ಮುಂಬೈ ಬಗ್ಗುಬಡಿದು ಕೆಕೆಆರ್ ಪ್ಲೇ ಆಫ್‌ಗೆ ಅಧಿಕೃತ ಎಂಟ್ರಿ

By Naveen Kodase  |  First Published May 12, 2024, 6:48 AM IST

ಭಾರಿ ಮಳೆಯಿಂದಾಗಿ ಒಂದೂವರೆ ಗಂಟೆ ತಡವಾಗಿ ಟಾಸ್ ಮಾಡಲಾಯಿತು. 9.15ಕ್ಕೆ ಆರಂಭಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತಾ 16 ಓವರಲ್ಲಿ 7 ವಿಕೆಟ್‌ಗೆ 157 ರನ್ ಗಳಿಸಿತು. ಉತ್ತಮ ಆರಂಭ, ಕೊನೆಯಲ್ಲಿ ಹೋರಾಟದ ಹೊರತಾಗಿಯೂ ಮುಂಬೈ 8 ವಿಕೆಟ್‌ಗೆ 139 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಕೋಲ್ಕತಾ: 2 ಬಾರಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ 17ನೇ ಆವೃತ್ತಿ ಐಪಿಎಲ್‌ನಲ್ಲಿ ಅಧಿಕೃತವಾಗಿ ಪ್ಲೇ-ಆಫ್ ಪ್ರವೇಶಿಸಿದೆ. ಈ ಬಾರಿ ಪ್ಲೇ-ಆಫ್‌ಗೇರಿದ ಮೊದಲ ತಂಡ ಕೋಲ್ಕತಾ. ಶನಿವಾರದ ಮಳೆ ಪೀಡಿತ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್18 ರನ್ ಗೆಲುವು ಸಾಧಿಸಿದೆ. ಕೆಕೆಆರ್ 9ನೇ ಜಯದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡರೆ, ಮುಂಬೈ 9ನೇ ಸೋಲಿನ ಮುಖಭಂಗಕ್ಕೊಳಗಾಯಿತು.

ಭಾರಿ ಮಳೆಯಿಂದಾಗಿ ಒಂದೂವರೆ ಗಂಟೆ ತಡವಾಗಿ ಟಾಸ್ ಮಾಡಲಾಯಿತು. 9.15ಕ್ಕೆ ಆರಂಭಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತಾ 16 ಓವರಲ್ಲಿ 7 ವಿಕೆಟ್‌ಗೆ 157 ರನ್ ಗಳಿಸಿತು. ಉತ್ತಮ ಆರಂಭ, ಕೊನೆಯಲ್ಲಿ ಹೋರಾಟದ ಹೊರತಾಗಿಯೂ ಮುಂಬೈ 8 ವಿಕೆಟ್‌ಗೆ 139 ರನ್ ಗಳಿಸಿ ಸೋಲೊಪ್ಪಿಕೊಂಡಿತು.

Tap to resize

Latest Videos

ಇಶಾನ್ ಕಿಶನ್ 22 ಎಸೆತಗಳಲ್ಲಿ 40 ರನ್ ಸಿಡಿಸಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರೂ, ಇತರರು ವಿಫಲವಾದರು. ರೋಹಿತ್ (19), ಸೂರ್ಯ(11) ಮಿಂಚಲಿಲ್ಲ. ಕೊನೆಯಲ್ಲಿ ತಿಲಕ್ (17 ಎಸೆತಗಳಲ್ಲಿ 32) ಹೋರಾಟ ಸೋಲಿನ ಅಂತರ ತಗಿಸಿತು.

ವೆಂಕಿ ಮಿಂಚು: 10ಕ್ಕೆ2 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ವೆಂಕಟೇಶ್ (21 ಎಸೆತಗಳಲ್ಲಿ 42) ಆಸರೆಯಾದರು. ನಿತೀಶ್ ರಾಣಾ 33, ಆ್ಯಂಡ್ರೆ ರಸೆಲ್ 24, ರಿಂಕು ಸಿಂಗ್ 20 ರನ್ ಗಳಿಸಿ ತಂಡವನ್ನು 150ರ ಗಡಿ ದಾಟಿಸಿದರು. 

08ನೇ ಬಾರಿ : ಕೋಲ್ಕತಾ ಐಪಿಎಲ್‌ನಲ್ಲಿ 8ನೇ ಬಾರಿ ಪ್ಲೇ-ಆಫ್ ಪ್ರವೇಶಿಸಿತು. ಕಳೆದೆರಡು ಆವೃತ್ತಿಗಳಲ್ಲಿ 7ನೇ ಸ್ಥಾನ ಪಡೆದಿತ್ತು.

04 ನೇ ಬಾರಿ: ಮುಂಬೈ ವೇಗಿ ಜಸ್ಪ್ರೀರ್ ಬುಮ್ರಾ 4ನೇ ಬಾರಿ ಐಪಿಎಲ್ ಆವೃತ್ತಿಯೊಂದರಲ್ಲಿ 20 + ವಿಕೆಟ್ ಕಿತ್ತಿದ್ದು . ಚಹಲ್ 5 ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ್ದಾರೆ.

click me!