
ಅಹಮ್ಮದಾಬಾದ್(ಮಾ.24) ಐಪಿಎಲ್ 2024ರ ಟೂರ್ನಿಯ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಹೋರಾಟ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ಹಾರ್ದಿಕ್ ಪಾಂಡ್ಯ ಗುಜರಾತ್ ತಂಡ ತೊರೆದು ಮುಂಬೈ ಇಂಡಿಯನ್ಸ್ ಸೇರಿಕೊಂಡಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣಾಗಿದೆ. ಹೀಗಾಗಿ ಟಾಸ್ ಸಮಯದಿಂದ ಅಭಿಮಾನಿಗಳು ಹಾರ್ಧಿಕ್ ಪಾಂಡ್ಯ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಬಂದಿದ್ದಾರೆ. ಇತ್ತ ರೋಹಿತ್, ರೋಹಿತ್ ಎಂದು ಘೋಷಣೆ ಕೂಗಿದ್ದಾರೆ. ಅಭಿಮಾನಿಗಳ ಪರ ವಿರೋಧದ ನಡುವೆ ಮುಂಬೈ ಇಂಡಿಯನ್ಸ್ ದಿಟ್ಟ ಬೌಲಿಂಗ್ ಪ್ರದರ್ಶನ ನೀಡಿ ಗುಜರಾತ್ ಟೈಟಾನ್ಸ್ ತಂಡವನ್ನು 168 ರನ್‌ಗೆ ಕಟ್ಟಿಹಾಕಿದೆ.
ಟಾಸ್ ವೇಳೆ ಹಾರ್ದಿಕ್ ಪಾಂಡ್ಯ ಹೆಸರು ಹೇಳುತ್ತಿದ್ದಂತೆ ಅಭಿಮಾನಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ ಕ್ರೀಡಾಂಗದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು ಪಾಂಡ್ಯ ವಿರುದ್ಧ ಕೂಗಿದ್ದಾರೆ. ಇದರ ನಡುವೆ ಅಬ್ಬರದ ಆರಂಭ ಕಂಡ ಗುಜರಾತ್ ಟೈಟಾನ್ಸ್ ಏಕಾಏಕಿ ಕುಸಿತ ಕಂಡಿತು. ಜಸ್ಪ್ರೀತ್ ಬುಮ್ರಾ ದಾಳಿ ಆರಂಭಗೊಳ್ಳುತ್ತಿದ್ದಂತೆ ಗುಜರಾತ್ ಟೈಟಾನ್ಸ್ ಮಂಕಾಯಿತು.
ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸಿ ಅಬ್ಬರಿಸಿದ ವೃದ್ಧಿಮಾನ್ ಸಾಹ 19 ರನ್ ಸಿಡಿಸಿ ಔಟಾದರು. ನಾಯಕ ಶುಭಮನ್ ಗಿಲ್ 31 ರನ್ ಕಾಣಿಕೆ ನೀಡಿದರು. ಸಾಯಿ ಸುದರ್ಶನ್ ಉತ್ತಮ ಹೋರಾಟ ನೀಡಿದರು. ಆದರೆ ಅಜ್ಮುತುಲ್ಹಾ ಒಮರ್ಝಾಯಿ ಕೇವಲ 17 ರನ್ ಸಿಡಿಸಿ ಔಟಾದರು. ಇತ್ತ ಡೇವಿಡ್ ಮಿಲ್ಲರ್ ಕೇವಲ 12 ರನ್ ಸಿಡಿಸಿ ನಿರ್ಗಮಿಸಿದರು. ಹೋರಾಟ ನೀಡಿದ ಸಾಯಿ ಸುದರ್ಶನ್ 45 ರನ್ ಸಿಡಿಸಿ ಔಟಾದರು.
ರಾಹುಲ್ ಟಿವಾಟಿಯಾ 22 ರನ್ ಸಿಡಿಸಿದರು. ರಶೀದ್ ಖಾನ್ ಅಜೇಯ 4 ಹಾಗೂ ವಿಜಯ್ ಶಂಕರ್ ಅಜೇಯ 6 ರನ್ ಸಿಡಿಸಿದರು. ಈ ಮೂಲಕ ಗುಜರಾತ್ ಟೈಟಾನ್ಸ್ 6 ವಿಕೆಟ್ ನಷ್ಟಕ್ಕೆ 168 ರನ್ ಸಿಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.