ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಟಿ20 ವಿಶ್ವಕಪ್ ಆಡುವ ಕನಸು ಭಗ್ನ?

By Suvarna News  |  First Published Apr 7, 2024, 12:10 PM IST

ಕುಲ್ದೀಪ್ ಯಾದವ್, ಭಾರತದ ಮಿಸ್ಟರಿ ಸ್ಪಿನ್ನರ್. ಸದ್ಯ ಭಾರತ ತಂಡದ ಖಾಯಂ ಮೆಂಬರ್. ಒನ್ಡೇ ವರ್ಲ್ಡ್‌ಕಪ್ ಆಡಿದ್ದ ಕುಲ್ದೀಪ್, ಆ ಬಳಿಕ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲೂ ಆಡಿದ್ದರು. ಸದ್ಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಆದ್ರೀಗ ಇಂಜುರಿಯಾಗಿ ಕ್ಯಾಪಿಟಲ್ಸ್ ತಂಡದಿಂದ ಕಿಕೌಟ್ ಆಗಿದ್ದಾರೆ.


ಬೆಂಗಳೂರು(ಏ.07) ಈತ ಟಿಂ ಇಂಡಿಯಾದ ಮೂರು ಫಾರ್ಮ್ಯಾಟ್ ಆಟಗಾರ. ಟಿ20 ವಿಶ್ವಕಪ್ ಆಡೋ ಕನಸು ಕಂಡಿದ್ದ. ಅದಕ್ಕಾಗಿ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನವನ್ನೂ ನೋಡ್ತಿದ್ದ. ಆದ್ರೀಗ ಇಂಜುರಿಯಾಗಿ ಐಪಿಎಲ್‌ನಿಂದ ಹೊರಬಿದ್ದಿದ್ದಾನೆ. ಬೇಗ ರಿಕವರಿಯಾಗಿ ದ್ವಿತೀಯಾರ್ಧ ಐಪಿಎಲ್ ಆಡಿದ್ರೆ ಉಳಿಗಾಲ. ಇಲ್ಲ ಆತನ ಕನಸು ಭಗ್ನಗೊಳ್ಳಲಿದೆ.

ವಿಶ್ರಾಂತಿ ಪಡೆಯಲು ಕುಲ್ದೀಪ್‌ಗೆ ಸಲಹೆ ನೀಡಿರುವುದೇಕೆ..?

Latest Videos

undefined

ಕುಲ್ದೀಪ್ ಯಾದವ್, ಭಾರತದ ಮಿಸ್ಟರಿ ಸ್ಪಿನ್ನರ್. ಸದ್ಯ ಭಾರತ ತಂಡದ ಖಾಯಂ ಮೆಂಬರ್. ಒನ್ಡೇ ವರ್ಲ್ಡ್‌ಕಪ್ ಆಡಿದ್ದ ಕುಲ್ದೀಪ್, ಆ ಬಳಿಕ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲೂ ಆಡಿದ್ದರು. ಸದ್ಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಆದ್ರೀಗ ಇಂಜುರಿಯಾಗಿ ಕ್ಯಾಪಿಟಲ್ಸ್ ತಂಡದಿಂದ ಕಿಕೌಟ್ ಆಗಿದ್ದಾರೆ.

ಇಶಾನ್ ಕಿಶನ್ ವಿಚಿತ್ರ ಡ್ರೆಸ್ ಹಾಕಿಕೊಂಡಿದ್ದೀಕೆ..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಹೌದು, ಲೆಗ್ ಸ್ಪಿನ್ನರ್ ಕುಲ್ದೀಪ್ ಯಾದವ್, ತೊಡೆಸಂಧು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. ಇದೇ ಕಾರಣದಿಂದಾಗಿ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಈಗ ಇಂದು ನಡೆಯೋ ಮುಂಬೈ ಇಂಡಿಯನ್ಸ್ ವಿರುದ್ಧವೂ ಯಾದವ್ ಆಡ್ತಿಲ್ಲ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು, ಮೊದಲಾರ್ಧದ ಐಪಿಎಲ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಡೆಲ್ಲಿಯಿಂದ ಬೆಂಗಳೂರಿಗೆ ಕುಲ್ದೀಪ್ ಯಾದವ್

ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಗುಳಿದಿರುವ ಕುಲ್ದೀಪ್, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ತೆರಳುವ ಸಾಧ್ಯತೆಯಿದೆ. ಅಲ್ಲದೆ ಅಲ್ಲಿ ರಿಹ್ಯಾಬ್‌ಗೆ ಒಳಗಾಗಲಿದ್ದಾರೆ. ಅಂದರೆ ಟೀಂ ಇಂಡಿಯಾ ಆಟಗಾರರು ಗಾಯಗೊಂಡರೆ, ಅಥವಾ ಇನ್ನಿತರ ಫಿಟ್ನೆಸ್ ಸಮಸ್ಯೆಗೆ ಒಳಗಾದರೆ ಎನ್‌ಸಿಎ ಕಡೆಯಿಂದ ಫಿಟ್ನೆಸ್ ಪ್ರಮಾಣ ಪತ್ರವನ್ನು ಪಡೆಯಬೇಕು. ಹೀಗಾಗಿ ತೊಡೆಸಂಧು ನೋವಿನ ಸಮಸ್ಯೆಗೆ ಒಳಗಾಗಿರುವ ಕುಲ್ದೀಪ್, ಮತ್ತೆ ಕಣಕ್ಕಿಳಿಯಬೇಕಿದ್ದರೆ ಎನ್‌ಸಿಎ ಕಡೆಯಿಂದ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಸ್ಪಿನ್ನರ್ ಮೊದಲಾರ್ಧದ ಪಂದ್ಯಗಳಿಗೆ ಅಲಭ್ಯರಾಗುವುದು ಬಹುತೇಕ ಖಚಿತ ಎನ್ನಬಹುದು.

ಕೊಹ್ಲಿ ಸೆಂಚುರಿ ಬಾರಿಸಿದ್ರೂ ಗೆಲ್ಲಲಿಲ್ಲ ಆರ್‌ಸಿಬಿ...! ರಾಯಲ್ಸ್‌ಗೆ 4ನೇ ಜಯ, ಬೆಂಗಳೂರಿಗೆ 4ನೇ ಸೋಲು

ಪಂಜಾಬ್ ವಿರುದ್ಧ 2 ಮತ್ತು ರಾಜಸ್ಥಾನ ವಿರುದ್ಧ 1 ವಿಕೆಟ್ ಪಡೆದಿದ್ದ ಕುಲ್ದೀಪ್, ಡೆಲ್ಲಿಯನ್ನ ಗೆಲ್ಲಿಸಲಾಗಲಿಲ್ಲ. ಆದ್ರೂ ಈಗ ಡೆಲ್ಲಿಗೆ ಕುಲ್ದೀಪ್ ಅನುಪಸ್ಥಿ ಕಾಡಲಿದೆ. ಯಾಕಂದ್ರೆ 4 ಪಂದ್ಯಗಳನ್ನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ  ಕೇವಲ 1 ಮ್ಯಾಚ್ನಲ್ಲಿ ಮಾತ್ರ ಜಯ ಸಾಧಿಸಿದೆ. ಇದೀಗ ಮೂರು ಸೋಲುಗಳೊಂದಿಗೆ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ರಿಷಭ್ ಪಂತ್ ಪಡೆಗೆ ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ಅನುಪಸ್ಥಿತಿಯು ದೊಡ್ಡ ಹೊಡೆತ ನೀಡಲಿದೆ.

ಮೊದಲಾರ್ಧ ಐಪಿಎಲ್ ಪಂದ್ಯಗಳಿಂದ ಕುಲ್ದೀಪ್ ಹೊರಗುಳಿಯುತ್ತಾರೆ ಅಂತ ಹೇಳಲಾಗ್ತಿದೆ. ಆಕಸ್ಮಾತ್ ಅವರು ಇಂಜುರಿಯಿಂದ ಪೂರ್ತಿ ಐಪಿಎಲ್‌ನಿಂದ ಹೊರಗುಳಿದ್ರೆ ಆಗ ಟಿ20 ವಿಶ್ವಕಪ್ ಆಡೋ ಕನಸು ಸಹ ಭಗ್ನಗೊಳ್ಳಲಿದೆ. ಐಪಿಎಲ್ ಪರ್ಪಾಮೆನ್ಸ್ ನೋಡಿ ಟಿ20 ವರ್ಲ್ಡ್‌ಕಪ್‌ಗೆ ಟೀಂ ಇಂಡಿಯಾವನ್ನ ಸೆಲೆಕ್ಟ್ ಮಾಡಲಾಗುತ್ತೆ. ಒಂದು ಕಡೆ ಮ್ಯಾಚ್ ಆಡಲ್ಲ. ಮತ್ತೊಂದು ಕಡೆ ಇಂಜುರಿ. ಈ ಎರಡು ಕುಲ್ದೀಪ್‌ಗೆ ಮಾರಕವಾಗಲಿವೆ. ಒಟ್ನಲ್ಲಿ ಕುಲ್ದೀಪ್ ಇಂಜುರಿ ಕೇವಲ ಡೆಲ್ಲಿಗೆ ಮಾತ್ರವಲ್ಲ. ಟೀಂ ಇಂಡಿಯಾಗೂ ದೊಡ್ಡ ಹಿನ್ನಡೆಯಾಗಲಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!