ಐಪಿಎಲ್ ಪಂದ್ಯ ವೀಕ್ಷಣೆಗೆ ಕ್ರೀಡಾಂಗಣಕ್ಕೆ ತೆರಳುತ್ತಿದ್ದೀರಾ? ನಿಷೇಧಿತ ವಸ್ತುಗಳ ಲಿಸ್ಟ್‌ಗೆ ಮತ್ತೊಂದು ಸೇರ್ಪಡೆ!

Published : Apr 02, 2023, 06:00 PM IST
ಐಪಿಎಲ್ ಪಂದ್ಯ ವೀಕ್ಷಣೆಗೆ ಕ್ರೀಡಾಂಗಣಕ್ಕೆ ತೆರಳುತ್ತಿದ್ದೀರಾ? ನಿಷೇಧಿತ ವಸ್ತುಗಳ ಲಿಸ್ಟ್‌ಗೆ ಮತ್ತೊಂದು ಸೇರ್ಪಡೆ!

ಸಾರಾಂಶ

ಐಪಿಎಲ್ ಪಂದ್ಯ ಕ್ರೀಡಾಂಗಣದಲ್ಲಿ ವೀಕ್ಷಿಸಲು ಅಭಿಮಾನಿಗಳು ಹಾತೊರೆಯುತ್ತಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ನೆಚ್ಚಿನ ತಂಡಕ್ಕೆ ಬೆಂಬಲ ಸೂಚಿವು ಮಜಾನೇ ಬೇರೆ. ಆದರೆ ಅಭಿಮಾನಿಗಳು ಕ್ರೀಡಾಂಗಣದೊಳಗೆ ಪ್ರವೇಶಿಸುವಾಗ ಕೆಲ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಈ ಪಟ್ಟಿಗೆ ಮತ್ತೊಂದು ಸೇರಿಕೊಂಡಿದೆ.

ಮುಂಬೈ(ಏ.02): ಐಪಿಎಲ್ ಕ್ರಿಕೆಟ್ ಹಬ್ಬ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ದಿನವಿಡೀ ಸರದಿ ಸಾಲಲ್ಲಿ ನಿಂತು ಟಿಕೆಟ್ ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನು ಪಂದ್ಯದ ದಿನ ಕ್ರೀಡಾಂಗಣ ಪ್ರವೇಶಿಸುವ ಅಭಿಮಾನಿಗಳು ಕೆಲ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಕ್ರೀಡಾಂಗಣದೊಳಕ್ಕೆ ಬಿಸಿಸಿಐ ನಿಷೇಧಿತ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಈ ಪಟ್ಟಿಗೆ ಇದೀಗ ಮತ್ತೊಂದು ಸೇರಿಕೊಂಡಿದೆ. ಸಿಎಎ ಹಾಗೂ ಎನ್‌ಆರ್‌ಸಿಸಿ ಕಾಯ್ದೆ ವಿರೋಧಿಸುವ ಪ್ರತಿಭಟನಾ ಬ್ಯಾನರ್ ಕ್ರೀಡಾಂಗಣದೊಳಕ್ಕೆ ಕೊಂಡೊಯ್ಯುವಂತಿಲ್ಲ. ಈ ಕುರಿತು ಪೇಟಿಎಂ ಇನ್‌ಸೈಡರ್ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ದೆಹಲಿ, ಮೊಹಾಲಿ, ಹೈದರಾಬಾದ್ ಹಾಗೂ ಅಹಮ್ಮದಾಬಾದ್ ಕ್ರೀಡಾಂಗಣದಲ್ಲಿನ ಪಂದ್ಯದ ವೇಳೆ  ಯಾವುದೇ ಪ್ರತಿಭಟಟನಾ ಬ್ಯಾನರ್ ಕ್ರೀಡಾಂಗಣದೊಳಕ್ಕೆ ಕೊಂಡೊಯ್ಯಲು ಅವಕಾಶವಿಲ್ಲ. ಇನ್ನು ಕ್ರೀಡಾಂಗಣದೊಳಗೆ ಪೈಂಟ್ ಅಥವಾ ಇನ್ಯಾವುದರಿಂದ ಪ್ರತಿಭಟನಾ ಬ್ಯಾನರ್ ರಚಿಸಿ ಪ್ರದರ್ಶಿಸುವುದು ಕಾನೂನು ಉಲ್ಲಂಘನೆಯಾಗಿದೆ ಎಂದಿದೆ. ಈ ರೀತಿಯ ಯಾವುದೇ ಪ್ರತಿಭಟನಾ ಬ್ಯಾನರ್‌ಗೆ ಅವಕಾಶವಿಲ್ಲ. ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್, ಲಖನೌ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ತಂಡಕ್ಕೆ ಪೇಟಿಂ ಇನ್‌ಸೈಡರ್ ಅಧಿಕೃತ ಟಿಕೆಟ್ ಪಾರ್ಟ್ನರ್ ಆಗಿದೆ.

IPL 2023 ಪಂದ್ಯಕ್ಕೂ ಮೊದಲೇ ಆರ್‌ಸಿಬಿಗೆ ಬ್ಯಾಡ್ ನ್ಯೂಸ್, ಸ್ಟಾರ್ ಆಲ್‌ರೌಂಡರ್ ಅಲಭ್ಯ!

