IPL 2024 ಮುಂಬೈ ವಿರುದ್ಧ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್, ಧವನ್ ಅಲಭ್ಯ-1 ಬದಲಾವಣೆ!

By Suvarna NewsFirst Published Apr 18, 2024, 7:03 PM IST
Highlights

ಅಂಕಪಟ್ಟಿಯಲ್ಲಿ 8 ಮತ್ತು 9ನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಹೋರಾಟಕ್ಕೆ ಸಜ್ಜಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

ಚಂಡಿಘಡ(ಏ.18)  ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ಈ ಐಪಿಎಲ್ ಟೂರ್ನಿಯಲ್ಲಿ ಗೆಲುವಿಗಿಂತ ಹೆಚ್ಚು ಸೋಲನ್ನೇ  ಕಂಡಿದೆ. ಇದೀಗ  ಚಂಡೀಘದಲ್ಲಿ ಈ ತಂಡಗಳು ಮುಖಾಮುಖಿಯಾಗುತ್ತಿದೆ.  ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ರೀಲೆ ಬದಲು ಜಾನಿ ತಂಡ ಸೇರಿಕೊಂಡಿದ್ದಾರೆ. ಇತ್ತ ಶಿಖರ್ ಧವನ್ ಇಂಜುರಿಯಿಂದ ಚೇತರಿಸಿಕೊಂಡಿಲ್ಲ. 

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ರೀಲೆ ರೂಸೊ, ಪ್ರಭಸಿಮ್ರನ್ ಸಿಂಗ್, ಸ್ಯಾಮ್ ಕುರನ್(ನಾಯಕ), ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಅಶುತೋಶ್ ಶರ್ಮಾ, ಹರ್ಪ್ರೀತ್ ಬ್ರಾರ್,  ಹರ್ಷಲ್ ಪಟೇಲ್, ಕಾಗಿಸೋ ರಬಾಡ, ಅರ್ಶದೀಪ್ ಸಿಂಗ್ 

ಟೀಮ್‌ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮ ಬಳಿ ಇರುವ 7 ದುಬಾರಿ ವಸ್ತುಗಳಿವು!

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮೊಹಮ್ಮದ್ ನಬಿ, ಗೆರಾಲ್ಡ್ ಕೊಯೆಟ್ಜ್, ಶ್ರೇಯಸ್ ಗೋಪಾಲ್, ಜಸ್ಪ್ರೀತ್ ಬುಮ್ರಾ 

ಟಾಸ್ ಸೋತಿರುವ ಮುಂಬೈ ಇಂಡಿಯನ್ಸ್ ಸಂತಸ ವ್ಯಕ್ತಪಡಿಸಿದೆ. ನಾವು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೇವು. ಇದೀಗ ಟಾಸ್ ಸೋತಿರುವ ನಮಗೆ  ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದೆ. ಕೆಲ ಪಂದ್ಯಗಳನ್ನು ಸೋತಿದ್ದೇವೆ. ಐಪಿಎಲ್ ಪ್ರತಿ ಬಾರಿ ಪರೀಕ್ಷೆಮಾಡುತ್ತದೆ. ನಮ್ಮ ಆಟ ಮುಗಿದಿಲ್ಲ. ಬೌನ್ಸ್ ಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. 

ಚಾಂಪಿಯನ್ ಕೀರಿಟ ಮುಡಿಗೇರಿಸಿಕೊಂಡು ದಾಖಲೆ ಬರೆದಿರುವ ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವಿಗಾಗಿ ಪ್ರಯಾಸ ಪಡುತ್ತಿದೆ. ಈಗಾಗಲೇ ಆಡಿರುವ 6 ಪಂದ್ಯದಲ್ಲಿ ಕೇವಲ 2 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಕಿಂಗ್ಸ್ ಕೂಡ 6ರಲ್ಲಿ 2 ಗೆಲುವು ಕಂಡಿದೆ. ಆದರೆ ನೆಟ್‌ರನ್‌ರೇಟ್ ಆಧಾರದಲ್ಲಿ 8ನೇ ಸ್ಥಾನದಲ್ಲಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಮ್ಯಾಚ್‌ ನೋಡುವುದಕ್ಕಿಂತ ಫ್ಲೈಟ್‌ನಲ್ಲಿ ಫಾರಿನ್ ಟೂರ್ ಹೋಗೋದೇ ಚೀಪ್..!

ಪಂಜಾಬ್ ಹಾಗೂ ಮುಂಬೈ ಟೀಂ ಕಾಂಬಿನೇಶನ್‌ನಲ್ಲಿ ಎಡವಿದೆ. ತಂಡವಾಗಿ ಸಂಘಟಿತ ಹೋರಾಟ ನೀಡಲು ವಿಫಲವಾಗಿದೆ. ಎರಡೂ ತಂಡ ಇನ್ನುಳಿದ ಪಂದ್ಯ ಗೆದ್ದು ಪ್ಲೇ ಆಫ್ ಸ್ಥಾನಕ್ಕೇರುವ ಅವಕಾಶವಿದೆ.  ಈ ಕಾರಣದಿಂದ ಇಂದಿನ ಪಂದ್ಯ ರೋಚಕತೆ ಪಡೆದುಕೊಂಡಿದೆ. 
 

click me!