IPL 2024: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ನಿರ್ಣಾಯಕ ಫೈಟ್..!

By Kannadaprabha News  |  First Published Apr 27, 2024, 8:51 AM IST

5 ಬಾರಿ ಚಾಂಪಿಯನ್‌ ಮುಂಬೈ ಈ ಬಾರಿ 8 ಪಂದ್ಯಗಳನ್ನಾಡಿದ್ದು, 3ರಲ್ಲಿ ಗೆದ್ದು 6ರಲ್ಲಿ ಪರಾಭವಗೊಂಡಿದೆ. ಮತ್ತೊಂದು ಸೋಲು ತಂಡವನ್ನು ನಾಕೌಟ್‌ನಿಂದ ಬಹುತೇಕ ಹೊರಗಿಡಲಿದೆ. ಹ್ಯಾಟ್ರಿಕ್‌ ಸೋಲಿನ ಬಳಿಕ ಮುಂಬೈ ಪುಟಿದೆದ್ದರೂ ಅಸ್ಥಿರ ಆಟ ತಂಡವನ್ನು ಸೋಲಿನತ್ತ ನೂಕುತ್ತಿದೆ.


ನವದೆಹಲಿ(ಏ.27): 17ನೇ ಆವೃತ್ತಿ ಐಪಿಎಲ್‌ನಲ್ಲಿ ಸಾಧಾರಣ ಪ್ರದರ್ಶನ ನೀಡುತ್ತಿರುವ 2 ತಂಡಗಳಾದ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಶನಿವಾರ ಪರಸ್ಪರ ಮುಖಾಮುಖಿಯಾಗಲಿವೆ. ಪ್ಲೇ-ಆಫ್‌ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಅದರಲ್ಲೂ ಮುಂಬೈಗೆ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಲು ಗೆಲುವು ಅನಿವಾರ್ಯ.

5 ಬಾರಿ ಚಾಂಪಿಯನ್‌ ಮುಂಬೈ ಈ ಬಾರಿ 8 ಪಂದ್ಯಗಳನ್ನಾಡಿದ್ದು, 3ರಲ್ಲಿ ಗೆದ್ದು 6ರಲ್ಲಿ ಪರಾಭವಗೊಂಡಿದೆ. ಮತ್ತೊಂದು ಸೋಲು ತಂಡವನ್ನು ನಾಕೌಟ್‌ನಿಂದ ಬಹುತೇಕ ಹೊರಗಿಡಲಿದೆ. ಹ್ಯಾಟ್ರಿಕ್‌ ಸೋಲಿನ ಬಳಿಕ ಮುಂಬೈ ಪುಟಿದೆದ್ದರೂ ಅಸ್ಥಿರ ಆಟ ತಂಡವನ್ನು ಸೋಲಿನತ್ತ ನೂಕುತ್ತಿದೆ. ಎಲ್ಲಾ ವಿಭಾಗದಲ್ಲೂ ಸುಧಾರಿತ ಪ್ರದರ್ಶನ ನೀಡಿದರೆ ಮಾತ್ರ ಹಾರ್ದಿಕ್‌ ನಾಯಕತ್ವದ ಮುಂಬೈಗೆ ಈ ಪಂದ್ಯದಲ್ಲಿ ಗೆಲುವು ದಕ್ಕಲಿದೆ.

Latest Videos

undefined

ಕೆಕೆಆರ್ ಎದುರು 262 ರನ್‌ ಚೇಸ್‌: ಪಂಜಾಬ್ ಟಿ20 ವಿಶ್ವದಾಖಲೆ!

ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಬೇಕಿದ್ದರೆ ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಹಾಗೂ ನೆಹಾಲ್ ವದೇರಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಬೇಕು. ಇನ್ನು ಮಹತ್ವದ ಘಟ್ಟದಲ್ಲಿ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟ ಪ್ರದರ್ಶಿಸಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಗೆರಾಲ್ಡ್ ಕೋಟ್ಜೀ ಸಂಘಟಿತ ಪ್ರದರ್ಶನ ತೋರಬೇಕಿದೆ.