ಕ್ರಿಕೆಟ್ ಪಂದ್ಯದ ವೇಳೆ ಯಾವುದೇ ರೀತಿಯ ನಿಯಮ ಉಲ್ಲಂಘನೆಗೆ ಅವಕಾಶವಿಲ್ಲ. ಬಿಸಿಸಿಐ ಮಾರ್ಗಸೂಚಿಯಲ್ಲಿ ಈ ಕುರಿತು ಸ್ಪಷ್ಟ ಉಲ್ಲೇಖವಿದೆ. ಯಾವುದೇ ರೀತಿಯ ಪ್ರಚಾರ, ರಾಜಕೀಯ ಅಥವಾ ಗಲಭ ವಿಚಾರ, ಬಿಸಿಸಿಐ ಮಾರ್ಕೆಟಿಂಗ್ ಹಾಗೂ ಜಾಹೀರಾತು ನಿಯಮ ಉಲ್ಲಂಘನೆಗೆ ಅವಕಾಶವಿಲ್ಲ. 

ಕೇವಲ ಪ್ರತಿಭಟನಾ ಬ್ಯಾನರ್ ಮಾತ್ರವಲ್ಲ, ಪ್ರೇಕ್ಷರಾಗಿ ಪಂದ್ಯ ನೋಡಲು ತೆರಳುವ ಅಭಿಮಾನಿಗಳು, ಕ್ಯಾಮರಾ, ಇತರ ರೆಕಾರ್ಡಿಂಗ್ ವಸ್ತುಗಳು, ಲ್ಯಾಪ್‌ಟಾಪ್, ಪವರ್ ಬ್ಯಾಂಕ್, ಬೈನಾಕುಲರ್, ಲೈಟರ್ಸ್, ಮ್ಯಾಚ್‌ಬಾಕ್ಸ್, ಸಿಗರೇಟು, ಸಾಕು ಪ್ರಾಣಿ, ಪಟಾಕಿ, ಸೆಲ್ಫಿ ಸ್ಟಿಕ್, ಸಿಗರೇಟು, ಚಾಕು ಸೇರಿದಂತೆ ಯಾವುದೇ ಶಸ್ತ್ರಾಸ್ತ್ರ, ಮದ್ಯ, ಡ್ರಗ್ಸ್ ಸೇರಿದಂತೆ ಕೆಲ ವಸ್ತುಗಳನ್ನು ಕ್ರೀಡಾಂಗಣದೊಳಕ್ಕೆ ಕೊಂಡಯ್ಯಲು ಅವಕಾಶವಿಲ್ಲ.

 ಬ್ಯಾನರ್ ಹಾಗೂ ಕ್ರಿಕೆಟ್ ತಂಡ ಹೊರತುಪಡಿಸಿದ ಫ್ಲಾಗ್, ರಿಮೂಟ್ ಕಂಟ್ರೋಲ್ ಸಾಧನಗಳನ್ನು ನಿಷೇಧಿಸಲಾಗಿದೆ. ಈ ವಸ್ತುಗಳನ್ನು ಅಭಿಮಾನಿಗಳು ತಂದಿದ್ದರೆ ಅದನ್ನು ಭದ್ರತಾ ಸಿಬ್ಬಂದಿ, ಅಥವಾ ಕ್ರೀಡಾಂಗಣ ಸಿಬ್ಬಂದಿಗೆ ಹಸ್ತಾಂತರಿಸುವುದು, ಅಥವಾ ಸುರಕ್ಷಿತವಾಗಿಡಲು ಸೂಚಿಸುವುದು ನಿಯಮ ಉಲ್ಲಂಘನೆಯಾಗಿದೆ.

IPL 2023: ಮುಂಬೈ ಎದುರಿನ ಮೊದಲ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ; ಯಾರಿಗೆಲ್ಲಾ ಸಿಗಲಿದೆ ಸ್ಥಾನ?

ಚಿನ್ನಸ್ವಾಮಿ ಪಂದ್ಯಗಳ ಟಿಕೆಟ್‌ಗೆ ದುಬಾರಿ ಬೆಲೆ ಇದೆ. ಆದರೆ ಮಧ್ಯರಾತ್ರಿಯಿಂದಲೇ ಟಿಕೆಟ್‌ಗಾಗಿ ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತಿದ್ದರು. ಟಿಕೆಟ್ ಖರೀದಿಸಲು ಮುಗಿಬಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಇತ್ತ ಹಲವರು ಟಿಕೆಟ್ ಸಿಗದೆ ನಿರಾಸೆ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಕೇಂದ್ರದಲ್ಲಿ ಹೆಚ್ಚಿನ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026 ಟೂರ್ನಿಗೂ ಮೊದಲೇ ಅರೆಸ್ಟ್ ಆಗ್ತಾರಾ ಆರ್‌ಸಿಬಿ ವೇಗಿ ಯಶ್ ದಯಾಳ್‌?
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಿಂದ ಹೊರಬಿದ್ದ ವೈಭವ್ ಸೂರ್ಯವಂಶಿ; ಕಾರಣ ತುಂಬಾ ಇಂಟ್ರೆಸ್ಟಿಂಗ್!