ಕೊನೆವರೆಗೂ ರೋಚಕತೆ ಕಾಯ್ದುಕೊಂಡ 16ನೇ ಆವೃತ್ತಿ ಐಪಿ​ಎಲ್‌ಗೆ ತೆರೆ!

By Kannadaprabha News  |  First Published May 30, 2023, 9:49 AM IST

ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಸಾಕ್ಷಿಯಾದ ಟೂರ್ನಿ
ಪ್ರತಿ ಪಂದ್ಯವೂ ಒಂದಕ್ಕಿಂತ ಒಂದು ರೋಚಕ
ಹಲವು ನೂತನ ದಾಖಲೆಗಳು ನಿರ್ಮಾಣ
ಕ್ರಿಕೆಟ್‌ ಅಭಿಮಾನಿಗಳಿಗೆ ಭರಪೂರ ಮನರಂಜನೆ


ಅಹ​ಮ​ದಾ​ಬಾ​ದ್‌(ಮೇ.30): ಎರ​ಡು ತಿಂಗಳ ಕಾಲ ಭಾರತ ಹಾಗೂ ವಿಶ್ವ​ದೆ​ಲ್ಲೆ​ಡೆಯ ಕ್ರಿಕೆಟ್‌ ಅಭಿ​ಮಾ​ನಿ​ಗ​ಳಿಗೆ ಭರ​ಪೂರ ಮನ​ರಂಜನೆ ಒದ​ಗಿ​ಸಿದ 16ನೇ ಆವೃ​ತ್ತಿಯ ಇಂಡಿ​ಯನ್‌ ಪ್ರೀಮಿ​ಯರ್‌ ಲೀಗ್‌​(​ಐ​ಪಿ​ಎ​ಲ್‌​)ಗೆ ಸೋಮವಾರ ತೆರೆ ಬಿದ್ದಿದೆ. ಭಾನುವಾರ ಬಿಡದೆ ಮಳೆ ಸುರಿದ ಕಾರಣ, ಫೈನಲ್‌ ಪಂದ್ಯವನ್ನು ಮೀಸಲು ದಿನವಾಗಿದ್ದ ಸೋಮವಾರಕ್ಕೆ ಮುಂದೂಡಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಬಾಕಿ ಇದ್ದ ಸಂಗೀತ ಕಾರ‍್ಯಕ್ರಮಗಳು ಸೋಮವಾರ ಪ್ರದರ್ಶನಗೊಂಡವು.

ಮಾ.31ರಂದು ಇದೇ ಕ್ರೀಡಾಂಗ​ಣ​ದಲ್ಲಿ ಚೆನ್ನೈ ಹಾಗೂ ಗುಜ​ರಾತ್‌ ನಡು​ವಿನ ಪಂದ್ಯದ ಮೂಲಕ ಟೂರ್ನಿಗೆ ಚಾಲನೆ ದೊರೆತಿತ್ತು. ಫೈನಲ್‌ನಲ್ಲೂ ಈ ಎರಡು ತಂಡಗಳೇ ಎದುರಾಗಿದ್ದು ವಿಶೇಷ. ಕ್ರೀಡಾಂಗ​ಣ​ಗ​ಳಿಗೆ ಮತ್ತೆ ಪ್ರೇಕ್ಷ​ಕರ ಆಗ​ಮನ, ಹಲವು ಹೊಸ ನಿಯ​ಮ, ನವ ತಾರೆ​ಗಳ ಉದ​ಯ​ದೊಂದಿಗೆ ಈ ಬಾರಿ ಪ್ರೇಕ್ಷಕರಿಗೆ ಹಲವು ರೋಚಕ ಕ್ಷಣಗಳನ್ನು ಕಟ್ಟಿಕೊಟ್ಟಿತು.

