IPL 2023 ಕೆಕೆಆರ್‌ ಓಟಕ್ಕೆ ಬ್ರೇಕ್‌ ಹಾಕುತ್ತಾ ಸನ್‌ರೈಸ​ರ್ಸ್‌ ಹೈದರಾಬಾದ್‌?

Published : Apr 14, 2023, 10:48 AM IST
IPL 2023 ಕೆಕೆಆರ್‌ ಓಟಕ್ಕೆ ಬ್ರೇಕ್‌ ಹಾಕುತ್ತಾ ಸನ್‌ರೈಸ​ರ್ಸ್‌ ಹೈದರಾಬಾದ್‌?

ಸಾರಾಂಶ

ಕೆಳದೆರಡು ಪಂದ್ಯಗಳಲ್ಲಿ ರೋಚಕ ಗೆಲುವು ಸಾಧಿಸಿದ್ದ ಕೆಕೆಆರ್‌ಗೆ ಹ್ಯಾಟ್ರಿಕ್‌ ನಿರೀಕ್ಷೆ 2 ಸೋಲುಗಳ ಬಳಿಕ ಪುಟಿದೆದ್ದ ಸನ್‌ಗೆ ಜಯದ ಲಯ ಉಳಿಸಿಕೊಳ್ಳುವ ಗುರಿ ಸನ್‌ರೈಸರ್ಸ್‌ ತಂಡದಲ್ಲಿ ಕೆಲವು ಬದಲಾವಣೆ ಸಾಧ್ಯತೆ

ಕೋಲ್ಕತಾ(ಏ.14): ಶಾರ್ದೂಲ್‌ ಠಾಕೂರ್‌ ಹಾಗೂ ರಿಂಕು ಸಿಂಗ್‌ರ ಪವಾಡ ಸದೃಶ ಪ್ರದರ್ಶನಗಳ ನೆರವಿನಿಂದ ಆರ್‌ಸಿಬಿ ಹಾಗೂ ಗುಜರಾತ್‌ ವಿರುದ್ಧ ಸತತ 2 ಪಂದ್ಯಗಳಲ್ಲಿ ರೋಚಕ ಗೆಲುವು ಸಾಧಿಸಿದ್ದ ಕೋಲ್ಕತಾ ನೈಟ್‌ರೈಡ​ರ್ಸ್‌, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದು ಶುಕ್ರವಾರ ಸನ್‌ರೈಸ​ರ್‍ಸ್ ಹೈದರಾಬಾದ್‌ ವಿರುದ್ಧ ಸೆಣಸಲಿದೆ. ಈ ಆವೃತ್ತಿಯಲ್ಲಿ ತವರಿನಲ್ಲಿ 2ನೇ ಪಂದ್ಯವನ್ನಾಡಲಿರುವ ನಿತೀಶ್‌ ರಾಣಾ ಪಡೆ ಹ್ಯಾಟ್ರಿಕ್‌ ಜಯದ ವಿಶ್ವಾಸದಲ್ಲಿದೆ.

ಮತ್ತೊಂದೆಡೆ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಸನ್‌ರೈಸ​ರ್‍ಸ್, ಕಳೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್‌್ಸ ವಿರುದ್ಧ 8 ವಿಕೆಟ್‌ ಜಯ ಸಾಧಿಸಿ ಖಾತೆ ತೆರೆದಿತ್ತು. ಏಡನ್‌ ಮಾರ್ಕ್ರಮ್‌ ಪಡೆ ಜಯದ ಲಯ ಉಳಿಸಿಕೊಳ್ಳುವ ಗುರಿ ಹೊಂದಿದೆ.

ಕೆಕೆಆರ್‌ ವಿದೇಶಿ ಆಟಗಾರರ ಆಯ್ಕೆ ಗೊಂದಲವಾಗಬಹುದು. ಜೇಸನ್‌ ರಾಯ್‌ ಆಯ್ಕೆಗೆ ಲಭ್ಯರಿದ್ದು, ಉತ್ತಮ ಪ್ರದರ್ಶನ ನೀಡುತ್ತಿರುವ ರಹಮಾನುಲ್ಲಾ ಗುರ್ಬಾಜ್‌ರನ್ನು ಕೈಬಿಡಬೇಕಾಗಬಹುದು. ಆ್ಯಂಡ್ರೆ ರಸೆಲ್‌ ಲಯದಲ್ಲಿಲ್ಲ. ಆದರೆ ಶಾರ್ದೂಲ್‌ ಹಾಗೂ ರಿಂಕು ಫಿನಿಶರ್‌ಗಳ ಪಾತ್ರವನ್ನು ನಿಭಾಯಿಸುವ ಭರವಸೆ ಮೂಡಿಸಿದ್ದಾರೆ. ಕೆಕೆಆರ್‌ ಈ ಆವೃತ್ತಿಯಲ್ಲಿ ಪವರ್‌-ಪ್ಲೇನಲ್ಲಿ ಕೇವಲ 6.6ರ ರನ್‌ರೇಟ್‌ನಲ್ಲಿ ರನ್‌ ಕಲೆಹಾಕಿದರೂ, ಕೊನೆ 5 ಓವರಲ್ಲಿ 11.3 ರನ್‌ರೇಟ್‌ ಹೊಂದಿದೆ. ಇನ್ನು ಸ್ಪಿನ್‌ ಬೌಲಿಂಗ್‌ ಕೆಕೆಆರ್‌ನ ಬಲ ಎನಿಸಿದೆ.

