ಗುಜರಾತ್ ಟೈಟಾನ್ಸ್ ವಿರುದ್ಧ ನಾಯಕ ಕೆಎಲ್ ರಾಹುಲ್ 33, ಮಾರ್ಕಸ್ ಸ್ಟೊಯ್ನಿಸ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರೂ ಲಖನೌ ಸೂಪರ್ ಜೈಂಟ್ಸ್ ನಿರೀಕ್ಷಿತ ರನ್ ಗಳಿಸಲಿಲ್ಲ. ಅಂತಿಮ ಹಂತದಲ್ಲಿ ಪೂರನ್ ಹಾಗೂ ಬದೋನಿ ಹೋರಾಟದಿಂದ ಲಖನೌ ಸೂಪರ್ ಜೈಂಟ್ಸ್ 163 ರನ್ ಸ್ಪರ್ಧಾತ್ಮಕ ಮೊತ್ತ ಸಿಡಿಸಿದೆ.
ಲಖನೌ(ಏ.07) ಐಪಿಎಲ್ 2024ರಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಲಖನೌ ಸೂಪರ್ ಜೈಂಟ್ಸ್, ಗುಜರಾತ್ ಟೈಟಾನ್ಸ್ ಆರಂಭದಲ್ಲಿ ಮಂಕಾಗಿತ್ತು. ಅಬ್ಬರದ ಬ್ಯಾಟಿಂಗ್ ಇರಲಿಲ್ಲ, ಒಂದಿಬ್ಬರ ರನ್ ಗಳಿಸಿದ್ದು ಬಿಟ್ಟರೆ ಮತ್ಯಾರಿಂದಲೂ ಹೋರಾಟವಿರಲಿಲ್ಲ. ಆದರೆ ಅಂತಿಮ ಹಂತದಲ್ಲಿ ಚಿಗುರಿಕೊಂಡಿತು. ನಾಯಕ ಕೆಎಲ್ ರಾಹುಲ್, ಮಾರ್ಕಸ್ ಸ್ಟೊಯ್ನಿಸ್, ಆಯುಷ್ ಬದೋನಿ, ನಿಕೋಲಸ್ ಹೋರಾಟದಿಂದ ಲಖನೌ 5 ವಿಕೆಟ್ ನಷ್ಟಕ್ಕೆ 163 ರನ್ ಸಿಡಿಸಿದೆ.
ಟಾಸ್ ಲಖನೌ ತಂಡವೇ ಗೆದ್ದಿತ್ತು. ಬ್ಯಾಟಿಂಗ್ ಆಯ್ಕೆಮಾಡಿಕೊಂಡು ಬೃಹತ್ ಮೊತ್ತ ಸಿಡಿಸುವ ವಿಶ್ವಾಸದಲ್ಲಿದ್ದ ಲಖನೌ ತಂಡಕ್ಕೆ ಗುಜರಾತ್ ಶಾಕ್ ನೀಡಿತು. ಆರಂಭದಲ್ಲೇ ಕ್ವಿಂಟನ್ ಡಿಕಾಕ್ ವಿಕೆಟ್ ಪತನಗೊಂಡಿತು. ಡಿಕಾಕ್ 6 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ದೇವದತ್ತ ಪಡಿಕ್ಕಲ್ 7 ರನ್‌ಗೆ ಸುಸ್ತಾದರು. ದಿಢೀರ್ ವಿಕೆಟ್ ಪತನದಿಂದ ಲಖನೌ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ಕಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಬದಲು ವಿಕೆಟ್ ಉಳಿಸಿಕೊಂಡು ರನ್ ಗಳಿಸುವ ಪ್ರಯತ್ನ ಮಾಡಿದರು.
ಸ್ಟಬ್ಸ್ ಏಕಾಂಗಿ ಹೋರಾಟ ವ್ಯರ್ಥ: ಕೊನೆಗೂ ಗೆಲುವಿನ ಖಾತೆ ತೆರೆದ ಮುಂಬೈ ಇಂಡಿಯನ್ಸ್
ಮಾರ್ಕಸ್ ಸ್ಟೊಯ್ನಿಸ್ ಹಾಗೂ ಕೆಎಲ್ ರಾಹುಲ್ ಹೋರಾಟದಿಂದ ಲಖನೌ ಚೇತರಿಸಿಕೊಂಡಿತು. ಆದರೆ ರಾಹುಲ್ ಹಾಗೂ ಸ್ಟೊಯ್ನಿಸ್ ಸ್ಟ್ರೈಕ್ ರೇಟ್ ಟಿ20 ಕ್ರಿಕೆಟ್‌ಗೆ ಕಡಿಮೆಯಾಯಿತು. ರಾಹುಲ್ 33 ರನ್ ಸಿಡಿಸಿ ಔಟಾದರು. ಇತ್ತ ಸ್ಟೊಯ್ನಿಸ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಸ್ಟೊಯ್ನಿಸ್ 43 ಎಸೆತದಲ್ಲಿ 58 ರನ್ ಸಿಡಿಸಿ ಔಟಾದರು.
ಮಂಕಾಗಿದ್ದ ಲಖನೌ ತಂಡಕ್ಕೆ ಅಂತಿಮ ಹಂತದಲ್ಲಿ ನಿಕೋಲಸ್ ಪೂರನ್ ಹಾಗೂ ಆಯುಷ್ ಬದೋನಿ ಸ್ಫೋಟಕ ಬ್ಯಾಟಿಂಗ್ ನೆರವಾಯಿತು. ಬದೋನಿ 20 ರನ್ ಸಿಡಿಸಿ ಔಟಾದರು. ಆದರೆ ಪೂರನ್ ಹೋರಾಟ ಮುಂದವರಿಯಿತು. ಸಿಕ್ಸರ್ ಮೂಲಕ ಅಬ್ಬರಿಸಿದ ಪೂರನ್ ಲಖನೌ ತಂಡದ ಅಲ್ಪ ಮೊತ್ತ ಆತಂಕ ದೂರ ಮಾಡಿದರು. ಪೂರನ್ ಅಜೇಯ 32 ರನ್ ಸಿಡಿಸಿದರು. ಈ ಮೂಲಕ ಲಖನೌ 5 ವಿಕೆಟ್ ನಷ್ಟಕ್ಕೆ 163 ರನ್ ಸಿಡಿಸಿತು.
ಲಖನೌ ನೀಡಿದ ಟಾರ್ಗೆಟ್‌ನ್ನು ಗುಜರಾತ್ ಸುಲಭವಾಗಿ ಚೇಸ್ ಮಾಡಲಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಗುಜರಾತ್ ತಂಡದ ಬ್ಯಾಟಿಂಗ್ ಲೈನ್ ಅಪ್ ಕೂಡ ಉತ್ತಮವಾಗಿದೆ.
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11
ಶುಭಮನ್ ಗಿಲ್(ನಾಯಕ), ಶರತ್ ಬಿಆರ್, ಸಾಯಿ ಸುದರ್ಶನ್, ವಿಜಯ್ ಶಂಕರ್, ರಾಹುಲ್ ಟಿವಾಟಿಯಾ, ರಶೀದ್ ಖಾನ್, ನೂರ್ ಅಹಮ್ಮದ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ದರ್ಶನ್ ನಾಲ್ಕಂಡೆ, ಮೊಹಿತ್ ಶರ್ಮಾ