IPL 2024: ಕೆಕೆಆರ್ ಚಾಲೆಂಜ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ರೆಡಿ

By Kannadaprabha News  |  First Published Apr 3, 2024, 11:01 AM IST

ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಒಟ್ಟು 32 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಕೆಕೆಆರ್ ತಂಡವು ಅಲ್ಪ ಮುನ್ನಡೆ ಸಾಧಿಸಿದೆ. ಕೆಕೆಆರ್ ತಂಡವು 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.


ವಿಶಾಖಪಟ್ಟಣಂ(ಏ.03): ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ದೊರೆತಿದ್ದು ಅನಿರೀಕ್ಷಿತ ಗೆಲುವನ್ನು ಬದಲಿಗೆ ತನ್ನ ಯೋಜನಾಬದ್ದ ಆಟಕ್ಕೆ ಸಿಕ್ಕ ಯಶಸ್ಸು ಎನ್ನುವುದನ್ನು ಸಾಬೀತುಪಡಿಸಲು ಡೆಲ್ಲಿ ಕ್ಯಾಪಿಟಲ್ಸ್ ಉತ್ಸುಕಗೊಂಡಿದ್ದು, ಬುಧವಾರ ಇಲ್ಲಿ ನಡೆಯಲಿರುವ ರೋಚಕ ಹಣಾಹಣಿಯಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ಸವಾಲನ್ನು ಎದುರಿಸಲಿದೆ. 

ಮತ್ತೊಂದೆಡೆ ಕೆಕೆಆರ್ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿ ಸಿದ್ದು, ಹ್ಯಾಟ್ರಿಕ್ ಜಯದ ಮೇಲೆ ಕಣ್ಣಿಟ್ಟಿದೆ. ಕಳೆದ ಭಾನುವಾರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ 20 ರನ್ ಗೆಲುವು ಸಾಧಿಸಿತ್ತು. ರಿಷಭ್ ಪಂತ್ ಪಡೆ ಎಲ್ಲಾ ಮೂರೂ ವಿಭಾಗಗಳಲ್ಲಿ ಉತ್ತಮ ಆಟ ಪ್ರದರ್ಶಿಸಿತ್ತು.ಇನ್ನು ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಹೊಸಕಿ ಹಾಕಿದ್ದ ಕೆಕೆಆರ್, ತನ್ನ ಜಯದ ಓಟ ಮುಂದುವರಿಸಲು ಕಾಯುತ್ತಿದೆ.

Tap to resize

Latest Videos

IPL 2024 : ಮಯಾಂಕ್‌ ಯಾದವ್‌ ವೇಗಕ್ಕೆ ತತ್ತರಿಸಿದ ಆರ್‌ಸಿಬಿಗೆ 28 ರನ್‌ ಸೋಲು

ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಒಟ್ಟು 32 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಕೆಕೆಆರ್ ತಂಡವು ಅಲ್ಪ ಮುನ್ನಡೆ ಸಾಧಿಸಿದೆ. ಕೆಕೆಆರ್ ತಂಡವು 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭನೀಯ ಆಟಗಾರರ ಪಟ್ಟಿ

ಕೋಲ್ಕತಾ ನೈಟ್ ರೈಡರ್ಸ್:

ಫಿಲ್ ಸಾಲ್ಟ್, ಸುನಿಲ್ ನರೈನ್, ವೆಂಕಟೇಶ್‌ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್‌ ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಅನುಕೂಲ್ ರಾಯ್, ಹರ್ಷಿತ್‌ ರಾಣಾ, ಅಂಗ್ ಕೃಷ್, ವರುಣ್.

ಡೆಲ್ಲಿ ಕ್ಯಾಪಿಟಲ್ಸ್:

ಪೃಥ್ವಿ ಶಾ, ಡೇವಿಡ್ ವಾರ್ನರ್, ರಿಷಭ್ ಪಂತ್ (ನಾಯಕ), ಮಿಚೆಲ್ ಮಾರ್ಷ್, ಟ್ರಿಸ್ಟಿನ್ ಸ್ಟಬ್, ಅಕ್ಷ‌ರ್ ಪಟೇಲ್, ಅಭಿಷೇಕ್ ಪೊರೆಲ್, ಏನ್ರಿಚ್ ನೋಕಿಯ, ಮುಕೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹಮ್ಮದ್, ರಸಿಖ್.

ಪಂದ್ಯ: ಸಂಜೆ. 7:30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

click me!