ಇಶಾನ್ ಕಿಶನ್, ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟರ್, ಬಿಸಿಸಿಐ ಹೇಳಿದ್ರೂ ರಣಜಿ ಟ್ರೋಫಿ ಆಡದೆ ಜಂಬ ಮಾಡಿದ್ದ ಕಿಶನ್ ಅವರನ್ನ ಬಿಸಿಸಿಐ ಗುತ್ತಿಗೆಯಿಂದ ಕೈ ಬಿಡಲಾಗಿದೆ. ಟೀಂ ಇಂಡಿಯಾಗೂ ಸೆಲೆಕ್ಟ್ ಮಾಡಿಲ್ಲ. ಈಗ ಅವರಿಗೆ ಮುಂಬೈ ಇಂಡಿಯನ್ಸ್ ಗತಿ. ಅಲ್ಲೂ ವಿಫಲರಾಗಿದ್ದಾರೆ. ಮೂರು ಪಂದ್ಯದಿಂದ 50 ರನ್ ಗಳಿಸಿದ್ದಾರೆ ಅಷ್ಟೆ.
ಬೆಂಗಳೂರು(ಏ.07) ಇಶಾನ್ ಕಿಶನ್ ನೋಡಿ ಎಲ್ಲರಿಗೂ ಆಶ್ಚರ್ಯವಾಗಿದೆ. ಈತನಿಗೇನು ಹುಚ್ಚು ಹಿಡಿದಿದ್ಯಾ ಅನ್ನೋಕೆ ಶುರು ಮಾಡಿದ್ದಾರೆ. ಇದಕ್ಕೆ ಕಾರಣ ಆ ವಿಚಿತ್ರ ಡ್ರೆಸ್. ಆ ಡ್ರೆಸ್ ಹಾಕಿಕೊಂಡು ಮನೆಯಲ್ಲೋ, ಹೋಟೇಲ್ನಲ್ಲೋ ಇದ್ದಾರೆ ಪರವಾಗಿಲ್ಲ. ಸಿಕ್ಕ ಸಿಕ್ಕ ಕಡೆ ಓಡಾಡುತ್ತಿದ್ದಾರೆ. ಇದರಿಂದ ಕಿಶನ್ ಎಲ್ಲರಿಗೂ ಕಾಮಿಡಿ ಪೀಸ್ ಆಗಿ ಕಾಣ್ತಿದ್ದಾರೆ.
ಸೂಪರ್ ಹೀರೋ ಇಶಾನ್ ವಿಡಿಯೋ ವೈರಲ್
ಇಶಾನ್ ಕಿಶನ್, ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟರ್, ಬಿಸಿಸಿಐ ಹೇಳಿದ್ರೂ ರಣಜಿ ಟ್ರೋಫಿ ಆಡದೆ ಜಂಬ ಮಾಡಿದ್ದ ಕಿಶನ್ ಅವರನ್ನ ಬಿಸಿಸಿಐ ಗುತ್ತಿಗೆಯಿಂದ ಕೈ ಬಿಡಲಾಗಿದೆ. ಟೀಂ ಇಂಡಿಯಾಗೂ ಸೆಲೆಕ್ಟ್ ಮಾಡಿಲ್ಲ. ಈಗ ಅವರಿಗೆ ಮುಂಬೈ ಇಂಡಿಯನ್ಸ್ ಗತಿ. ಅಲ್ಲೂ ವಿಫಲರಾಗಿದ್ದಾರೆ. ಮೂರು ಪಂದ್ಯದಿಂದ 50 ರನ್ ಗಳಿಸಿದ್ದಾರೆ ಅಷ್ಟೆ.
