ಯಾರಮ್ಮ ಇವಳು? ಮನಸ್ಸು ಕದ್ದ ಹುಡುಗಿ, ವೈರಲ್ ಆದ ಐಪಿಎಲ್ ಫ್ಯಾನ್ ಗರ್ಲ್!

By Suvarna News  |  First Published Apr 18, 2024, 8:23 PM IST

ಪ್ರತಿ ಐಪಿಎಲ್ ಟೂರ್ನಿಯಲ್ಲಿ ಕ್ರೀಡಾಂಗಣಕ್ಕೆ ಹಾಜರಾಗುವ ಫ್ಯಾನ್ ಗರ್ಲ್ ರಾತ್ರೋರಾತ್ರಿ ಜನಪ್ರಿಯತೆ ಪಡೆದುಕೊಂಡ ಹಲವು ಊದಾಹರಣೆಗಳಿವೆ. ಇದೀಗ ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಪಂದ್ಯದ ನಡುವಿನಲ್ಲಿ ಕಾಣಿಸಿಕೊಂಡ ಫ್ಯಾನ್ ಗರ್ಲ್ ಭಾರತೀಯರ ಕ್ರಶ್ ಆಗಿದ್ದಾಳೆ.
 


ನವದೆಹಲಿ(ಏ.18) ಐಪಿಎಲ್ ಟೂರ್ನಿ ರೋಚಕತೆ ಹೆಚ್ಚುತ್ತಿದೆ. ಆದರೆ ಆರ್‌ಸಿಬಿ ಸೋಲಿನಲ್ಲಿ ಕಂಗೆಟ್ಟಿದೆ ಅನ್ನೋ ಬೇಸರ ಆರ್‌ಸಿಬಿ ಅಭಿಮಾನಿಗಳಲ್ಲಿ ಮಡುಗಟ್ಟಿದೆ. ಇದರ ನಡುವೆ ಫ್ಯಾನ್ ಗರ್ಲ್ ವಿಡಿಯೋ ವೈರಲ್ ಆಗುವ ಮೂಲಕ ಹೊಸ ಸಂಚಲ ಸೃಷ್ಟಿಯಾಗಿದೆ. ಹಾಲಿವುಡ್ ನಟಿ ಅನಾ ಡೇ ಅರ್ಮಾಸ್ ರೀತಿ ಕಾಣುವ ಬೆಡಗಿ ಐಪಿಎಲ್ ಪಂದ್ಯಕ್ಕೆ ಹಾಜರಾಗಿ ಎಲ್ಲರ ಗಮನಸೆಳೆದಿದ್ದಾಳೆ. ಈಕೆಯ ವಿಡಿಯೋ ಭಾರಿ ವೈರಲ್ ಆಗಿದ್ದು, ಭಾರತೀಯರ ಕ್ರಶ್ ಆಗಿ ಬದಲಾಗಿದ್ದಾಳೆ.

ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಈ ಅಭಿಮಾನಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾಳೆ. ಗುಜರಾತ್ ಹಾಗೂ ಡೆಲ್ಲಿ ನಡುವಿನ ಪಂದ್ಯ ಲೋ ಸ್ಕೋರಿಂಗ್‌ನಿಂದ ಸಪ್ಪೆಯಾಗಿತ್ತು. ಆದರೆ ಈ ಫ್ಯಾನ್ ಗರ್ಲ್ ಕಾಣಿಸಿಕೊಂಡ ಬೆನ್ನಲ್ಲೇ ಪಂದ್ಯದ ರೋಚಕತೆ ಹೆಚ್ಚಾಗಿದೆ. ಕೇವಲ 89 ರನ್‌ಗೆ ಕುಸಿದಿತ್ತು. ಈ ವೇಳೆ ಗುಜರಾತ್ ಫ್ಯಾನ್ ಗರ್ಲ್ ಕಾಣಿಸಿಕೊಂಡು ಭಾರಿ ವೈರಲ್ ಆಗಿದ್ದಾಳೆ.

