IPL 2023: ಗಿಲ್‌ ಸೂಪರ್ ಬ್ಯಾಟಿಂಗ್‌, 3ನೇ ಗೆಲುವು ಕಂಡ ಗುಜರಾತ್‌!

Published : Apr 13, 2023, 11:30 PM ISTUpdated : Apr 13, 2023, 11:41 PM IST
IPL 2023: ಗಿಲ್‌ ಸೂಪರ್ ಬ್ಯಾಟಿಂಗ್‌, 3ನೇ ಗೆಲುವು ಕಂಡ ಗುಜರಾತ್‌!

ಸಾರಾಂಶ

ಆರಂಭಿಕ ಆಟಗಾರ ಶುಭ್‌ಮಾನ್‌ ಗಿಲ್‌ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿಂದ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಗೆಲುವಿನ ಹಳಿಗೆ ಮರಳಿದೆ. ಗುರುವಾರ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ 6 ವಿಕೆಟ್‌ಗಳಿಂದ ಪಂಜಾಬ್‌ ಕಿಂಗ್ಸ್‌ ತಂಡವನ್ನು ಸೋಲಿಸಿತು.  

ಮೊಹಾಲಿ (ಏ.13): ಸಾಧಾರಣ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಕೊನೇ ಓವರ್‌ನವರೆಗೂ ಹೋರಾಟ ತೋರಿದರೂ ಪಂಜಾಬ್‌ ಕಿಂಗ್ಸ್‌ ತಂಡ ಸತತ 2ನೇ ಸೋಲು ಕಂಡಿದೆ. ಗುರುವಾರ ಮೊಹಾಲಿ ಸ್ಟೇಡಿಯಂನಲ್ಲಿ ನಡೆದ ಮುಖಾಮುಖಿಯಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡ 6 ವಿಕೆಟ್‌ಗಳಿಂದ ಪಂಜಾಬ್‌ ತಂಡವನ್ನು ಸೋಲಿಸಿತು. ಕಳೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧ ಮೂರು ವಿಕೆಟ್‌ ಸೋಲು ಕಂಡಿದ್ದ ಗುಜರಾತ್‌ ಟೈಟಾನ್ಸ್‌ ಈ ಜಯದೊಂದಿಗೆ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ತಂಡ ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಶಾರ್ಟ್‌, ಭಾನುಕ ರಾಜಪಕ್ಷ, ಜಿತೇಶ್‌ ಶರ್ಮ, ಸ್ಯಾಮ್‌ ಕರ್ರನ್‌ ಹಾಗೂ ಶಾರುಖ್‌ ಖಾನ್‌ ಅವರ ಉಪಯುಕ್ತ ಕಾಣಿಕೆಗಳಿಗೆ 8 ವಿಕೆಟ್‌ಗೆ 153 ರನ್‌ ಪೇರಿಸಿತ್ತು. ಪ್ರತಿಯಾಗಿ ಶುಭ್‌ಮನ್‌ ಗಿಲ್‌ ಬಾರಿಸಿದ ಅರ್ಧಶತಕದ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ತಂಡ 19.5 ಓವರ್‌ಗಳಲ್ಲಿ 4 ವಿಕೆಟ್‌ಗೆ 154 ರನ್‌ ಬಾರಿಸಿ ಗೆಲುವು ಕಂಡಿತು. ಸತತ ಎರಡು ಪಂದ್ಯಗಳಲ್ಲಿ ಪಂಜಾಬ್‌ ತಂಡದ ಬ್ಯಾಟ್ಸ್‌ಮನ್‌ಗಳು ತೋರಿದ ಸಾಧಾರಣ ನಿರ್ವಹಣೆಯೇ ತಂಡದ ಸತತ 2ನೇ ಸೋಲುಗಳಿಗೆ ಕಾರಣವಾಗಿದೆ.

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಧವನ್‌ ಆಕರ್ಷಕ ಇನ್ನಿಂಗ್ಸ್‌ ಆಡಿದ್ದರಾದರೂ ತಂಡ ಸೋಲು ಕಂಡಿತ್ತು. ಆದರೆ, ಮೊಹಾಲಿಯಲ್ಲಿ ತಂಡದ ಯಾವ ಬ್ಯಾಟ್ಸ್‌ಮನ್‌ಗಳೂ ಕೂಡ ಕ್ರೀಸ್‌ನಲ್ಲಿ ನಿಂತು ಬ್ಯಾಟಿಂಗ್‌ ಮಾಡುವ ಸಾಹಸ ತೋರಲಿಲ್ಲ. ಇದಕ್ಕೆ ಅವರ ಬ್ಯಾಟಿಂಗ್‌ನಲ್ಲಿ ಆಡಿದ್ದ 56 ಡಾಟ್‌ ಬಾಲ್‌ಗಳೇ ಕಾರಣವಾಗಿತ್ತು.

