ಶೀಘ್ರದಲ್ಲೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ..!

Published : May 28, 2023, 03:22 PM IST
ಶೀಘ್ರದಲ್ಲೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ..!

ಸಾರಾಂಶ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 10 ತಂಡಗಳು ಭಾಗಿ ಏಕ​ದಿನ ವಿಶ್ವ​ಕ​ಪ್‌ನ ವೇಳಾ​ಪ​ಟ್ಟಿ​ ಟೆಸ್ಟ್‌ ಚಾಂಪಿ​ಯ​ನ್‌​ಶಿಪ್‌ ಫೈನಲ್‌ ವೇಳೆ ಬಿಡು​ಗ​ಡೆ​ಯಾ​ಗಲಿದೆ 

ಅಹ​ಮ​ದಾ​ಬಾ​ದ್‌(ಮೇ.28): ಮುಂಬ​ರುವ ಐಸಿಸಿ ಏಕ​ದಿನ ವಿಶ್ವ​ಕ​ಪ್‌ನ ವೇಳಾ​ಪ​ಟ್ಟಿ​ಯನ್ನು ಟೆಸ್ಟ್‌ ಚಾಂಪಿ​ಯ​ನ್‌​ಶಿಪ್‌ ಫೈನಲ್‌ ವೇಳೆ ಬಿಡು​ಗ​ಡೆ​ಯಾ​ಗಲಿದೆ ಎಂದು ಬಿಸಿ​ಸಿಐ ಕಾರ‍್ಯ​ದರ್ಶಿ ಜಯ್‌ ಶಾ ತಿಳಿ​ಸಿ​ದ್ದಾರೆ. ಬಹುನಿರೀಕ್ಷಿತ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯವು ಜೂನ್ 07ರಿಂದ 11ರವರೆಗೆ ಲಂಡನ್‌ನ ದಿ ಓವಲ್ ಮೈದಾನದಲ್ಲಿ ನಡೆಯಲಿದೆ. ಚಾಂಪಿಯನ್‌ ಪಟ್ಟಕ್ಕಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ.

ಶನಿ​ವಾರ ಬಿಸಿ​ಸಿಐ ವಿಶೇಷ ಸಭೆ ಬಳಿಕ ಮಾತ​ನಾ​ಡಿದ ಅವರು, ‘ವಿಶ್ವ​ಕ​ಪ್‌ ನಡೆ​ಯುವ ಕ್ರೀಡಾಂಗ​ಣ​ಗಳ ಪಟ್ಟಿ, ಪಂದ್ಯ​ಗಳ ಸಂಪೂರ್ಣ ವೇಳಾ​ಪ​ಟ್ಟಿ​ಯನ್ನು ಟೆಸ್ಟ್‌ ಫೈನಲ್‌ ವೇಳೆ ಸುದ್ದಿ​ಗೋ​ಷ್ಠಿ ಮೂಲಕ ಬಿಡು​ಗಡೆ ಮಾಡು​ತ್ತೇ​ವೆ. ಏಷ್ಯಾ​ಕಪ್‌ ಆತಿ​ಥ್ಯದ ಬಗ್ಗೆ ಎಸಿಸಿ ಸದ​ಸ್ಯರ ಜೊತೆ​ಗಿನ ಸಭೆ ಬಳಿಕ ನಿರ್ಧ​ರಿ​ಸು​ತ್ತೇ​ವೆ’ ಎಂದಿ​ದ್ದಾರೆ. ಅಲ್ಲದೇ ವಿಶ್ವ​ಕಪ್‌, ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌ ಆಯೋ​ಜನಾ ಸಮಿತಿ ಹಾಗೂ ಲೈಂಗಿಕ ಕಿರು​ಕುಳ ತಡೆಗೆ ವಿಶೇಷ ಸಮಿ​ತಿಯನ್ನು ಶೀಘ್ರ​ದಲ್ಲೇ ರಚಿ​ಸು​ತ್ತೇವೆ ಎಂದು ಮಾಹಿತಿ ನೀಡಿ​ದ್ದಾರೆ.

ಖ್ಯಾತ ಕ್ರಿಕೆಟ್ ವೆಬ್‌ಸೈಟ್‌ ESPNCricinfo ಪ್ರಕಾರ, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ನಡೆಯಲಿದೆ. 10 ತಂಡಗಳು ಪಾಲ್ಗೊಳ್ಳಲಿರುವ ಈ ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಬೆಂಗಳೂರು, ಚೆನ್ನೈ, ಡೆಲ್ಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ಲಖನೌ, ಇಂದೋರ್, ರಾಜ್‌ಕೋಟ್, ಮುಂಬೈ ಹಾಗೂ ತಿರುವನಂತಪುರಂ ಸೇರಿದಂತೆ ಒಟ್ಟು ದೇಶದ 12 ನಗರಗಳಲ್ಲಿ ಪಂದ್ಯಾಟಗಳು ಜರುಗಲಿವೆ ಎಂದು ವರದಿಯಾಗಿದೆ. ಈಗಾಗಲೇ ಎಂಟು ತಂಡಗಳು 2023ರ ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆಯನ್ನು ಪಡೆದಿದ್ದು, ಇನ್ನೆರಡು ತಂಡಗಳು ಅರ್ಹತಾ ಸುತ್ತಿನಲ್ಲಿ ಗೆದ್ದು, ಏಕದಿನ ವಿಶ್ವಕಪ್‌ ಪ್ರಧಾನ ಸುತ್ತಿಗೆ ಲಗ್ಗೆಯಿಡಲಿವೆ. 

ಆತಿಥೇಯ ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಈಗಾಗಲೇ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿವೆ. ಇನ್ನು ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ತಂಡ ಕೂಡಾ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆಯಲು ಯಶಸ್ವಿಯಾಗಿದೆ.  

IPL 2023: ಹಲವು ಅಪರೂಪದ ದಾಖಲೆಗೆ ಸಾಕ್ಷಿಯಾಗುತ್ತಾ ಐಪಿಎಲ್ ಫೈನಲ್‌..?

ಇನ್ನೆರಡು ಸ್ಥಾನಗಳಿಗಾಗಿ ಜೂನ್ ಹಾಗೂ ಜುಲೈನಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಜಿಂಬಾಬ್ವೆಯಲ್ಲಿ ನಡೆಯಲಿರುವ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ಗಳಾದ ವೆಸ್ಟ್‌ ಇಂಡೀಸ್, ಶ್ರೀಲಂಕ ಸೇರಿದಂತೆ ಆತಿಥೇಯ ಜಿಂಬಾಬ್ವೆ, ನೆದರ್‌ಲೆಂಡ್ಸ್‌, ಐರ್ಲೆಂಡ್‌, ನೇಪಾಳ, ಓಮನ್, ಸ್ಕಾಟ್ಲೆಂಡ್, ಯುಎಇ ತಂಡಗಳು ಸೆಣಸಾಡಲಿವೆ.

ಅಕ್ಟೋಬರ್ 05ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್‌ ತಂಡಗಳು ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿವೆ. ಇನ್ನು ಫೈನಲ್‌ ಪಂದ್ಯವು ಇದೇ ಮೈದಾನದಲ್ಲಿ ನವೆಂಬರ್ 19ರಂದು ಜರುಗಲಿದೆ ಎನ್ನಲಾಗುತ್ತಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!