ಐಪಿಎಲ್ ಟೂರ್ನಿಯ ಐತಿಹಾಸಿಕ 1,000ನೇ ಪಂದ್ಯ, ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್!

By Suvarna NewsFirst Published Apr 30, 2023, 7:03 PM IST
Highlights

ಐಪಿಎಲ್ ಟೂರ್ನಿಯ 1,000ನೇ ಪಂದ್ಯ. 2008ರಲ್ಲಿ ಆರಂಭಗೊಂಡ ಐಪಿಎಲ್ ಇದೀಗ 1,000ನೇ ಪಂದ್ಯ ಆಡುತ್ತಿದೆ. ಈ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಟಾಸ್ ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 

ಮುಂಬೈ(ಏ.30): ಐಪಿಎಲ್ ಟೂರ್ನಿಯಲ್ಲಿ ಇಂದು ಐತಿಹಾಸಿಕ ಪಂದ್ಯ. 2008ರಲ್ಲಿ ಆರಂಭಗೊಂಡ ಚುಟುಕು ಕ್ರಿಕೆಟ್ ಇಂದು 1,000ನೇ ಪಂದ್ಯಕ್ಕೆ ಸಜ್ಜಾಗಿದೆ. ಈ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. 2008ರಲ್ಲಿ ಆರಂಭಗೊಂಡ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಟ್ರೋಫಿ ಗೆದ್ದುಕೊಂಡಿತ್ತು. ಇದೀಗ 1000 ಪಂದ್ಯದಲ್ಲಿ ರಾಜಸ್ಥಾನ ಟಾಸ್ ಗೆದ್ದುಕೊಂಡಿದೆ. ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ಎರಡನೇ ಟ್ರೋಫಿ ಗೆಲ್ಲುತ್ತಾ ಅನ್ನೋ ಲೆಕ್ಕಾಚಾರ ಶುರುವಾಗಿದೆ.

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ಶಿಮ್ರೊನ್ ಹೆಟ್ಮೆಯರ್, ಆರ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೋಲ್ಟ್, ಸಂದೀಪ್ ಶರ್ಮಾ, ಯುಜುವೇಂದ್ರ ಚಹಾಲ್

Latest Videos

IPL 2023: ಡೆಲ್ಲಿ ವಿರುದ್ಧ ಸತತ ಐದು ಪಂದ್ಯಗಳ ಸೋಲಿನ ಬಳಿಕ ಗೆಲುವು ಕಂಡ ಸನ್‌ರೈಸರ್ಸ್‌!

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯಾ, ರಿಲೆ ಮೆರೆಡಿತ್, ಅರ್ಶದ್ ಖಾನ್ 

ಅಂಕಪಟ್ಟಿಯಲ್ಲಿ ರಾಜಸ್ಥಾನ ರಾಯಲ್ಸ್ 2ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 9ನೇ ಸ್ಥಾನದಲ್ಲಿದೆ. ಮುಂಬೈ ತಂಡಕ್ಕೆ ಇದು ಮಹತ್ವದ ಪಂದ್ಯವಾಗಿದೆ. ಪ್ಲೇ ಆಫ್ ರೇಸ್‌ನಲ್ಲಿ ಜೀವಂತವಾಗಿರಲು ಪಂದ್ಯ ಗಲ್ಲಬೇಕಾದ ಒತ್ತಡ ಮುಂಬೈಗಿದೆ. ಸನ್‌ರೈಸರ್ಸ್ ಹೈದರಾಬಾದ್ ಗೆಲುವಿನ ಬಳಿಕ ಕಳೆದರಡು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿದೆ. 

IPL 2023: ಬರೋಬ್ಬರಿ 458 ರನ್‌ ದಾಖಲಾದ ಪಂದ್ಯದಲ್ಲಿ ಲಕ್ನೋ ಸೂಪರ್‌ ವಿನ್‌!

ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್,  ಚೆನ್ನೈ ಸೂಪರ್‌ ಕಿಂಗ್ಸ್‌ಗೆ 32 ರನ್‌ಗಳ ಸೋಲುಣಿಸಿತು. ಯಶಸ್ವಿ ಜೈಸ್ವಾಲ್‌, ಧೃವ್‌ ಜುರೆಲ್‌ರ ಸ್ಫೋಟಕ ಬ್ಯಾಟಿಂಗ್‌, ಆ್ಯಡಂ ಜಂಪಾ ಸೇರಿ ತಂಡದ ಬಹುತೇಕ ಬೌಲರ್‌ಗಳ ಉತ್ತಮ ದಾಳಿಯ ನೆರವಿನಿಂದ ರಾಜಸ್ಥಾನ ಸುಲಭ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 20 ಓವರಲ್ಲಿ 202 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಜೈಪುರದಲ್ಲಿ ಐಪಿಎಲ್‌ ಪಂದ್ಯವೊಂದರಲ್ಲಿ 200 ರನ್‌ ದಾಖಲಾಗಿದ್ದು ಇದೇ ಮೊದಲು. ಬೃಹತ್‌ ಗುರಿ ಬೆನ್ನತ್ತಿದ ಚೆನ್ನೈ ಯಾವ ಹಂತದಲ್ಲೂ ಗುರಿ ತಲುಪುವಂತೆ ಕಾಣಲಿಲ್ಲ. ಮೋಯಿನ್‌ ಅಲಿ ಜೊತೆ ಸೇರಿ ಶಿವಂ ದುಬೆ ಸ್ಫೋಟಿಸುವಾಗಲೂ ಚೆನ್ನೈ ಗೆಲ್ಲಬಹುದು ಎಂದು ಯಾರಿಗೂ ಅನಿಸಲಿಲ್ಲ. ದುಬೆ 33 ಎಸೆತದಲ್ಲಿ 52, ಅಲಿ ಹಾಗೂ ಜಡೇಜಾ ತಲಾ 23 ರನ್‌ ಸಿಡಿಸಿ ಸೋಲಿನ ಅಂತರವನ್ನು ತಗ್ಗಿಸಿದರು. ಚೆನ್ನೈ 6 ವಿಕೆಟ್‌ಗೆ 170 ರನ್‌ ಗಳಿಸಿತು.

click me!