ಈ ಬಾರಿಯ IPLನಲ್ಲಿ ಮುಂಬೈ ಇಂಡಿಯನ್ಸ್ ಫ್ಲಾಪ್ ಶೋ ನೀಡ್ತಿದೆ. ಈಗಾಗ್ಲೇ ಪ್ಲೇ ಆಫ್ ರೇಸ್ನಿಂದ ಔಟ್ ಆಗಿದೆ. ತಂಡದ ಹೀನಾಯ ಪ್ರದರ್ಶನಕ್ಕೆ ಹಾರ್ದಿಕ್ ಪಾಂಡ್ಯ ನಾಯಕತ್ವವೇ ಪ್ರಮುಖ ಕಾರಣ ಎನ್ನಲಾಗ್ತಿದೆ. ಮುಂಬೈ ಟೀಮ್ ಎರಡೂ ಬಣಗಳಾಗಿ ಹೊಡೆದಿದೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಕುಮಾರ್ ಯಾದವ್ ಒಂದು ಬಣವಾದ್ರೆ, ಹಾರ್ದಿಕ್ ಪಾಂಡ್ಯನದ್ದೇ ಮತ್ತೊಂದು ಬಣವಾಗಿದೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಲ್ಲವೂ ಸರಿ ಇಲ್ಲ. ರೋಹಿತ್ ಶರ್ಮಾ ತಂಡ ಬಿಡ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಾನೆ ಇತ್ತು. ಆದ್ರೀಗ, ಅದಕ್ಕೆ ಸಾಕ್ಷಿ ಸಿಕ್ಕಿದೆ. ಇದನ್ನ ನೋಡಿದ್ರೆ, ಹಿಟ್ಮ್ಯಾನ್ ಮುಂದಿನ ಸೀಸನ್ನಲ್ಲಿ ಬೇರೆ ತಂಡದ ಪರ ಬ್ಯಾಟ್ ಬೀಸೋದು ಪಕ್ಕಾ ಅನ್ಸುತ್ತೆ. ಅಷ್ಟಕ್ಕೂ ಏನದು ಸಾಕ್ಷಿ ಅಂತೀರಾ..? ಈ ಸ್ಟೋರಿ ನೋಡಿ.
ಈ IPL ನಂತರ ಮುಂಬೈಗೆ ರೋಹಿತ್ ಗುಡ್‌ಬೈ..?
ಈ ಬಾರಿಯ IPLನಲ್ಲಿ ಮುಂಬೈ ಇಂಡಿಯನ್ಸ್ ಫ್ಲಾಪ್ ಶೋ ನೀಡ್ತಿದೆ. ಈಗಾಗ್ಲೇ ಪ್ಲೇ ಆಫ್ ರೇಸ್ನಿಂದ ಔಟ್ ಆಗಿದೆ. ತಂಡದ ಹೀನಾಯ ಪ್ರದರ್ಶನಕ್ಕೆ ಹಾರ್ದಿಕ್ ಪಾಂಡ್ಯ ನಾಯಕತ್ವವೇ ಪ್ರಮುಖ ಕಾರಣ ಎನ್ನಲಾಗ್ತಿದೆ. ಮುಂಬೈ ಟೀಮ್ ಎರಡೂ ಬಣಗಳಾಗಿ ಹೊಡೆದಿದೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಕುಮಾರ್ ಯಾದವ್ ಒಂದು ಬಣವಾದ್ರೆ, ಹಾರ್ದಿಕ್ ಪಾಂಡ್ಯನದ್ದೇ ಮತ್ತೊಂದು ಬಣವಾಗಿದೆ.
ಇನ್ನು ರೋಹಿತ್ ಶರ್ಮಾ, ಈ ಸೀಸನ್ ನಂತರ ಮುಂಬೈಗೆ ಗುಡ್‌ಬೈ ಹೇಳೋದು ಫಿಕ್ಸ್ ಆಗಿದೆ. ಅದಕ್ಕೆ ಈ ವೀಡಿಯೋನೇ ಸಾಕ್ಷಿಯಾಗಿದೆ.
