IPL 2023 ಸನ್‌ರೈಸರ್ಸ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ, ಇಂಗ್ಲೆಂಡ್ ನಾಯಕ ರೂಟ್ ಪದಾರ್ಪಣೆ!

By Suvarna NewsFirst Published May 7, 2023, 7:02 PM IST
Highlights

ರಾಜಸ್ಥಾನ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಹೋರಾಟಕ್ಕೆ ಸಜ್ಜಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ.
 

ಜೈಪುರ(ಮೇ.07): ಐಪಿಎಲ್ ಟೂರ್ನಿ ಹೋರಾಟದ ಪೈಪೋಟಿ ಹೆಚ್ಚಾಗುತ್ತಿದೆ. ಪ್ಲೇಆಫ್ ರೇಸ್‌ಗಾಗಿ ತಂಡಗಳಿಗೆ ಗೆಲುವು ಅನಿವಾರ್ಯವಾಗುತ್ತಿದೆ. ಇಂದು ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಹೋರಾಟ ಪ್ಲೇ ಆಫ್ ರೇಸ್ ದೃಷ್ಟಿಯಿಂದ ಮುಖ್ಯವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇಂಜುರಿ ಸಮಸ್ಯೆಯಿಂದ ತಂಡದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಜೂ ರೂಟ್ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದೆ. ಬ್ರೂಕ್ ಬದಲು ಫಿಲಿಪ್ಸ್ ತಂಡ ಸೇರಿಕೊಂಡಿದ್ದಾರೆ.

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ಜೋ ರೂಟ್, ಧ್ರುವ್ ಜುರೆಲ್, ಶಿಮ್ರೊನ್ ಹೆಟ್ಮೆಯರ್, ಆರ್ ಅಶ್ವಿನ್, ಮರುಗನ್ ಅಶ್ವಿನ್, ಸಂದೀಪ್ ಶರ್ಮಾ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್ 

Latest Videos

IPL 2023 ಸಹೋದರರ ಸವಾಲ್ ಗೆದ್ದ ಹಾರ್ದಿಕ್ ಪಾಂಡ್ಯ, ಪ್ಲೇ ಆಫ್‌ಗೆ ಇನ್ನೊಂದೇ ಹೆಜ್ಜೆ..!

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಆ್ಯಂಡಿನ್ ಮರ್ಕ್ರಮ್(ನಾಯಕ), ಹೆನ್ರಿಚ್ ಕಾಲ್ಸೀನ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮಾದ್, ಮಾರ್ಕೋ ಜಾನ್ಸೆನ್, ವಿವ್ರಾಂತ್ ಶರ್ಮಾ, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್ 

ಆರಂಭದಲ್ಲಿ ಅಬ್ಬರಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ ರಾಯಲ್ಸ್ ಕಳೆದ 5 ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ ರಾಜಸ್ಥಾನ ಪ್ಲೇಆಫ್ ಹೋರಾಟ ಕಠಿಣವಾಗುತ್ತಿದೆ. ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. 10 ಪಂದ್ಯದಲ್ಲಿ 5 ಗೆಲುವು ಹಾಗೂ 5 ಸೋಲು ಕಂಡಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ 9 ಪಂದ್ಯದಲ್ಲಿ 3 ಗೆಲುವು ಹಾಗೂ 6 ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಹಾಗೂ 10ನೇ ಸ್ಥಾನದಲ್ಲಿದೆ.

ಇತಿಹಾಸ ಬರೆದ ಪಾಂಡ್ಯ ಬ್ರದರ್ಸ್‌: ಐಪಿಎಲ್‌ನಲ್ಲಿ ಹೊಸ ದಾಖಲೆ ನಿರ್ಮಾಣ..!

ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ 10 ಪಂದ್ಯದಲ್ಲಿ 7 ಗೆಲುವು ಹಾಗೂ 3 ಸೋಲು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ 11ರಲ್ಲಿ 6 ಗೆಲುವು, 4 ಸೋಲು ಕಂಡಿದ್ದರೆ, 1 ಪಂದ್ಯ ಫಲಿತಾಂಶ ಕಾಣದೇ ರದ್ದಾಗಿದೆ. ಲಖನೌ ಸೂಪರ್ ಜೈಂಟ್ಸ್ 3ನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ಪಂದ್ಯದಲ್ಲಿ 5 ಗೆಲುವು 5 ಸೋಲು ಕಂಡಿದೆ. ಈ ಮೂಲಕ 5ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ 6ನೇ ಸ್ಥಾನ, ಪಂಜಾಬ್ ಕಿಂಗ್ಸ್ 7ನೇ ಸ್ಥಾನ, ಕೋಲ್ಕತಾ ನೈಟ್ ರೈಡರ್ಸ್ 8 ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 9ನೇ ಸ್ಥಾನದಲ್ಲಿದೆ. 
 

click me!