ಐಪಿಎಲ್ ಫೈನಲ್ ಪಂದ್ಯಕ್ಕೆ ಕಾದು ಕುಳಿತ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. 215 ರನ್ ಟಾರ್ಗೆಟ್ ಚೇಸ್ ಮಾಡಲು ಸಿಎಸ್‌ಕೆ ಕಣಕ್ಕಿಳಿಯುತ್ತಿದ್ದಂತೆ ಮಳೆ ವಕ್ಕರಿಸಿದೆ. ಹೀಗಾಗಿ ಪಂದ್ಯ ಸ್ಥಗಿತಗೊಂಡಿದೆ.
ಅಹಮ್ಮದಾಬಾದ್(ಮೇ.29): ಮೊದಲ ದಿನ ಮಳೆಯಿಂದ ಪಂದ್ಯ ರದ್ದಾಗಿ ಮೀಸಲು ದಿನಕ್ಕೆ ಮುಂದೂಡಲ್ಪಟ್ಟಿತ್ತು. ಮೀಸಲು ದಿನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 214 ರನ್ ಸಿಡಿಸಿತ್ತು. ಈ ಮೊತ್ತ ಚೇಸ್ ಮಾಡಲು ಕಣಕ್ಕಿಳಿಯುವ ಮುನ್ನವೇ ಮಳೆ ಆರಂಭಗೊಂಡಿತು. ಆದರೆ ಮತ್ತೆ ಪಂದ್ಯಕ್ಕೆ ಅನುವು ಮಾಡಿಕೊಟ್ಟಿತು. ಮೊದಲ ಓವರ್‌ನ 3 ಎಸೆತ ಮುಗಿಯುತ್ತಿದ್ದಂತೆ ಮಳೆ ಸುರಿದಿದೆ. ಹೀಗಾಗಿ ಪಂದ್ಯ ಸ್ಥಗಿತಗೊಳಿಸಲಾಗಿದೆ.
ಮೂರು ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ 1 ಬೌಂಡರಿ ಮೂಲಕ 4 ರನ್ ಸಿಡಿಸಿದ್ದರು. ಚೆನ್ನೈ ವಿಕೆಟ್ ನಷ್ಟವಿಲ್ಲದೆ 4 ರನ್ ಸಿಡಿಸಿದೆ. ಇದೇ ವೇಳೆ ಒಂದೇ ಸಮನೆ ಸುರಿದ ಮಳೆಯಿಂದ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಪಂದ್ಯ ಸ್ಥಗಿತಗೊಂಡಿದೆ. ಇದೀಗ ಮಳೆ ಸಂಪೂರ್ಣವಾಗಿ ನಿಂತಿದೆ. ಮೈದಾನ ಸಿಬ್ಬಂದಿಗಳು ಮೈದಾನ ಸಜ್ಜುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಭಾರಿ ಮಳೆಯಿಂದ ಮೈದಾನದ ಹಲವು ಭಾಗದಲ್ಲಿ ನೀರು ತುಂಬಿಕೊಂಡಿದೆ. ಶೀಘ್ರದಲ್ಲೇ ಪಂದ್ಯ ಆರಂಭಗೊಳ್ಳುವ ಸಾಧ್ಯತೆ ಇದೆ.
IPL 2023 ಧೋನಿ ಸ್ಟಂಪಿಂಗ್‌ಗೆ ಕುಪ್ಪಳಿಸಿದ ಜನ, ಟ್ರೋಫಿ ಗೆಲ್ಲಲು 215 ರನ್ ಟಾರ್ಗೆಟ್ ನೀಡಿದ ಗುಜರಾತ್ ಸೈನ್ಯ!
ಭಾನುವಾರ ಆಯೋಜಿಸಿದ್ದ ಐಪಿಎಲ್ 2023 ಫೈನಲ್ ಪಂದ್ಯ ಭಾರಿ ಮಳೆಯಿಂದ ರದ್ದಾಗಿತ್ತು. ಪಂದ್ಯದ ಟಾಸ್‌ಗೂ ಮಳೆ ಅವಕಾಶ ನೀಡಿರಲಿಲ್ಲ. ಭಾರಿ ಮಳೆಯಿಂದ ಕ್ರೀಡಾಂಗಣದಲ್ಲಿ ನೀರು ತುಂಬಿಕೊಂಡಿತ್ತು. ಯಾವುದೇ ಹಂತದಲ್ಲಿ ಮಳೆ ಪಂದ್ಯಕ್ಕೆ ಅನುವು ಮಾಡಿಕೊಡಲಿಲ್ಲ. ಹೀಗಾಗಿ ತಡ ರಾತ್ರಿವರೆಗೆ ಕಾದು ಪಂದ್ಯ ರದ್ದುಗೊಳಿಸಲಾಯಿತು. ಇದೇ ವೇಳೆ ಫೈನಲ್ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಯಿತು.
ಮೀಸಲು ದಿನದಲ್ಲೂ ಮಳೆರಾಯ ಪಂದ್ಯ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 4 ವಿಕೆಟ್ ನಷ್ಟಕ್ಕೆ 214 ರನ್ ಸಿಡಿಸಿದೆ. ಸಾಯಿ ಸುದರ್ಶನ್ ಸ್ಪೋಟಕ ಬ್ಯಾಟಿಂಗ್ ಮೂಲಕ 96 ರನ್ ಸಿಡಿಸಿದರು. ಇದರಿಂದ ಗುಜರಾತ್ 215 ರನ್ ಟಾರ್ಗೆಟ್ ನೀಡಿದೆ.
IPL 2023 ಗುಜರಾತ್‌ನ ಹಲವೆಡೆ ಮಳೆ ಮೋಡ, ಅಹಮ್ಮದಾಬಾದ್‌ನಲ್ಲಿ ಹೇಗಿದೆ ಹವಾಮಾನ?
ಸತತ 2ನೇ ದಿನ ಮಳೆ ಅಡ್ಡಿಪಡಿಸಿದರೂ ಅಭಿಮಾನಿಗಳ ಉತ್ಸಾಹಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಮಳೆ ಬಂದರೂ ಅಭಿಮಾನಿಗಳು ಕ್ರೀಡಾಂಗಣ ಬಿಟ್ಟು ಕದಲಿಲ್ಲ. ಪಂದ್ಯ ಪುನರ್ ಆರಂಭಕ್ಕಾಗಿ ಕಾದುಕುಳಿತಿದ್ದಾರೆ. ಇದೀಗ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. ಮಳೆ ಸಂಪೂರ್ಣವಾಗಿ ನಿಂತಿದೆ.