ತವರಿನಲ್ಲಿ ಸತತ 5 ಪಂದ್ಯಗಳನ್ನು ಆಡಲಿರುವ ಕೆಕೆಆರ್, ತವರಿನ ಲಾಭವೆತ್ತಲು ಕಾಯುತ್ತಿದೆ. ಈ ಪಂದ್ಯದಿಂದಲೇ ಜಯದ ಓಟ ಆರಂಭಿಸಿ, ಲಖನೌ ವಿರುದ್ಧ ಐಪಿಎಲ್‌ನಲ್ಲಿ ಮೊದಲ ಜಯ ಸಾಧಿಸಲು ಕಾತರಿಸುತ್ತಿದೆ.
ಕೋಲ್ಕತಾ(ಏ.14): ಉತ್ತಮ ಲಯ ಪ್ರದರ್ಶಿಸಿ ಸತತ 3 ಗೆಲುವುಗಳನ್ನು ದಾಖಲಿಸಿದ್ದ ಕೋಲ್ಕತಾ ನೈಟ್‌ರೈಡರ್ಸ್ ಹಾಗೂ ಲಖನೌ ಸೂಪರ್‌ಜೈಂಟ್ಸ್, ಕಳೆದ ಪಂದ್ಯದಲ್ಲಿ ಸೋಲುಂಡಿದ್ದವು. ಭಾನುವಾರ ಈ ಎರಡು ತಂಡಗಳು ಪರಸ್ಪರ ಎದುರಾಗಲಿದ್ದು, ಒಂದು ತಂಡ ಗೆಲುವಿನ ಲಯಕ್ಕೆ ಮರಳಲಿದೆ.
ತವರಿನಲ್ಲಿ ಸತತ 5 ಪಂದ್ಯಗಳನ್ನು ಆಡಲಿರುವ ಕೆಕೆಆರ್, ತವರಿನ ಲಾಭವೆತ್ತಲು ಕಾಯುತ್ತಿದೆ. ಈ ಪಂದ್ಯದಿಂದಲೇ ಜಯದ ಓಟ ಆರಂಭಿಸಿ, ಲಖನೌ ವಿರುದ್ಧ ಐಪಿಎಲ್‌ನಲ್ಲಿ ಮೊದಲ ಜಯ ಸಾಧಿಸಲು ಕಾತರಿಸುತ್ತಿದೆ.
IPL 2024: ಮತ್ತೆ ಗಾಯಗೊಂಡ್ರಾ ಹಾರ್ದಿಕ್ ಪಾಂಡ್ಯ?
ಕೆಕೆಆರ್ ತನ್ನ ತಂಡದಲ್ಲಿರುವ ವಿಂಡೀಸ್ ಆಲ್ರೌಂಡರ್‌ಗಳಾದ ಸುನಿಲ್ ನರೈನ್ ಹಾಗೂ ಆಂಡ್ರೆ ರಸೆಲ್ ಮೇಲೆ ಅತಿಯಾಗಿ ಅವಲಂಬಿತಗೊಂಡಿದ್ದು, ಈ ಇಬ್ಬರ ಪ್ರದರ್ಶನದ ಮೇಲೆ ಫಲಿತಾಂಶ ನಿರ್ಧಾರವಾಗಬಹುದು.
ಮತ್ತೊಂದೆಡೆ ಲಖನೌ ಸೂಪರ್ ಜೈಂಟ್ಸ್, ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 94ಕ್ಕೆ 7 ವಿಕೆಟ್ ಕಳೆದುಕೊಂಡರೂ, ಆಯುಷ್ ಬದೋನಿ ಅವರ ಹೋರಾಟದ ನೆರವಿನಿಂದ 160 ರನ್ ಗಡಿ ದಾಟಿತ್ತು. ಯುವ ಆಟಗಾರನ ಹೋರಾಟ ತಂಡದ ಆತ್ಮವಿಶ್ವಾಸ ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.
ಐಪಿಎಲ್ ಇತಿಹಾಸದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಒಟ್ಟು ಮೂರು ಬಾರಿ ಮುಖಾಮುಖಿಯಾಗಿದ್ದು, ಮೂರು ಪಂದ್ಯದಲ್ಲೂ ಲಖನೌ ಗೆಲುವಿನ ನಗೆ ಬೀರಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲುವಿನ ನಗೆ ಬೀರಲಿದೆ ಎನ್ನುವ ಕುತೂಹಲ ಜೋರಾಗಿದೆ.
IPL 2024 ಪಂಜಾಬ್ ಎದುರು ಕೊನೆ ಓವರ್ ಥ್ರಿಲ್ಲರ್ ಗೆದ್ದ ರಾಜಸ್ಥಾನ ರಾಯಲ್ಸ್!
ಸಂಭವನೀಯ ಆಟಗಾರರ ಪಟ್ಟಿ
ಕೆಕೆಆರ್: ಫಿಲ್ ಸಾಲ್ಟ್, ಸುನಿಲ್ ನರೈನ್, ಅಂಗ್‌ಕೃಷ್ ರಘುವಂಶಿ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ.
ಲಖನೌ: ಕ್ವಿಂಟನ್ ಡಿ ಕಾಕ್, ಕೆ ಎಲ್ ರಾಹುಲ್ (ನಾಯಕ), ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಅರ್ಷದ್ ಖಾನ್, ನವೀನ್ ಉಲ್ ಹಕ್, ಯಶ್ ಠಾಕೂರ್, ಎಂ.ಸಿದ್ಧಾರ್ಥ್
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