ಐಪಿಎಲ್ 2023 ಟೂರ್ನಿ ಫೈನಲ್ ಪಂದ್ಯಕ್ಕೆ ಇದೀಗ ಮಳೆ ಭೀತಿ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಅಹಮ್ಮದಾಬಾದ್ ಸುತ್ತ ಮುತ್ತ ಸಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿದೆ. ಇಂದು ಕೂಡ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ವರದಿ ಹೇಳುತ್ತಿದೆ. ಮಳೆ ಬಂದು ಫೈನಲ್ ಪಂದ್ಯ ರದ್ದಾಗುತ್ತಾ?
ಅಹಮ್ಮದಾಬಾದ್(ಮೇ.28): ಐಪಿಎಲ್ 2023 ಟೂರ್ನಿ ಅಂತಿಮ ಘಟ್ಟದಲ್ಲಿದೆ. ಅದ್ಧೂರಿಯಾಗಿ ಆರಂಭಗೊಂಡ ಟೂರ್ನಿ ಇಂದಿನ ಫೈನಲ್ ಪಂದ್ಯದೊಂದಿಗೆ ಅಂತ್ಯಗೊಳ್ಳಲಿದೆ. ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಗುಜರಾತ್ ಟೈಟಾನ್ಸ್ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದರೆ, ಇತ್ತ ಚೆನ್ನೈ 5ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ರೋಚಕ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಆದರೆ ಈ ಪಂದ್ಯಕ್ಕೆ ಮಳೆ ಭೀತಿ ಕಾಡುತ್ತಿದೆ. ಅಹಮ್ಮದಬಾದಾ ಹವಾಮಾನ ವರದಿ ಪ್ರಕಾರ ಇಂದು ಸಂಜೆ ಮಳೆಯಾಗಲಿದೆ. ಗುಡುಗು ಸಹಿತ ಮಳೆಯಾಗಲಿದೆ ಎಂದು ವರದಿ ಹೇಳುತ್ತಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಇದೇ ಹೊತ್ತಿನಲ್ಲಿ ಮಳೆ ಆರ್ಭಟವೂ ಶುರುವಾಗಲಿದೆ ಅನ್ನೋದು ವರದಿ ಹೇಳುತ್ತಿದೆ.
ಅಹಮ್ಮದಬಾದ್‌ನಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದೆ. ಶುಕ್ರವಾರ ಅಹಮ್ಮದಾಬಾದ್‌ನಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಇದೀಗ ಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ. ನಗರ ಕೆಲ ಭಾಗದಲ್ಲಿ ಮೋಡ ಕವಿದ ವಾತಾರವರಣವಿದೆ. ರಾತ್ರಿ ವೇಳೆ ಶೇಕಡಾ 61 ರಷ್ಟು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವರದಿ ಹೇಳಿದೆ.
undefined
IPL 2023: ಹಲವು ಅಪರೂಪದ ದಾಖಲೆಗೆ ಸಾಕ್ಷಿಯಾಗುತ್ತಾ ಐಪಿಎಲ್ ಫೈನಲ್..?
ಅಹಮ್ಮದಾಬಾದ್‌ನಲ್ಲಿ ನಡೆದ ಕ್ವಾಲಿಫೈಯರ್ ಪಂದ್ಯ ಮಳೆಯಿಂದ ವಿಳಂಬವಾಗಿ ಆರಂಭಗೊಂಡಿತ್ತು. ಆದರೆ ಮಳೆ ಬಹುಬೇಗನೆ ನಿಂತು ಪಂದ್ಯಕ್ಕೆ ಅನುವು ಮಾಡಿಕೊಟ್ಟಿತ್ತು. ಕೊಂಚ ವಿಳಂಬವಾದರೂ ಓವರ್ ಕಡಿತವಾಗಿರಲಿಲ್ಲ. ಆದರೆ ಇಂದು ಹೆಚ್ಚಿನ ಮಳೆ ಸಾಧ್ಯತೆ ಇರುವುದರಿಂದ ಫೈನಲ್ ಪಂದ್ಯಕ್ಕೆ ಮಳೆ ಆತಂಕವೇ ಹೆಚ್ಚಾಗಿದೆ.
ನಿರಂತರ ಮಳೆಯಿದಂ ಪಂದ್ಯ ಸಂಪೂರ್ಣ ರದ್ದಾದರೆ, ರಿಸರ್ವ್ ಡೇನಲ್ಲಿ ಪಂದ್ಯ ನಡೆಯಲಿದೆ. ಸೋಮವರಾ(ಮೇ.29) ರಂದು ರಿಸರ್ವ್ ಡೇ ಎಂದು ಇಡಲಾಗಿದೆ. ಇಂದು ಮಳೆಯಿಂದ ಪಂದ್ಯ ರದ್ದಾದರೆ ಮೀಸಲು ದಿನದಲ್ಲಿ ಫೈನಲ್ ಪಂದ್ಯ ಆಯೋಜಿಸಲಾಗುತ್ತದೆ. ಒಂದೆಡೆ ಮಳೆ ಆತಂಕದ ನಡುವೆ ಉಭಯ ತಂಡದ ಆಟಗಾರರು ಭರ್ಜರಿ ತಯಾರಿ ನಡೆಸಿದ್ದಾರೆ.
IPL Final 2023: ಮಳೆ ಬಂದರೆ ಏನಾಗಲಿದೆ? ಇಲ್ಲಿದೆ ಕ್ಷಣ ಕ್ಷಣದ ಮಾಹಿತಿ
ಈ ಹಿಂದಿನ 4 ಮುಖಾಮುಖಿಯಲ್ಲಿ 3 ಬಾರಿ ಗುಜರಾತ್ ಟೈಟಾನ್ಸ್ , ಧೋನಿ ನಾಯಕತ್ವದ ಸಿಎಸ್‌ಕೆ ಮಣಿಸಿದೆ. ಆದರೆ ಮಹತ್ವದ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಎಸ್‌ಕೆ ಗೆಲುವು ಸಾಧಿಸಿ ನೇರವಾಗಿ ಫೈನಲ್ ಪ್ರವೇಶ ಪಡೆದಿದೆ. ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಬಾರಿಯೂ ಗುಜರಾತ್ ಚಾಂಪಿಯನ್ ಆಟದ ಮೂಲಕ ಪ್ಲೇ ಆಫ್ ಪ್ರವೇಶಿಸಿತ್ತು. ಆದರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಗ್ಗರಿಸಿದ ಕಾರಣ, 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿ ಫೈನಲ್ ಪ್ರವೇಸಿಸಿತ್ತು.