Ishan Kishan was spotted wearing the Superman outfit, as a punishment for being late at a team meeting 😂
pic.twitter.com/26543Tnlqj
ಸೂಪರ್ ಹೀರೋ ಡ್ರೆಸ್ನಲ್ಲಿ ಇಶಾನ್
ಯಾರೋ ಸೂಪರ್ ಮ್ಯಾನ್ ಅಂತ ತಿಳಿದುಕೊಳ್ಳಬೇಡಿ. ನೀವು ನೋಡ್ತಿರೋದು ಇಶಾನ್ ಕಿಶನ್ ಅವರನ್ನೇ. ಯಾಕೆ ಈ ಕಿಶನ್ ಈ ರೀತಿ ವಿಚಿತ್ರ ಡ್ರೆಸ್ ಹಾಕಿಕೊಂಡು ಓಡಾಡುತ್ತಿದ್ದಾರೆ ಅಂದುಕೊಂಡ್ರಾ.?. ಅದಕ್ಕೂ ಕಾರಣವಿದೆ. ಮುಂಬೈ ಇಂಡಿಯನ್ಸ್ ಟೀಮ್ ಮೀಟಿಂಗ್‌ಗಳಿಗೆ ತಡವಾಗಿ ಬಂದ ಕಾರಣಕ್ಕೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರಿಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ವಿಚಿತ್ರ ಶಿಕ್ಷೆ ನೀಡಿದೆ. ಕಿಶನ್ ಜೊತೆಗೆ ಶಮ್ಸ್ ಮುಲಾನಿ, ನುವಾನ್ ತುಶಾರ ಮತ್ತು ಕುಮಾರ ಕಾರ್ತಿಕೇಯ ಕೂಡ ನಿಯಮ ಉಲ್ಲಂಘನೆ ಮಾಡಿದ್ದು, ಎಲ್ಲರೂ ಮುಂಬೈ ಇಂಡಿಯನ್ಸ್ ತಂಡ ಸೂಪರ್ ಹೀರೋ ಕಾಸ್ಟ್ಯೂಮ್ ತೊಟ್ಟು ಎಲ್ಲೆಡೆ ತಿರುಗಾಡುವಂತೆ ಶಿಕ್ಷೆ ನೀಡಲಾಗಿದೆ.
So Ishan Kishan bro was punished for coming late in the team meeting 😂 pic.twitter.com/QSOmUEXEa1
— R A T N I S H (@LoyalSachinFan)ವಿಚಿತ್ರ ಸಮವಸ್ತ್ರ ತೊಟ್ಟು ಎಲ್ಲೆಡೆ ತಿರುಗಾಡುವಂತೆ ಆಗಿರುವುದು ಆಟಗಾರರಿಗೆ ಕೊಂಚ ಮುಜುಗರ ತಂದಿದೆ. ಅದರಲ್ಲೂ ನುವಾನ್ ತುಶಾರ ಸಮವಸ್ತ್ರವನ್ನು ಉಲ್ಟಾ ಧರಿಸಿದ್ದು, ಮುಂಬೈ ತಂಡದ ಸಂಗಡಿಗರನ್ನು ನಕ್ಕು ನಲಿಯುವಂತೆ ಮಾಡಿತು. ಮುಂಬೈ ಇಂಡಿಯನ್ಸ್ ತಂಡದ ಯುವ ಬ್ಯಾಟರ್ ನಮನ್ ಧೀರ್ ಇದರ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ಆಟಗಾರರ ಅವತಾರ ಕಂಡು ನೆಟ್ಟಿಗರು ಕೂಡ ನಕ್ಕು ನಲಿದಿದ್ದಾರೆ.
IPL 2024: ಗುಜರಾತ್ ಟೈಟಾನ್ಸ್ ಸವಾಲಿಗೆ ಲಖನೌ ಸೂಪರ್ ಜೈಂಟ್ಸ್ ಸನ್ನದ್ದ
ಇಶಾನ್ ಶಿಕ್ಷೆಗೆ ಗುರಿಯಾಗಿರುವುದು ಇದೇ ಮೊದಲಲ್ಲ..!
