
ಹೈದರಾಬಾದ್(ಏ.02):ರಾಜಸ್ಥಾನ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ ಹಾಫ್ ಸೆಂಚುರಿ. ಇತ್ತ ಯಜುವೇಂದ್ರ ಚಹಾಲ್ ಸ್ಪಿನ್ ಮೋಡಿ, ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ತೀವ್ರ ಆಘಾತ ನೀಡಿದೆ. ಈ ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ಸನ್‌ರೈಸರ್ಸ್ ವಿರುದ್ದ ರಾಜಸ್ಥಾನ ರಾಯಲ್ಲ್ 72 ರನ್ ಭರ್ಜರಿ ಗೆಲುವು ದಾಖಲಿಸಿದೆ.204 ರನ್ ಟಾರ್ಗೆಟ್ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿತು. ಈ ಮೂಲಕ 72 ರನ್ ಹೀನಾಯ ಸೋಲು ಕಂಡಿತು.
ಬೃಹತ್ ಗುರಿ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಮಯಾಂಕ್ ಅಗರ್ವಾಲ್ ಹೋರಾಟ ನೀಡುವ ಸೂಚನೆ ನೀಡಿದರು. ಆದರೆ ರಾಹುಲ್ ತ್ರಿಪಾಠಿ ಡಕೌಟ್ ಆದರು. ಹ್ಯಾರಿ ಬ್ರೂಕ್ 13 ರನ್ ಸಿಡಿಸಿ ಔಟಾದರು. ವಾಶಿಂಗ್ಟನ್ ಸುಂದರ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಮಯಾಂಕ್ ಅಗರ್ವಾಲ್ ಹೋರಾಟ ಕೇವಲ 27 ರನ್‌ಗೆ ಅಂತ್ಯಗೊಂಡಿತು.
ಐಪಿಎಲ್ ಪಂದ್ಯ ವೀಕ್ಷಣೆಗೆ ಕ್ರೀಡಾಂಗಣಕ್ಕೆ ತೆರಳುತ್ತಿದ್ದೀರಾ? ನಿಷೇಧಿತ ವಸ್ತುಗಳ ಲಿಸ್ಟ್‌ಗೆ ಮತ್ತೊಂದು ಸೇರ್ಪಡೆ!
ಗ್ಲೇನ್ ಫಿಲಿಪ್ಸ್ 8 ರನ್ ಸಿಡಿಸಿ ಔಟಾದರು. ಅಬ್ದುಲ್ ಸಮಾದ್ ದಿಟ್ಟ ಹೋರಾಟ ನೀಡಿದರೆ, ಇತರರಿಂದ ಉತ್ತಮ ಹೋರಾಟ ಮೂಡಿಬರಲಿಲ್ಲ. ಆದಿಲ್ ರಶೀದ್ 18 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಅಬ್ದುಲ್ ಸಮಾದ್ ಹಾಗೂ ಉಮ್ರಾನ್ ಮಲಿಕ್ ಹೋರಾಟದಿಂದ ಸನ್‌ರೈಸರ್ಸ್ ಹೈದರಾಬಾದ್ ಸೋಲಿನ ಅಂತರ ಕಡಿಮೆ ಮಾಡಿದು. ಸಮಾದ್ ಅಜೇಯ 32 ರನ್ ಸಿಡಿಸಿದರೆ, ಉಮ್ರಾನ್ ಮಲಿಕ್ 19 ರನ್ ಸಿಡಿಸಿದರು. ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿತು. ಈ ಮೂಲಕ ರಾಜಸ್ಥಾನ ರಾಯಲ್ಸ್ 72 ರನ್ ಗೆಲುವು ದಾಖಲಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.