ಮತ್ತೊಂದೆಡೆ ಡೆಲ್ಲಿ 9ರಲ್ಲಿ 4 ಪಂದ್ಯ ಗೆದ್ದಿದ್ದು, 5ರಲ್ಲಿ ಸೋಲನುಭವಿಸಿದೆ. ಮೊದಲ ಮುಖಾಮುಖಿಯಲ್ಲಿ ಮುಂಬೈಗೆ ಶರಣಾಗಿದ್ದ ತಂಡ ಈ ಬಾರಿ ಸೇಡಿನ ಕಾತರದಲ್ಲಿದೆ. ರಿಷಭ್‌ ಪಂತ್‌ ತಂಡದ ಆಧಾರಸ್ತಂಭ ಎನಿಸಿಕೊಂಡಿದ್ದು, ಬೌಲರ್‌ಗಳು ಮೊನಚು ದಾಳಿ ಸಂಘಟಿಸಬೇಕಿದೆ. ಜೇಕ್ ಫ್ರೇಸರ್‌, ಸ್ಟಬ್ಸ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಸನ್‌ರೈಸರ್ಸ್ ಬಗ್ಗುಬಡಿದು 'ಸೈಲೆಂಟ್ ಸೆಲಿಬ್ರೇಷನ್' ಮಾಡಿದ RCB ಫ್ಯಾನ್ಸ್..! ಬೆಂಗಳೂರು ಅಭಿಮಾನಿಗಳ ಹಾವಳಿ ವೈರಲ್

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇ ಆಫ್ ರೇಸ್‌ನಲ್ಲಿ ಉಳಿಯಬೇಕಿದ್ದರೆ, ಪ್ರೇಸರ್ ಜತೆಗೆ ಟ್ರಿಸ್ಟಿನ್ ಸ್ಟಬ್ಸ್, ನಾಯಕ ರಿಷಭ್ ಪಂತ್ ಮತ್ತೊಮ್ಮೆ ಸಿಡಿಯಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಮುಕೇಶ್ ಕುಮಾರ್, ಖಲೀಲ್ ಅಹಮದ್, ಕುಲ್ದೀಪ್ ಯಾದವ್ ಮಾರಕ ದಾಳಿ ನಡೆಸಬೇಕಿದೆ.

ಒಟ್ಟು ಮುಖಾಮುಖಿ: 34

ಮುಂಬೈ: 19

ಡೆಲ್ಲಿ: 15

ಸಂಭವನೀಯ ಆಟಗಾರರು

ಮುಂಬೈ: ಇಶಾನ್‌ ಕಿಶನ್, ರೋಹಿತ್‌ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ(ನಾಯಕ), ಟಿಮ್ ಡೇವಿಡ್, ನೇಹಲ್‌ ವದೇರಾ, ಮೊಹಮ್ಮದ್ ನಬಿ, ಗೆರಾಲ್ಡ್ ಕೋಟ್ಜೀ, ಪೀಯೂಸ್ ಚಾವ್ಲಾ, ಜಸ್ಪ್ರೀತ್ ಬುಮ್ರಾ.

ಡೆಲ್ಲಿ: ಪೃಥ್ವಿ ಶಾ, ಫ್ರೇಸರ್‌, ಅಭಿಷೇಕ್‌ ಪೊರೆಲ್, ಶಾಯ್ ಹೋಪ್‌, ರಿಷಭ್‌ ಪಂತ್(ನಾಯಕ), ಟ್ರಿಸ್ಟಿನ್ ಸ್ಟಬ್ಸ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ಏನ್ರಿಚ್ ನೋಕಿಯಾ, ಖಲೀಲ್‌ ಅಹಮದ್, ಮುಕೇಶ್‌ ಕುಮಾರ್.

ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

click me!