ಅಂದಹಾಗೆ ನಿಯಮಗಳ ಉಲ್ಲಂಘನೆ ಇಶಾನ್ ಕಿಶನ್‌ಗೆ ಹೊಸದೇನಲ್ಲ. 2018ರ ಐಪಿಎಲ್‌ನಲ್ಲಿ ರಾಹುಲ್ ಚಹರ್ ಮತ್ತು ಅನುಕುಲ್ ರಾಯ್ ಜೊತೆಗೂಡಿ ಟೀಮ್ ಮೀಟಿಂಗ್‌ಗೆ ತಡವಾಗಿ ತಲುಪಿ ನಿಯಮ ಉಲ್ಲಂಘನೆ ಮಾಡಿದ್ದರು. ಆಗ ಮುಂದಿನ 6 ವರ್ಷಗಳ ಕಾಲ ಯಾವುದೇ ನಿಯಮ ಉಲ್ಲಂಘನೆ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದ ಕಿಶನ್, ಪದೇ ಪದೇ ನಿಯಮ ಉಲ್ಲಂಘಿಸಿ ಶಿಕ್ಷೆ ಎದುರಿಸುತ್ತಲೇ ಬಂದಿದ್ದಾರೆ. ಕಳೆದ ಐಪಿಎಲ್ನಲ್ಲೂ ಇಶಾನ್ ಕಿಶನ್ ಮತ್ತು ನೆಹಾಲ್ ವಧೇರಾ ಕೂಡ ಇಂಥದ್ದೇ ವಿಚಿತ್ರ ಶಿಕ್ಷೆಗೆ ಗುರಿಯಾಗಿದ್ದರು.
"ಎರಡು ದಿನಗಳ ಮೊದಲೇ ನನಗೆ ಟೀಮ್ ಮೀಟಿಂಗ್ ಬಗ್ಗೆ ಮಾಹಿತಿ ನೀಡಿದ್ದರು. ಆದರೂ ಸಭೆಯಲ್ಲಿ ಪಾಲ್ಗೊಳ್ಳುವುದನ್ನು ಮರೆತೆ. ಜಿಮ್‌ಗೆ ತೆರಳುವುದರಿಂದಲೂ ತಪ್ಪಿಸಿಕೊಂಡಿದ್ದೆ. ಇದರಿಂದ ಬಹಳ ಬೇಸರವಾಗಿದೆ. ಇದೇ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ನಾನು ಸನ್ ಗ್ಲಾಸ್ ತೆಗೆದಿರಲಿಲ್ಲ. ಯಾರೊಂದಿಗೂ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ ನನ್ನಲ್ಲಿ ಇರಲಿಲ್ಲ. ಈ ರೀತಿಯ ತಪ್ಪು ಇನ್ಮುಂದೆ ಮಾಡುವುದಿಲ್ಲ ಎಂದು 2018ರಲ್ಲಿ ಇಶಾನ್ ಕಿಶನ್ ಹೇಳಿಕೆ ನೀಡಿದ್ದರು.
ಕೊಹ್ಲಿ ಸೆಂಚುರಿ ಬಾರಿಸಿದ್ರೂ ಗೆಲ್ಲಲಿಲ್ಲ ಆರ್‌ಸಿಬಿ...! ರಾಯಲ್ಸ್‌ಗೆ 4ನೇ ಜಯ, ಬೆಂಗಳೂರಿಗೆ 4ನೇ ಸೋಲು
ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಇಶಾನ್ ಕಿಶನ್ ಇದೀಗ ಐಪಿಎಲ್ ನಲ್ಲಿ ಮಿಂಚುವ ಮೂಲಕ ಭಾರತ ತಂಡಕ್ಕೆ ಹಿಂದಿರುಗುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಆದರೆ, ಮೊದಲ ಮೂರು ಪಂದ್ಯಗಳಿಂದ ಅವರು ಗಳಿಸಿರುವುದು ಕೇವಲ 50 ರನ್ ಮಾತ್ರ. ಇದರ ಜೊತೆ ಈ ಅಶಿಸ್ತು ಬೇರೆ. ಒಟ್ನಲ್ಲಿ ಇಶಾನ್ ಕಿಶನ್ ಲಕ್ ಯಾಕೋ ಕೈ ಕೊಟ್ಟಿದೆ ಅನಿಸ್ತಿದೆ.
- ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್