IPL 2023 ಅಂಪೈರ್‌ ವಿರುದ್ಧ ಮಾತಾಡಿದ ರವಿಚಂದ್ರನ್‌ ಅಶ್ವಿನ್‌ಗೆ ಬಿತ್ತು ದಂಡದ ಬರೆ!

Published : Apr 14, 2023, 11:51 AM IST
IPL 2023 ಅಂಪೈರ್‌ ವಿರುದ್ಧ ಮಾತಾಡಿದ ರವಿಚಂದ್ರನ್‌ ಅಶ್ವಿನ್‌ಗೆ ಬಿತ್ತು ದಂಡದ ಬರೆ!

ಸಾರಾಂಶ

* ರವಿಚಂದ್ರನ್ ಅಶ್ವಿನ್‌ಗೆ ದಂಡ ವಿಧಿಸಿದ ಮ್ಯಾಚ್‌ ರೆಫ್ರಿ * ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ವಿಧಿಸಿದ ಮ್ಯಾಚ್ ರೆಫ್ರಿ * ಇನ್ನಿಂಗ್ಸ್‌ ನಡುವೆ ಇಬ್ಬನಿಯಿಂದಾಗಿ ಸಂಪೂರ್ಣ ಒದ್ದೆಯಾಗಿದ್ದ ಚೆಂಡನ್ನು ಅಂಪೈರ್‌ಗಳು ಬದಲಿಸಿದ್ದರು.

ಚೆನ್ನೈ(ಏ.14): ರಾಜಸ್ಥಾನ ರಾಯಲ್ಸ್‌ನ ತಾರಾ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ಗೆ ಪಂದ್ಯದ ಸಂಭಾನವೆಯ ಶೇ.25ರಷ್ಟು ದಂಡವಾಗಿ ವಿಧಿಸಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಬುಧವಾರ ನಡೆದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಅಶ್ವಿನ್‌ ಅಂಪೈರ್‌ಗಳ ವಿರುದ್ಧ ಮಾತನಾಡಿದ್ದರು. ಅವರು ನಿಯಮ ಉಲ್ಲಂಘಿಸಿದ್ದಾರೆ ಎನ್ನುವ ಕಾರಣಕ್ಕೆ ದಂಡ ಹಾಕಲಾಗಿದೆ. 

ಇನ್ನಿಂಗ್ಸ್‌ ನಡುವೆ ಇಬ್ಬನಿಯಿಂದಾಗಿ ಸಂಪೂರ್ಣ ಒದ್ದೆಯಾಗಿದ್ದ ಚೆಂಡನ್ನು ಅಂಪೈರ್‌ಗಳು ಬದಲಿಸಿದ್ದರು. ಈ ನಿರ್ಧಾರಕ್ಕೆ ಅಶ್ವಿನ್‌ ಆಕ್ರೋಶ ವ್ಯಕ್ತಪಡಿಸಿದರು. ‘ನಾವು ಚೆಂಡು ಬದಲಿಸುವಂತೆ ಮನವಿ ಮಾಡಿರಲಿಲ್ಲ. ಆದರೂ ಚೆಂಡು ಬದಲಿಸಲಾಯಿತು. ಕೇಳಿದ್ದಕ್ಕೆ ನಾವು ಬದಲಿಸಬಹುದು ಎಂದರು. ಈ ಆವೃತ್ತಿಯಲ್ಲಿ ಅಂಪೈರ್‌ಗಳ ಕೆಲ ನಿರ್ಧಾರದಿಂದ ನನಗೆ ದಿಗ್ಭ್ರಮೆಯಾಗಿದೆ’ ಎಂದು ಅಶ್ವಿನ್‌ ಹೇಳಿದ್ದರು.

ಧೋನಿ ಬ್ಯಾಟಿಂಗ್‌ ಬಗ್ಗೆ ಮಾಜಿ ಕ್ರಿಕೆಟಿಗರ ಹರ್ಷ!

ಚೆನ್ನೈ: ರಾಜಸ್ಥಾನ ವಿರುದ್ಧ 17 ಎಸೆತದಲ್ಲಿ 32 ರನ್‌ ಸಿಡಿಸಿ ಚೆನ್ನೈ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದ ಎಂ.ಎಸ್‌.ಧೋನಿಯ ಬ್ಯಾಟಿಂಗ್‌ ಅನ್ನು ಸಾಮಾಜಿಕ ತಾಣಗಳಲ್ಲಿ ಹಾಲಿ, ಮಾಜಿ ಕ್ರಿಕೆಟಿಗರು ಕೊಂಡಾಡಿದ್ದಾರೆ. ‘ಕೊನೆ ಓವರಲ್ಲಿ 21 ರನ್‌ ಬೇಕಿದ್ದಾಗ ಒತ್ತಡದಲ್ಲಿರುವುದು ಧೋನಿ ಅಲ್ಲ, ಬೌಲರ್‌ ಎನ್ನುವುದು ಮತ್ತೆ ಸಾಬೀತಾಗಿದೆ’ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಟ್ವೀಟ್‌ ಮಾಡಿದ್ದಾರೆ. ‘ಪಿಕ್ಚರ್‌ ಇನ್ನೂ ಬಾಕಿ ಇದೆ’ ಎಂದಿರುವ ಮೊಹಮದ್‌ ಕೈಫ್‌, ಧೋನಿಯಿಂದ ಮತ್ತಷ್ಟುಇಂತಹ ಇನ್ನಿಂಗ್‌್ಸ ನಿರೀಕ್ಷೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ‘ಅಸಾಧ್ಯವೆನಿಸಿದ್ದನ್ನು ಸಾಧ್ಯವಾಗಿಸುವ ಸಾಮರ್ಥ್ಯ ಧೋನಿಯಲ್ಲಿ ಇನ್ನೂ ಇದೆ’ ಎಂದು ಸೆಹ್ವಾಗ್‌ ಟ್ವೀಟಿಸಿದ್ದಾರೆ.