𝗖.𝗛.𝗔.𝗠.𝗣.𝗜.𝗢.𝗡.𝗦! 🏆

Chennai Super Kings Captain MS Dhoni receives the Trophy from BCCI President Roger Binny and BCCI Honorary Secretary 👏👏 | | pic.twitter.com/WP8f3a9mMc

— IndianPremierLeague (@IPL)

Tap to resize

Latest Videos

ಟೂರ್ನಿಯುದ್ದಕ್ಕೂ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕೊರತೆಯಿರಲಿಲ್ಲ. ಈ ಬಾರಿ ಐಪಿ​ಎ​ಲ್‌​ನಲ್ಲಿ ರನ್‌ ಮಳೆಯೇ ಸುರಿಯಿತು. 2100ಕ್ಕೂ ಅಧಿಕ ಬೌಂಡರಿ, 1100ಕ್ಕೂ ಅಧಿಕ ಸಿಕ್ಸರ್‌ಗಳು, ದಾಖಲೆಯ 12 ಶತಕಗಳು, ಅತಿಹೆಚ್ಚು ವಿಕೆಟ್‌ಗಳು ಹೀಗೆ ಎಲ್ಲಾ ವಿಭಾಗಗಳಲ್ಲೂ ಈ ಆವೃತ್ತಿ ದಾಖಲೆಗಳಿಗೆ ಸಾಕ್ಷಿಯಾಯಿತು.

CSK Champion: ಗುಜರಾತ್ ಮಣಿಸಿದ ಧೋನಿ ಸೇನೆ ಐಪಿಎಲ್ ಚಾಂಪಿಯನ್‌

ವಿವಾ​ದ​ಗ​ಳಿ​ಲ್ಲದೇ ಮುಗಿದ ಟೂರ್ನಿ

ಕೋವಿಡ್‌ ಬಳಿಕ ಮತ್ತೆ ಎಂದಿನ ಶೈಲಿಗೆ ಮರ​ಳಿದ್ದ ಐಪಿ​ಎಲ್‌ ಯಾವುದೇ ದೊಡ್ಡ ಮಟ್ಟಿನ ವಿವಾ​ದ​ಗ​ಳಿ​ಲ್ಲದೇ ಕೊನೆ​ಗೊಂಡಿ​ತು. ವಿರಾಟ್‌ ಕೊಹ್ಲಿ-ಗೌತಮ್‌ ಗಂಭೀರ್‌, ಹೃತಿಕ್‌ ಶೋಕೀನ್‌-ನಿತೀಶ್‌ ರಾಣಾ ಸೇರಿ ಕೆಲ ಆಟಗಾರರ ನಡುವೆ ಸಣ್ಣ-ಪುಟ್ಟಮಾತಿನ ಚಕಮಕಿ ಹೊರತುಪಡಿಸಿ ಯಾವುದೇ ದೊಡ್ಡ ವಿವಾದ ಈ ಬಾರಿ ಕಂಡು​ಬ​ರ​ಲಿಲ್ಲ.

3 ವರ್ಷಗಳ ಬಳಿಕ ಮತ್ತೆ ಪ್ರೇಕ್ಷ​ಕ​ರಿಗೆ ಹಬ್ಬ!

ಕೋವಿ​ಡ್‌​ನಿಂದಾಗಿ 3 ವರ್ಷ​ಗಳ ಕಾಲ ಅಭಿ​ಮಾ​ನಿ​ಗ​ಳಿಗೆ ಐಪಿ​ಎ​ಲ್‌​ನಲ್ಲಿ ಕ್ರೀಡಾಂಗ​ಣಕ್ಕೆ ಅವ​ಕಾ​ಶ​ವಿ​ರ​ಲಿಲ್ಲ. 2019ರ ಬಳಿಕ ಮತ್ತೆ ಈ ಬಾರಿ ಐಪಿಎಲ್‌ ತನ್ನ ಹಳೆಯ ಮಾದರಿಗೆ ವಾಪಸಾಗಿದ್ದು, ಪ್ರೇಕ್ಷ​ಕರು ಕ್ರೀಡಾಂಗ​ಣಕ್ಕೆ ಆಗ​ಮಿಸಿ ನೇರ​ವಾಗಿ ಪಂದ್ಯ ವೀಕ್ಷಿ​ಸಿ​​, ಕುಣಿದು ಕುಪ್ಪ​ಳಿ​ಸಿದರು. ಬೆಂಗ​ಳೂ​ರಿನ ಚಿನ್ನ​ಸ್ವಾಮಿ ಸೇರಿ​ದಂತೆ ಹಲವು ಕ್ರೀಡಾಂಗ​ಣ​ಗ​ಳಲ್ಲಿ ಟಿಕೆ​ಟ್‌​ಗಾಗಿ ನೂಕು​ನು​ಗ್ಗಲು ಕೂಡಾ ಉಂಟಾ​ಗಿತ್ತು.