ಮತ್ತೊಂದೆಡೆ ಸನ್‌ರೈಸ​ರ್ಸ್‌ ಸರಿಯಾದ ತಂಡ ಸಂಯೋಜನೆಯೊಂದಿಗೆ ಕಣಕ್ಕಿಳಿದರೆ, ಯಾವುದೇ ಎದುರಾಳಿಗೆ ಪ್ರಬಲ ಪೈಪೋಟಿ ನೀಡಬಹುದಾದ ತಂಡ. ರಾಹುಲ್‌ ತ್ರಿಪಾಠಿ, ಮಾರ್ಕ್ರಮ್‌, ಹ್ಯಾರಿ ಬ್ರೂಕ್‌ ಮೇಲೆ ತಂಡದ ಬ್ಯಾಟಿಂಗ್‌ ಅವಲಂಬಿತಗೊಂಡಿದೆ.

IPL 2023: ಗಿಲ್‌ ಸೂಪರ್ ಬ್ಯಾಟಿಂಗ್‌, 3ನೇ ಗೆಲುವು ಕಂಡ ಗುಜರಾತ್‌!

ಭುವನೇಶ್ವರ್‌, ನಟರಾಜನ್‌ಗೆ ಡೆತ್‌ ಓವರ್‌ಗಳ ಜವಾಬ್ದಾರಿ ನೀಡಿ ಮಾರ್ಕೊ ಯಾನ್ಸನ್‌ರನ್ನು ಪವರ್‌-ಪ್ಲೇನಲ್ಲಿ ಬಳಸಿದರೆ ಹೆಚ್ಚು ಯಶಸ್ಸು ಸಿಗಬಹುದು. ಆದಿಲ್‌ ರಶೀದ್‌ರನ್ನು ಹೊರಗಿಟ್ಟು ವೇಗಿ ಫಜಲ್‌ಹಕ್‌ ಫಾರೂಕಿಯನ್ನು ಆಡಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಸನ್‌ರೈಸ​ರ್‍ಸ್ ಪವರ್‌-ಪ್ಲೇನಲ್ಲಿ ಕೇವಲ 5.8 ರನ್‌ರೇಟ್‌ ಹೊಂದಿದ್ದು, ಡೆತ್‌ ಓವರಲ್ಲಿ 9.0 ರನ್‌ರೇಟ್‌ನಲ್ಲಿ ರನ್‌ ಗಳಿಸಿದೆ. ಈಡನ್‌ ಗಾರ್ಡನ್ಸ್‌ನ ಬ್ಯಾಟರ್‌ ಸ್ನೇಹಿ ಪಿಚ್‌ನಲ್ಲಿ ತಂಡ ರನ್‌ರೇಟ್‌ನತ್ತ ಹೆಚ್ಚು ಗಮನ ಹರಿಸಬೇಕಿದೆ.

ಒಟ್ಟು ಮುಖಾಮುಖಿ: 23

ಕೆಕೆಆರ್‌: 15

ಸನ್‌ರೈಸ​ರ್ಸ್‌: 08

ಸಂಭವನೀಯ ಆಟಗಾರರ ಪಟ್ಟಿ

ಕೋಲ್ಕತಾ ನೈಟ್ ರೈಡರ್ಸ್‌: ಜೇಸನ್‌ ರಾಯ್‌, ಎನ್‌ ಜಗದೀಶನ್‌, ವೆಂಕಟೇಶ್ ಅಯ್ಯರ್‌, ನಿತೀಶ್‌ ರಾಣಾ(ನಾಯಕ), ರಿಂಕು ಸಿಂಗ್‌, ಆಂಡ್ರೆ ರಸೆಲ್‌, ಸುನಿಲ್ ನರೇನ್‌, ಶಾರ್ದೂಲ್‌ ಠಾಕೂರ್, ಉಮೇಶ್‌ ಯಾದವ್, ಲಾಕಿ ಫಗ್ರ್ಯೂಸನ್‌, ವರುಣ್‌ ಚಕ್ರವರ್ತಿ.

ಸನ್‌ರೈಸ​ರ್ಸ್‌ ಹೈದರಾಬಾದ್‌: ಮಯಾಂಕ್‌ ಅಗರ್‌ವಾಲ್, ಹ್ಯಾರಿ ಬ್ರೂಕ್‌, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್‌, ಹೆನ್ರಿಚ್‌ ಕ್ಲಾಸೆನ್‌, ವಾಷಿಂಗ್ಟನ್‌ ಸುಂದರ್, ಮಾರ್ಕೊ ಯಾನ್ಸನ್‌, ಮಯಾಂಕ್‌ ಮಾರ್ಕಂಡೆ, ಭುವನೇಶ್ವರ್‌ ಕುಮಾರ್, ಉಮ್ರಾನ್‌ ಮಲಿಕ್, ಟಿ ನಟರಾಜನ್‌.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಚ್‌

ಈಡನ್‌ ಗಾರ್ಡನ್ಸ್‌ನ ಪಿಚ್‌ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗಿದ್ದು, ಈ ಪಂದ್ಯದಲ್ಲೂ ದೊಡ್ಡ ಮೊತ್ತ ದಾಖಲಾಗಬಹುದು. ಸ್ಪಿನ್ನರ್‌ಗಳಿಗೂ ನೆರವು ಸಿಗಲಿದ್ದು, ಎರಡೂ ತಂಡಗಳು ಮಧ್ಯ ಓವರ್‌ಗಳಲ್ಲಿ ಎಷ್ಟುಪರಿಣಾಮಕಾರಿಯಾಗಲಿವೆ ಎನ್ನುವುದು ಪಂದ್ಯದ ಫಲಿತಾಂಶ ನಿರ್ಧರಿಸಬಹುದು.

IPL ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ:


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!