ಪಂಜಾಬ್ ಹಾಗೂ ಚೆನ್ನೈ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಹಿಮಾಚಲ ಕ್ರಿಕೆಟ್ ಸಂಸ್ಥೆ ಮೈದಾನ ಆತಿಥ್ಯ ವಹಿಸಿದೆ. ಪಂಜಾಬ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದಿನ ಪಂದ್ಯಕ್ಕೆ ಕಣಕ್ಕಿಳಿದೆ
ಧರ್ಮಶಾಲಾ(ಮೇ.05): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 53ನೇ ಪಂದ್ಯದಲ್ಲಿಂದು ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಸ್ಯಾಮ್ ಕರ್ರನ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಪಂಜಾಬ್ ಹಾಗೂ ಚೆನ್ನೈ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಹಿಮಾಚಲ ಕ್ರಿಕೆಟ್ ಸಂಸ್ಥೆ ಮೈದಾನ ಆತಿಥ್ಯ ವಹಿಸಿದೆ. ಪಂಜಾಬ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದಿನ ಪಂದ್ಯಕ್ಕೆ ಕಣಕ್ಕಿಳಿದೆ. ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮುಸ್ತಾಫಿಜುರ್ ರೆಹಮಾನ್ ಬದಲಿಗೆ ಮಿಚೆಲ್ ಸ್ಯಾಂಟ್ನರ್ ತಂಡ ಕೂಡಿಕೊಂಡಿದ್ದಾರೆ.
🚨 Toss Update 🚨 elect to bowl first against
Follow the Match ▶️ https://t.co/WxW3UyUZq6 | pic.twitter.com/ilFcGVDc8Q
undefined
ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸತತ 6ನೇ ಗೆಲುವಿನ ಕಾತರದಲ್ಲಿದೆ. ಈ ಹಿಂದಿನ 5 ಮುಖಾಮುಖಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಪಂಜಾಬ್ ಕಿಂಗ್ಸ್ ತಂಡವು ಗೆಲುವಿನ ನಗೆ ಬೀರಿದೆ. ಇನ್ನೊಂದೆಡೆ ಚೆನ್ನೈ ತಂಡ ಗೆಲುವಿನ ಹಳಿಗೆ ಮರಳುವುದರ ಜೊತೆಗೆ ಪ್ಲೇ-ಆಫ್‌ರೇಸ್‌ನಲ್ಲಿ ಉಳಿದುಕೊಳ್ಳುವ ನಿರೀಕ್ಷೆಯಲ್ಲಿದೆ.
ಮುಂಬೈ ಇಂಡಿಯನ್ಸ್ ನಾಕೌಟ್ ಸ್ಟೇಜ್‌ಗೆ ಎಂಟ್ರಿ ನೀಡದೇ ಇದ್ದದ್ದೇ ಒಳ್ಳೇದಾಯ್ತಾ..? ಟೀಮ್ ಇಂಡಿಯಾಗೆ ಲಾಭ..!
ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 10 ಪಂದ್ಯಗಳಲ್ಲಿ ತಲಾ 5 ಗೆಲುವು, ಸೋಲು ಅನುಭವಿಸಿದೆ. ಅತ್ತ ಪಂಜಾಬ್ 10ರಲ್ಲಿ 4 ಪಂದ್ಯ ಗೆದ್ದಿದ್ದು, 6ರಲ್ಲಿ ಸೋತಿದೆ. ಮತ್ತೊಂದೆಡೆ ಪಂಜಾಬ್‌ಗೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಚೆನ್ನೈ ವಿರುದ್ಧ ಸೇರಿದಂತೆ ಉಳಿದೆಲ್ಲಾ 4 ಪಂದ್ಯ ಗೆದ್ದರೂ ಪ್ಲೇ-ಆಫ್‌ಗೇರಬೇಕಿದ್ದರೆ ಇತರ ತಂಡಗಳನ್ನು ನೆಟ್ ರನ್‌ರೇಟ್‌ನಲ್ಲಿ ಹಿಂದಿಕ್ಕಬೇಕಿದೆ.
ಉಭಯ ತಂಡಗಳ ಆಟಗಾರರ ಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್: ಅಜಿಂಕ್ಯ ರಹಾನೆ, ಋತುರಾಜ್ ಗಾಯಕ್ವಾಡ್(ನಾಯಕ), ಡ್ಯಾರಿಲ್ ಮಿಚೆಲ್, ಮೊಯೀನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ, ಶಾರ್ದೂಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ರಿಚರ್ಡ್ ಗ್ಲೀಸನ್, ತುಷಾರ ದೇಶಪಾಂಡೆ.
ಪಂಜಾಬ್ ಕಿಂಗ್ಸ್: ಜಾನಿ ಬೇರ್‌ಸ್ಟೋವ್, ಸ್ಯಾಮ್ ಕರ್ರನ್(ನಾಯಕ), ರೀಲೆ ರೋಸ್ಸೌ, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ, ಅಶುತೋಶ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ರಾಹುಲ್ ಚಹರ್, ಅರ್ಶ್‌ದೀಪ್ ಸಿಂಗ್.
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