
ಬೆಂಗಳೂರು (ಏ.17): ಮಹತ್ವದ ಕಾದಾಟದಲ್ಲಿ ತವರಿನ ಕಳೆದ ಪಂದ್ಯದಲ್ಲಿ ಸಿಹಿ-ಕಹಿ ಫಲಿತಾಂಶ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಈಗಾಗಲೇ ಆರ್‌ಸಿಬಿಯ ಅಪಾರ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದು, ಅಭಿಮಾನಿಗಳ ಬೆಂಬಲದೊಂದಿಗೆ ಚೆನ್ನೈ ತಂಡಕ್ಕೆ ಸೋಲಿನ ಗಿಫ್ಟ್ ನೀಡುವ ಇರಾದೆಯಲ್ಲಿ ಆರ್‌ಸಿಬಿ ತಂಡವಿದೆ. ಅದರಂತೆ ಪಂದ್ಯದಲ್ಲಿ ಟಾಸ್ ಗೆಲುವು ಸಾಧಿಸಿರುವ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಬೌಲಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಪಂದಲ್ಲಿ ಚೆಪಾಕ್ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲು ಕಂಡಿದ್ದರೆ, ಇನ್ನೊಂದೆಡೆ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಕಳೆದ ಪಂದ್ಯದಲ್ಲಿ ಭರ್ಜರಿ ಗೆಲುವು ಕಂಡ ವಿಶ್ವಾಸದಲ್ಲಿದೆ. ಆರ್‌ಸಿಬಿ, ಮಹತ್ವದ ಮುಖಾಮುಖಿಗಾಗಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಡೆಲ್ಲಿ ವಿರುದ್ಧ ಆಡಿದ್ದ ತಂಡವನ್ನೇ ಕಣಕ್ಕಿಳಿಸಿದೆ.
ಇನ್ನೊಂದೆಡೆ ಚೆನ್ನೈ ತಂಡದಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಸಿಸಾಂಡ ಮಗಲ ಬದಲಿಗೆ ಶ್ರೀಲಂಕಾದ ಸ್ಪಿನ್ನರ್ ಮಹೇಶ್ ಪಥಿರಣರನ್ನು ಎಂಎಸ್ ಧೋನಿ ತಂಡಕ್ಕೆ ಆಯ್ಕೆ ಮಾಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(ವಿ.ಕೀ/ನಾಯಕ), ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿ.ಕೀ), ಹರ್ಷಲ್ ಪಟೇಲ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್
ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್ ಎಂದೂ ಮುಖ್ಯವಾಗೋದಿಲ್ಲ. ಯಾಕೆಂದರೆ, ಇಲ್ಲಿ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕೋದೇ ಕಷ್ಟ. ಇನ್ನು ಇಬ್ಬನಿ ಇನ್ನೊಂದು ಸಮಸ್ಯೆ ನೀಡಲಿದೆ. ಮೊದಲು ಬ್ಯಾಟಿಂಗ್ ಮಾಡಲಿರುವ ನಾವು 180 ರಿಂದ 200ರ ಮೊತ್ತವನ್ನು ಗುರಿಯಾಗಿರಿಸಿಕೊಂಡಿದ್ದೇವೆ. ಬ್ಯಾಟಿಂಗ್‌ನ ವೇಳೆ ಪ್ರತಿ 3-4 ಓವರ್‌ಗಳ ಬಳಿಕ ನಮ್ಮ ಟಾರ್ಗೆಟ್‌ನ ಪುನರ್‌ವಿಮರ್ಶೆ ಮಾಡಲಿದ್ದೇವೆ. ಒಟ್ಟಾರೆ ಒಳ್ಳೆ ಮೊತ್ತ ಬಾರಿಸಬೇಕು ಅನ್ನೋದಷ್ಟೇ ನಮ್ಮ ಗುರು. ಬದಲಿಯಾಗಿ ಬರುತ್ತಿರುವ ಎಲ್ಲಾ ಆಟಗಾರರು ಉತ್ತಮವಾಗಿ ಆಡುತ್ತಿದ್ದಾರೆ ಎಂದು ಎಂಎಸ್ ಧೋನಿ ಟಾಸ್‌ನ ವೇಳೆ ಹೇಳಿದ್ದಾರೆ.
ಏಟಿಗೆ ಎದಿರೇಟು, ಕೊಹ್ಲಿ ಎದುರಿನಿಂದಲೇ ಮುಖ ತಿರುಗಿಸಿ ಹೋದ ಸೌರವ್ ಗಂಗೂಲಿ, ವಿಡಿಯೋ ವೈರಲ್!
ಸ್ಟೇಡಿಯಂನ ಸದ್ದು ಕೇಳಿ ರೋಮಾಂಚನವಾಗುತ್ತಿದೆ. ಅದಕ್ಕಾಗಿ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದ್ದೇವೆ. ಪಿಚ್ ಸಾಮಾನ್ಯವಾಗಿ ಇಲ್ಲಿ ಬದಲಾಗುತ್ತದೆ. 180-200 ರನ್ ಟಾರ್ಗೆಟ್‌ಅನ್ನು ಇಲ್ಲಿ ಸುಲಭವಾಗಿ ಚೇಸ್ ಮಾಡಬಹುದು. ಇದು ಸಾಕಷ್ಟು ಸಣ್ಣ ಮೈದಾನವಾಗಿದೆ. ಇಬ್ಬನಿ ಸಹಾಯ ಮಾಡಬಹುದು. ನಮ್ಮ ಆರಂಭಿಕ ಇಲೆವೆನ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಫಾಫ್ ಡು ಪ್ಲೆಸಿಸ್ ಟಾಸ್ ವೇಳೆ ಹೇಳಿದ್ದಾರೆ.
IPL 2023 ಈ ಇಬ್ಬರ ಮೇಲೆ ಕಣ್ಣಿಡಿ; RCB vs CSK ಪಂದ್ಯದ ಭವಿಷ್ಯ ನುಡಿದ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್..!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.