Latest Videos

undefined

ಈ ತಂಡವೇ ನೋಡಿ ಆರ್‌ಸಿಬಿಯ ಅಸಲಿ ವಿಲನ್..! ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಈ ಅಭಿಮಾನಿ ಫೋಟೋ, ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಹಾಲಿವುಡ್ ನಟಿ ಅನಾ ಡೇ ಅರ್ಮಾಸ್ ಕೂಡ ಐಪಿಎಲ್ ಅಭಿಮಾನಿ ಎಂದಿದ್ದಾರೆ. ಹಾಲಿವುಡ್ ನಟಿಯರೆಲ್ಲಾ ಐಪಿಎಲ್ ಪಂದ್ಯ ನೋಡಲು ಖುದ್ದಾಗಿ ಭಾರತಕ್ಕೆ ಬಂದಿದ್ದಾರೆ ಅನ್ನೋದು ಗೊತ್ತಾಗಲಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

 

Shubman Thrill 🤡 pic.twitter.com/1KdyuXuCuK

— Ankit (@revengeseeker07)

 

ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ನಡುವಿನ ಪಂದ್ಯದಲ್ಲಿ ಕಾಣಿಸಿಕೊಂಡ ಈ ಅಭಿಮಾನಿ ಒಂದೇ ದಿನದಲ್ಲಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದಾಳೆ. ಐಪಿಎಲ್ ಅಭಿಮಾನಿಗಳು ಈ ಬೆಡಗಿ ಯಾರು ಎಂದು ತಲೆಕೆಡಿಸಿಕೊಂಡಿದ್ದಾರೆ. ಪ್ರತಿ ಐಪಿಎಲ್ ಟೂರ್ನಿಯಲ್ಲಿ ಈ ರೀತಿ ಫ್ಯಾನ್ ಗರ್ಲ್ ಭಾರಿ ವೈರಲ್ ಆಗಿದ್ದಾರೆ. ಕ್ರೀಡಾಂಗಣಕ್ಕೆ ಹಾಜರಾಗಿ ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸುವ ಅಭಿಮಾನಿಗಳು ಕ್ಯಾಮೆರಾ ಕಣ್ಣಿಗೆ ಬಿದ್ದು ದೇಶಾದ್ಯಂತ ವೈರಲ್ ಆದ ಹಲವು ಘಟನೆಗಳಿವೆ.

 

lookalike at Cricket Match Last night 👀❤️

Who is she? Name? pic.twitter.com/rnuqKrTiUw

— CRUSH SLOT (@CrushSlot)

 

549 ರನ್, 81 ಬೌಂಡ್ರಿ: ಆರ್‌ಸಿಬಿ-ಸನ್‌ರೈಸರ್ಸ್ ನಡುವಿನ ಪಂದ್ಯದಲ್ಲಿ ಹಲವು ರೆಕಾರ್ಡ್ಸ್ ನುಚ್ಚುನೂರು..!

ಇತ್ತ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಆದರೆ ಕಮ್‌ಬ್ಯಾಕ್ ಮಾಡುವ ವಿಶ್ವಾಸ ವ್ಯಕ್ತಪಡಿಸಿದೆ.  ಇನ್ನುಳಿದ ಪಂದ್ಯ ಗೆದ್ದು ಪ್ಲೇ ಆಫ್  ಸ್ಥಾನಕ್ಕೇರಲು ಪ್ರಯತ್ನಿಸುತ್ತಿದೆ. ಆದರೆ ಸದ್ಯದ ಪರ್ಫಾಮೆನ್ಸ್ ಆರ್‌ಸಿಬಿಗೆ ಯಶಸ್ಸು ತಂದುಕೊಡುತ್ತಿಲ್ಲ. ರಾಜಸ್ಥಾನ ರಾಯಲ್ಸ್ 7ರಲ್ಲಿ 6 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ 6ರಲ್ಲಿ 4 ಪಂದ್ಯ ಗೆದ್ದು 2ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ 6 ಪಂದ್ಯದಲ್ಲಿ 4 ಗೆಲುವಿನ ಮೂಲಕ 3ನೇ ಸ್ಥಾನದಲ್ಲಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ 6ರಲ್ಲಿ 4 ಗೆಲುವಿನ ಮೂಲಕ 4ನೇ ಸ್ಥಾನದಲ್ಲಿದೆ.
 
 

lookalike at Cricket Match Last night 👀❤️

Who is she? Name? pic.twitter.com/rnuqKrTiUw

— CRUSH SLOT (@CrushSlot)
click me!