ಈ ವೀಡಿಯೋ ನಿನ್ನೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ - ಮುಂಬೈ ಇಂಡಿಯನ್ಸ್ ಪಂದ್ಯಕ್ಕೂ ಮುನ್ನ ಶೂಟ್ ಮಾಡಲಾಗಿದೆ. ಇದ್ರಲ್ಲಿ ರೋಹಿತ್ ಶರ್ಮಾ ಮತ್ತು KKR ಅಸಿಸ್ಟೆಂಟ್ ಕೋಚ್ ಅಭಿಷೇಕ್ ನಾಯರ್ ಜೊತೆ ಮಾತನಾಡುತ್ತಾ, ಈ IPL ನಂತರ ಮುಂಬೈ ಬಿಡೋ ಮಾತುಗಳನ್ನಾಡಿದ್ದಾರೆ. ಅಷ್ಟಕ್ಕೂ ರೋಹಿತ್ ಏನ್ ಹೇಳಿದ್ದಾರೆ ಅಂತ ನೋಡೋದಾದ್ರೆ.
ಮಡದಿ ಮಗನ ಜೊತೆ ಇರ್ಫಾನ್ ಪಠಾಣ್ ಮಸ್ತಿ, ಹೆಂಡ್ತಿ ಬುರ್ಖಾ ಹಾಕದ್ದಕ್ಕೆ ನೆಟ್ಟಿಗರ ತರಾಟೆ..!
ಒಂದೊಂದಾಗಿ ಎಲ್ಲಾ ಬದಲಾಗ್ತಿದೆ, ಇದೆಲ್ಲಾ ಅವರಿಗೆ ಬಿಟ್ಟದ್ದೂ. ನಾನು ಯಾವುದರ ಬಗ್ಗೇನೂ ತಲೆಕೆಡಿಸಿಕೊಳ್ತಿಲ್ಲ. ಏನೇ ಆದ್ರೂ ಅದು ನನ್ನ ಮನೆ, ನಾನು ನಿರ್ಮಿಸಿದ ದೇವಾಲಯ, ನಂದೇನಿದೆ ಭಾಯ್, ಇದೇ ಲಾಸ್ಟ್
ನೋಡಿದ್ರಲ್ಲಾ ರೋಹಿತ್ ಆಡಿದ ಮಾತುಗಳನ್ನ, ಇದನ್ನ ನೋಡಿದ್ರೆ ಹಿಟ್ಮ್ಯಾನ್ ಮುಂದಿನ ಸೀಸನ್ನಲ್ಲಿ ಬೇರೆ ತಂಡದ ಪರ ಬ್ಯಾಟ್ ಬೀಸಲು ಫಿಕ್ಸ್ ಆಗಿದ್ದಾರೆ ಅನ್ನೋದಂತೂ ಪಕ್ಕಾ.! ಈ ವೀಡಿಯೋವನ್ನ KKR ತನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತ್ತು. ಆದ್ರೆ, ಇದು ಎಲ್ಲೆಡೆ ವೈರಲ್ ಆಗ್ತಿದ್ದಂತೆ ಡಿಲೀಟ್ ಮಾಡಲಾಗಿದೆ.
CSK ಸೋಲುತ್ತಿದ್ದಂತೆಯೇ RCB ಪ್ಲೇ ಆಫ್ ಕನಸಿಗೆ ಆನೆ ಬಲ..! ಇಲ್ಲಿದೆ ನೋಡಿ ಬೆಂಗಳೂರು ತಂಡಕ್ಕೆ 5 ರೀತಿ ಅವಕಾಶ
ಹಿಟ್‌ಮ್ಯಾನ್ ಮುಂಬೈ ಇಂಡಿಯನ್ಸ್‌ನ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್ ..!
ರೋಹಿತ್ ಶರ್ಮಾ..! IPLನ ಮುಂಬೈ ಇಂಡಿಯನ್ಸ್‌ನ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್..! ಒಂದಲ್ಲ, ಎರಡಲ್ಲ 5 ಬಾರಿ ಮುಂಬೈಗೆ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಇಷ್ಟೆಲ್ಲಾ ಇದ್ರು, ಫ್ರಾಂಚೈಸಿ, ರೋಹಿತ್‌ರನ್ನ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿದೆ. ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯರನ್ನ ಕರೆತಂದು ನಾಯಕನ ಸ್ಥಾನ ನೀಡಿದೆ. ರೋಹಿತ್ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಬಂದು ಕೂತಿದ್ದಾರೆ. ಹಾರ್ದಿಕ್‌ರನ್ನ ಮುಂಬೈ ಇಂಡಿಯನ್ಸ್ ನಾಯಕರಾಗಿ ರೋಹಿತ್ ಫ್ಯಾನ್ಸ್ ಒಪ್ಪಿಕೊಳ್ಳಲು ರೆಡಿಯಾಗಿಲ್ಲ. ರೋಹಿತ್‌ಗೂ ಮುಂಬೈ ತಂಡದಲ್ಲಿರಲು ಮನಸ್ಸಿಲ್ಲ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