154 ರನ್‌ಗಳ ಚೇಸಿಂಗ್‌ ಆರಂಭಿಸಿದ ಗುಜರಾತ್‌ ತಂಡ ಇನ್ನಿಂಗ್ಸ್‌ನ ಕೊನೇ ಹಂತದಲ್ಲಿ ಸ್ವಲ್ಪ ತಡವರಿಸಿತು. ಮೊದಲ ವಿಕೆಟ್‌ಗೆ ವೃದ್ಧಿಮಾನ್‌ ಸಾಹ (30ರನ್‌, 19 ಎಸೆತ, 5 ಬೌಂಡರಿ) ಹಾಗೂ ಶುಭ್‌ಮನ್‌ ಗಿಲ್‌  (67ರನ್‌, 49 ಎಸೆತ, 7 ಬೌಂಡರಿ, 1 ಸಿಕ್ಸರ್‌) ಕೇವಲ 24 ಎಸೆತಗಳಲ್ಲಿ 48 ರನ್‌ ಸಿಡಿಸಿದರು. ಸ್ಪೋಟಕವಾಗಿ ಆಟವಾಡುತ್ತಿದ್ದ ವೃದ್ಧಿಮಾನ್‌ ಸಾಹ, ರಬಾಡಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ನಂತರ ಕ್ರೀಸ್‌ಗೆ ಇಳಿದ ಸಾಯಿ ಸುದರ್ಶನ್‌ (19 ರನ್‌, 20 ಎಸೆತ, 2 ಬೌಂಡರಿ) 2ನೇ ವಿಕೆಟ್‌ಗೆ ಮತ್ತೊಂದು ಉತ್ತಮ ಜೊತೆಯಾಟ ರೂಪಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

IPL 2023: ಐತಿಹಾಸಿಕ ದಾಖಲೆ ಬರೆದ ಜಡೇಜಾ, ಕ್ರಿಕೆಟ್ ದಿಗ್ಗಜರ ಸಾಲಿಗೆ ಸಿಎಸ್‌ಕೆ ಸ್ಟಾರ್ ಸೇರ್ಪಡೆ..!

ತಂಡದ ಮೊತ್ತ 89 ರನ್‌ ಆಗಿದ್ದಾಗ ಸಾಯಿ ಸುದರ್ಶನ್‌, ಆರ್ಶ್‌ದೀಪ್‌ಗೆ ವಿಕೆಟ್‌ ನೀಡಿದರೆ, ಮೊತ್ತ 100ರ ಗಡಿ ದಾಟಿದ ಬಳಿಕ ನಾಯಕ ಹಾರ್ದಿಕ್‌ ಪಾಂಡ್ಯ (8) ವಿಕೆಟ್‌ ಒಪ್ಪಿಸಿದರು. ಆಗ ಕೊನೆಯ 24 ಎಸೆತಗಳಿಂದ 28 ರನ್‌ ಬಾರಿಸುವ ಸವಾಲು ಗುಜರಾತ್‌ ತಂಡದ ಮುಂದಿತ್ತು.

ಕೆಲವರು NCA ಕಾಯಂ ನಿವಾಸಿಗಳಾಗಿದ್ದಾರೆ: ಟೀಂ ಇಂಡಿಯಾ ಆಟಗಾರರ ವಿರುದ್ದ ರವಿಶಾಸ್ತ್ರಿ ಕಿಡಿ

ಶುಭ್‌ಮನ್‌ ಗಿಲ್‌ ಕೆಲ ಆಕರ್ಷಕ ಬೌಂಡರಿಗಳನ್ನು ಬಾರಿಸಿ ಕೊನೇ ಓವರ್‌ನ 2ನೇ ಎಸೆತದಲ್ಲಿ ನಿರ್ಗಮಿಸಿದ್ದಾಗ, ಗುಜರಾತ್‌ ಗೆಲುವಿಗೆ 4 ಎಸೆತಗಳಲ್ಲಿ ರನ್‌ ಬೇಕಿದ್ದವು. ಸ್ಯಾಮ್‌ ಕರ್ರನ್‌ ಎಚ್ಚರಿಕೆಯ ಬೌಲಿಂಗ್‌ ಮಾಡಿದರೂ, ರಾಹುಲ್‌ ಟೇವಾಟಿಯಾ ಆಕರ್ಷಕ ಬೌಂಡರಿ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೂರ್ಯಕುಮಾರ್ ಯಾದವ್ ಪದೇ ಪದೇ ಮೆಸೇಜ್‌ ಮಾಡ್ತಿದ್ರು: ಹೊಸ ಬಾಂಬ್ ಸಿಡಿಸಿದ ಬಾಲಿವುಡ್‌ನ ಈ ಖ್ಯಾತ ನಟಿ
T20 World Cup: ಟೀಂ ಇಂಡಿಯಾಗೆ ಈ ಆಟಗಾರರ ನಿಜಕ್ಕೂ ಹೊರೆ! ನೀವೇನಂತೀರಾ?