ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಒಡೆನ್ ಸ್ಮಿತ್, ಅಲ್ಜಾರಿ ಜೋಸೆಫ್, ದಶುನ್ ಶನಕಾ, ಪ್ರದೀಪ್ ಸಂಗ್ವಾನ್, ಊರ್ವಿಲ್ ಪಟೇಲ್, ಶಿವಂ ಮಾವಿ, ಕೆ ಎಸ್ ಭರತ್ ಹಾಗೂ ಯಶ್ ದಯಾಳ್ ಅವರನ್ನು ರಿಲೀಸ್ ಮಾಡಿದೆ. ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 8 ಆಟಗಾರರನ್ನು ರಿಲೀಸ್ ಮಾಡಿದೆ.
ಬೆಂಗಳೂರು(ನ.26): 2024ರ ಐಪಿಎಲ್ ಟೂರ್ನಿಯಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ತೆಕ್ಕೆಗೆ ಸೇರಲಿದ್ದಾರೆ ಎನ್ನುವ ಸುದ್ದಿ ಐಪಿಎಲ್ ವಲಯದಲ್ಲಿ ಸಾಕಷ್ಟು ಸಂಚಲನವನ್ನೇ ಮೂಡಿಸಿತ್ತತು. ಆದರೆ ಈ ಗಾಳಿ ಸುದ್ದಿ ಠುಸ್ ಆಗಿದ್ದು, ನಾಯಕ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡದಲ್ಲೇ ಉಳಿದುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು 2022ರ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು 2023ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಕೊನೆಯ ಎಸೆತದಲ್ಲಿ ಸೋಲು ಕಾಣುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಹಲವು ಊಹಾಪೋಹಗಳಿಗೆ ತೆರೆಬಿದ್ದಿದ್ದು, ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಯಶಸ್ವಿಯಾಗಿದೆ.
IPL Retention: ಹರಾಜಿಗೂ ಮುನ್ನ ಸ್ಪೋಟಕ ಬ್ಯಾಟರ್‌ನನ್ನೇ ಕೈಬಿಟ್ಟ ಪಂಜಾಬ್ ಕಿಂಗ್ಸ್..!
ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಒಡೆನ್ ಸ್ಮಿತ್, ಅಲ್ಜಾರಿ ಜೋಸೆಫ್, ದಶುನ್ ಶನಕಾ, ಪ್ರದೀಪ್ ಸಂಗ್ವಾನ್, ಊರ್ವಿಲ್ ಪಟೇಲ್, ಶಿವಂ ಮಾವಿ, ಕೆ ಎಸ್ ಭರತ್ ಹಾಗೂ ಯಶ್ ದಯಾಳ್ ಅವರನ್ನು ರಿಲೀಸ್ ಮಾಡಿದೆ. ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 8 ಆಟಗಾರರನ್ನು ರಿಲೀಸ್ ಮಾಡಿದೆ.
Our Retained & Released Player List.. pic.twitter.com/OcDFIFyJab
— Gujarat Titans (@Gujrat_titans_)ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಕಿವೀಸ್ ಅನುಭವಿ ಕ್ರಿಕೆಟಿಗ ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ಶುಭ್‌ಮನ್ ಗಿಲ್ ಕನ್ನಡಿಗ ಅಭಿನವ್ ಮನೋಹರ್, ಆಫ್ಘಾನಿಸ್ತಾನದ ಸ್ಪಿನ್ ಅಸ್ತ್ರಗಳಾದ ರಶೀದ್ ಖಾನ್, ನೂರ್ ಅಹಮ್ಮದ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಉಳಿಸಿಕೊಂಡಿದೆ.
ಜೋ ರೂಟ್ ಸೇರಿ 9 ಮಂದಿ ತಂಡದಿಂದ ಕೈಬಿಟ್ಟ ರಾಜಸ್ಥಾನ ರಾಯಲ್ಸ್, ಏಕೈಕ ಕನ್ನಡಿಗ ರೀಟೈನ್!
ಗುಜರಾತ್ ಟೈಟಾನ್ಸ್ ರೀಟೈನ್ ಮಾಡಿಕೊಂಡ ಆಟಗಾರರು ಇವರು:
ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ಶುಭ್‌ಮನ್ ಗಿಲ್, ಕೇನ್ ವಿಲಿಯಮ್ಸನ್, ಮ್ಯಾಥ್ಯೂ ವೇಡ್, ವೃದ್ದಿಮಾನ್ ಸಾಹ, ಅಭಿನವ್ ಮನೋಹರ್, ಬಿ ಸಾಯಿ ಸುದರ್ಶನ್, ದರ್ಶನ್ ನಾಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹಮ್ಮದ್, ಸಾಯಿ ಕಿಶೋರ್, ರಶೀದ್ ಖಾನ್, ಜೋಶ್ವಾ ಲಿಟ್ಲ್, ಮೋಹಿತ್ ಶರ್ಮಾ.
ಗುಜರಾತ್ ಟೈಟಾನ್ಸ್ ರಿಲೀಸ್ ಮಾಡಿದ ಆಟಗಾರರಿವರು:
ಒಡೆನ್ ಸ್ಮಿತ್, ಅಲ್ಜಾರಿ ಜೋಸೆಫ್, ದಶುನ್ ಶನಕಾ, ಪ್ರದೀಪ್ ಸಂಗ್ವಾನ್, ಊರ್ವಿಲ್ ಪಟೇಲ್, ಶಿವಂ ಮಾವಿ, ಕೆ ಎಸ್ ಭರತ್ ಹಾಗೂ ಯಶ್ ದಯಾಳ್