಕೆಟ್ ಬಹುತೇಕ ಕನ್ಫರ್ಮ್

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ 4 ಬಾರಿ ಮುಖಾಮುಖಿಯಾಗಿದ್ದು, ನಾಲ್ಕು ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವಿನ ನಗೆ ಬೀರಿದೆ. ಇಂದಾದರೂ ಚೆನ್ನೈಗೆ ತವರಿನಲ್ಲಿ ಆರೆಂಜ್ ಆರ್ಮಿ ಸೋಲಿನ ರುಚಿ ತೋರಿಸುತ್ತಾ ಕಾದು ನೋಡಬೇಕಿದೆ. 

ಸಂಭವನೀಯ ಆಟಗಾರರ ಪಟ್ಟಿ:

ಸನ್‌ರೈಸರ್ಸ್ ಹೈದರಾಬಾದ್:

ಅಭಿಷೇಕ್ ಶರ್ಮಾ, ಟ್ರ್ಯಾವಿಸ್ ಹೆಡ್, ಏಯ್ಡನ್ ಮಾರ್ಕ್‌ರಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೇನ್, ಅಬ್ದುಲ್ ಸಮದ್, ಶಹಬಾಜ್ ಅಹಮದ್, ಪ್ಯಾಟ್ ಕಮಿನ್ಸ್(ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಜಯದೇವ್ ಉನಾದ್ಕತ್.

ಚೆನ್ನೈ ಸೂಪರ್ ಕಿಂಗ್ಸ್‌:

ಋತುರಾಜ್ ಗಾಯಕ್ವಾಡ್(ನಾಯಕ), ಅಜಿಂಕ್ಯ ರಹಾನೆ, ಡೇರಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಮೋಯಿನ್ ಅಲಿ, ಎಂ ಎಸ್ ಧೋನಿ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮುಸ್ತಾಫಿಜುರ್ ರೆಹಮಾನ್, ಮಥೀಶ್ ಪತಿರಣ

ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.
 

click me!