IPL 2023: ಐತಿಹಾಸಿಕ ದಾಖಲೆ ಬರೆದ ಜಡೇಜಾ, ಕ್ರಿಕೆಟ್ ದಿಗ್ಗಜರ ಸಾಲಿಗೆ ಸಿಎಸ್‌ಕೆ ಸ್ಟಾರ್ ಸೇರ್ಪಡೆ..!

ಸಂಜು ಸ್ಯಾಮ್ಸನ್‌ಗೆ 12 ಲಕ್ಷ ದಂಡ

ಚೆನ್ನೈ: ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್‌ ಮಾಡಿದ ಕಾರಣ ರಾಜಸ್ಥಾನ ರಾಯಲ್ಸ್‌ ನಾಯಕ ಸಂಜು ಸ್ಯಾಮ್ಸನ್‌ಗೆ 12 ಲಕ್ಷ ರು. ದಂಡ ವಿಧಿಸಲಾಗಿದೆ. ನಿಗದಿತ ಅವಧಿಯಲ್ಲಿ ರಾಯಲ್ಸ್‌ ಇನ್ನಿಂಗ್‌್ಸ ಮುಕ್ತಾಯಗೊಳ್ಳಲು ವಿಫಲವಾಗಿತ್ತು. ಇದು ಮೊದಲ ನಿಯಮ ಉಲ್ಲಂಘನೆಯಾಗಿದ್ದು, 2ನೇ ಬಾರಿ ನಿಯಮ ಉಲ್ಲಂಘಿಸಿದರೆ 24 ಲಕ್ಷ ರುಪಾಯಿ ದಂಡ ಹಾಕಲಾಗುತ್ತದೆ. 3ನೇ ಉಲ್ಲಂಘನೆಗೆ ನಾಯಕನಿಗೆ ಒಂದು ಪಂದ್ಯ ನಿಷೇಧ ಹೇರಲಾಗುತ್ತದೆ.

ಧೋನಿಗೆ ಮಂಡಿ ನೋವು, ಮಗಾಲ 3 ಪಂದ್ಯಕ್ಕಿಲ್ಲ!

ಚೆನ್ನೈ: ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್‌್ಸಗೆ ಮತ್ತಷ್ಟುಗಾಯಾಳುಗಳ ಸಮಸ್ಯೆ ಎದುರಾಗಿದ್ದು, ತಂಡ ಸೂಕ್ತ ಹನ್ನೊಂದರ ಬಳಗದೊಂದಿಗೆ ಕಣಕ್ಕಿಳಿಯುವುದು ಕಷ್ಟವಾಗಬಹುದು. ನಾಯಕ ಎಂ.ಎಸ್‌.ಧೋನಿ ಮಂಡಿ ನೋವಿನಿಂದ ಬಳಲುತ್ತಿದ್ದು, ಅವರು ನೋವಿನ ನಡುವೆಯೇ ರಾಜಸ್ಥಾನ ವಿರುದ್ಧ ಆಡಿದರು ಎಂದು ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಹೇಳಿದ್ದಾರೆ. 

ರಾಯಲ್ಸ್‌ ವಿರುದ್ಧದ ಪಂದ್ಯದ ಬಳಿಕ ಧೋನಿ ಪೆವಿಲಿಯನ್‌ಗೆ ಹಿಂದಿರುಗುವಾಗ ಕುಂಟುತ್ತಿರುವ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಇನ್ನು ವೇಗಿ ಸಿಸಾಂಡ ಮಗಾಲ ಕೈಬೆರಳಿನ ಗಾಯಕ್ಕೆ ತುತ್ತಾಗಿರುವ ಕಾರಣ ಕನಿಷ್ಠ 3 ಪಂದ್ಯದಿಂದ ಹೊರಬೀಳಬಹುದು ಎನ್ನಲಾಗಿದೆ. ಬೆನ್‌ ಸ್ಟೋಕ್ಸ್‌ ಇನ್ನೂ ಸಂಪೂರ್ಣ ಫಿಟ್‌ ಆಗಿಲ್ಲ. ಸ್ನಾಯು ಸೆಳೆತಕ್ಕೆ ಒಳಗಾಗಿರುವ ದೀಪಕ್‌ ಚಹರ್‌ ಬಹುತೇಕ ಟೂರ್ನಿಯಿಂದಲೇ ಹೊರಬೀಳಲಿದ್ದಾರೆ ಎನ್ನಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!