
ಲಖನೌ(ಏ.07): ತಾವಾಡಿದ್ದು ಕೇವಲ ಎರಡೇ ಪಂದ್ಯ ಗಳಾಗಿದ್ದರೂ, ತಮ್ಮ ಪ್ರಚಂಡ ವೇಗದ ಮೂಲಕ ಎದುರಾಳಿಗಳ ನಿದ್ದೆಗೆಡಿಸಿರುವ ಲಖನ್ ತಂಡದ ಯುವವೇಗಿ ಮಯಾಂಕ್ ಯಾದವ್ ಈಗ ಗುಜರಾತ್ ಟೈಟಾನ್ಸ್ ವಿರುದ್ಧ ಅಬ್ಬರಿಸಲು ಕಾಯುತ್ತಿದ್ದಾರೆ. ಭಾನುವಾರ ಇತ್ತಂಡಗಳು ಮುಖಾಮುಖಿಯಾ ಗುತ್ತಿದ್ದು, 3ನೇ ಗೆಲುವಿಗಾಗಿ ಕಾಯುತ್ತಿವೆ.
ಸೋಲಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಲಖನ್ ಸತತ2 ಜಯದೊಂದಿಗೆಮುನ್ನುಗ್ಗುತ್ತಿದೆ.ಮಯಾಂಕ್ ತಂಡದ ಟ್ರಂಪ್‌ಕಾರ್ಡ್ ಎನಿಸಿಕೊಂಡಿದ್ದು, ಎರಡೂ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಡಿ ಕಾಕ್, ಪೂರನ್ ಅಬ್ಬರಿಸುತ್ತಿದ್ದು, ರಾಹುಲ್ ಕೂಡಾ ಲಯಕ್ಕೆ ಮರಳುತ್ತಿದ್ದಾರೆ. ಆದರೆ ದೇವದತ್, ಸ್ಟೋಯಿಸ್ ವಿಫಲರಾಗುತ್ತಿರುವುದು ಫ್ರಾಂಚೈಸಿಯ ತಲೆಬಿಸಿಗೆ ಕಾರಣವಾಗಿದೆ.
IPL 2024 ಇಂದಾದ್ರೂ ಗೆಲ್ಲುತ್ತಾ ಮುಂಬೈ ಇಂಡಿಯನ್ಸ್..?
ಮತ್ತೊಂದೆಡೆ ಗುಜರಾತ್ ಟೂರ್ನಿಯಲ್ಲಿ ಅಸ್ಥಿರ ಆಟ ಪ್ರದರ್ಶಿಸುತ್ತಿದೆ. 4 ಪಂದ್ಯದಲ್ಲಿ 2ರಲ್ಲಿ ಗೆದ್ದಿರುವ ತಂಡ ಸುಧಾರಿತ ಆಟವಾಡಬೇಕಾದ ಅನಿವಾರ್ಯತೆ ಯಿದೆ. ನಾಯಕ ಗಿಲ್, ಸಾಯಿ ಸುದರ್ಶನ್ ಉತ್ತಮ ಲಯದಲ್ಲಿದ್ದರೂ, ಸಾಹ, ವಿಜಯ್ ಶಂಕರ್ ಮಿಂಚುತ್ತಿಲ್ಲ. ಕನ್ನಡಿಗ ಅಭಿನವ ಮನೋಹರ್ ಕೂಡಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಸಂಭವನೀಯ ಆಟಗಾರರ ಪಟ್ಟಿ
ಲಖನೌ ಸೂಪರ್ ಜೈಂಟ್ಸ್:
ಕೆ ಎಲ್ ರಾಹುಲ್(ನಾಯಕ&ವಿಕೆಟ್ ಕೀಪರ್), ಕ್ವಿಂಟನ್ ಡಿ ಕಾಕ್, ದೇವದತ್ ಪಡಿಕ್ಕಲ್, ನಿಕೋಲಸ್ ಪೂರನ್, ಮಾರ್ಕಸ್ ಸ್ಟೋನಿಸ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯಿ, ಯಶ್ ಠಾಕೂರ್, ನವೀನ್ ಉಲ್ ಹಕ್, ಮಯಾಂಕ್ ಯಾದವ್.
ಗುಜರಾತ್ ಟೈಟಾನ್ಸ್:
ಶುಭ್‌ಮನ್ ಗಿಲ್(ನಾಯಕ), ವೃದ್ದಿಮಾನ್ ಸಾಹ(ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್, ಸಾಯಿ ಸುದರ್ಶನ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ಅಝ್ಮತುಲ್ಲಾ ಓವರ್‌ಝೈ, ರಶೀದ್ ಖಾನ್, ನೂರ್ ಅಹಮದ್, ಉಮೇಶ್ ಯಾದವ್, ದರ್ಶನ್ ನಾಲ್ಕಂಡೆ.
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.