ದಾಖ​ಲೆಯ ಟೀವಿ, ಡಿಜಿ​ಟ​ಲ್‌ ವೀಕ್ಷ​ಣೆ!

ಈ ಬಾರಿ ಐಪಿ​ಎಲ್‌ ಮೈದಾ​ನ​ದಲ್ಲಿ ಹಲವು ದಾಖ​ಲೆ​ಗ​ಳನ್ನು ಸೃಷ್ಟಿ​ಸು​ವು​ದರ ಜೊತೆಗೆ ಟೀವಿ, ಡಿಜಿ​ಟಲ್‌ ವೀಕ್ಷ​ಣೆ​ಯಲ್ಲೂ ದಾಖಲೆ ಬರೆ​ಯಿತು. ಐಪಿ​ಎಲ್‌ ಪಂದ್ಯ​ಗಳ ಟೀವಿ ಪ್ರಸಾರ ಹಕ್ಕನ್ನು ಬರೋ​ಬ್ಬರಿ 23,575 ಕೋಟಿ ರು.ಗೆ ತನ್ನ​ದಾ​ಗಿ​ಸಿ​ಕೊಂಡಿದ್ದ ಸ್ಟಾರ್‌ ಸ್ಪೋರ್ಟ್ಸ್, ಈ ಬಾರಿಯ ಟೂರ್ನಿ ಈವ​ರೆ​ಗಿನ ಗರಿಷ್ಠ ವೀಕ್ಷ​ಣೆಯ ದಾಖಲೆ ಬರೆ​ದಿ​ದ್ದಾಗಿ ಮಾಹಿತಿ ನೀಡಿದೆ.

ಟೂರ್ನಿಯ ಮೊದಲ 66 ಪಂದ್ಯ​ಗ​ಳನ್ನು 482 ಮಿಲಿ​ಯ​ನ್‌​(48.2 ಕೋಟಿ​) ಮಂದಿ ವೀಕ್ಷಿ​ಸಿ​ದ್ದಾರೆ. 2019ರಲ್ಲಿ ಒಟ್ಟು 478 ಮಿಲಿ​ಯನ್‌ ಜನರು ಟೀವಿ​ಯಲ್ಲಿ ಪಂದ್ಯ ವೀಕ್ಷಿ​ಸಿ​ದ್ದರು ಎಂದು ಸ್ಟಾರ್‌ ಸ್ಪೋಟ್ಸ್‌ರ್‍ ತಿಳಿ​ಸಿದೆ. ಇನ್ನು, ಡಿಜಿ​ಟಲ್‌ನಲ್ಲಿ ಚೆನ್ನೈ-ಗುಜ​ರಾತ್‌ ನಡು​ವಿನ ಕ್ವಾಲಿ​ಫೈ​ಯರ್‌ ಪಂದ್ಯದ ವೇಳೆ ಏಕ​ಕಾ​ಲಕ್ಕೆ 2.5 ಕೋಟಿ ಮಂದಿ ಪಂದ್ಯ ವೀಕ್ಷಿ​ಸಿದ್ದು, ಹೊಸ ದಾಖಲೆ. ಈ ಬಾರಿ ಹಲವು ಪಂದ್ಯ​ಗ​ಳನ್ನು ಏಕ​ಕಾ​ಲಕ್ಕೆ 2 ಕೋಟಿಗೂ ಅಧಿಕ ಮಂದಿ ವೀಕ್ಷಿ​ಸಿದ್ದು ವಿಶೇಷ.

click me!