
ಮೊಹಾಲಿ(ಏ.20): 7 ದಿನಗಳ ಅಂತರದಲ್ಲಿ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಎರಡು ಬಾರಿ ಸೋಲಿನ ಆಘಾತಕ್ಕೆ ಒಳಗಾಗಿರುವ ಆರ್‌ಸಿಬಿಗೆ ಈಗ ತವರಿನಾಚೆಯ ಅಗ್ನಿಪರೀಕ್ಷೆ ಎದುರಾಗಲಿದೆ. 5 ಪಂದ್ಯಗಳಲ್ಲಿ ಮೂರರಲ್ಲಿ ಸೋತು ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಾರಿರುವ ಆರ್‌ಸಿಬಿ ಗುರುವಾರ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಡಲಿದ್ದು, ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ. ಅತ್ತ ಕಳೆದ ಪಂದ್ಯದ ಮೂಲಕ ಜಯದ ಹಳಿಗೆ ಮರಳಿರುವ ಪಂಜಾಬ್ ತವರಿನ ಲಾಭವೆತ್ತಿ ಆರ್ಸಿಬಿಯನ್ನು ಮಣಿಸಲು ಎದುರು ನೋಡುತ್ತಿದೆ.
ಆರ್‌ಸಿಬಿ ಈವರೆಗೆ ಕೇವಲ ಒಂದು ಪಂದ್ಯ ಮಾತ್ರ ತವರಿನಾಚೆ ಆಡಿದ್ದು, ಕೋಲ್ಕತಾ ವಿರುದ್ಧ ಹೀನಾಯ ಸೋಲು ಕಂಡಿತ್ತು. ಮಧ್ಯಮ ಕ್ರಮಾಂಕದ ವೈಫಲ್ಯ ಹಾಗೂ ದುಬಾರಿಯಾಗುತ್ತಿರುವ ಬೌಲಿಂಗ್ ವಿಭಾಗ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ತಂಡ ಕಾಗದ ಮೇಲಷ್ಟೇ ಬಲಿಷ್ಠವಾಗಿ ಕಾಣುತ್ತಿದೆ. ಆದರೆ ಈ ಸಲವೂ ಕೆಲವೇ ಆಟಗಾರರು ತಂಡದ ಇಡೀ ಭಾರ ಹೊರುತ್ತಿದ್ದು, ನಿರ್ಣಾಯಕ ಹಂತಗಳಲ್ಲಿ ಕುಸಿಯುವುದನ್ನು ಆರ್‌ಸಿಬಿ ಮುಂದುವರಿಸಿದೆ.
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್. ಈ ಮೂವರನ್ನು ಔಟ್ ಮಾಡಿದರೆ ಮುಕ್ಕಾಲು ಭಾಗ ಪಂದ್ಯ ಗೆದ್ದಂತೆ ಎನ್ನುವುದು ಪ್ರತಿ ಎದುರಾಳಿಗೂ ತಿಳಿದಿದ್ದು, ಈ ಮೂರವನ್ನೇ ಗುರಿಯಾಗಿಸಿ ರಣತಂತ್ರ ರೂಪಿಸಲಾಗುತ್ತಿದೆ. ಈ ಮೂವರು ಒಟ್ಟಾಗಿ ಸಿಡಿದರೂ ಉಳಿದವರ ವೈಫಲ್ಯ ತಂಡಕ್ಕೆ ಹಿನ್ನಡೆ ಉಂಟು ಮಾಡುತ್ತಿದೆ. ಆರ್‌ಸಿಬಿಯ ಮಧ್ಯಮ ಕ್ರಮಾಂಕ, ಬೌಲಿಂಗ್ ಪಡೆ ಎರಡೂ ದುರ್ಬಲವಾಗಿದೆ.
IPL 2023 ಅಂತಿಮ ಓವರ್‌ನಲ್ಲಿ ಲೆಕ್ಕಾಚಾರ ಬದಲು, ರಾಜಸ್ಥಾನ ಮಣಿಸಿದ ಲಖನೌ ಸೂಪರ್ ಜೈಂಟ್ಸ್!
ರಬಾಡ ಭೀತಿ: ಆರ್‌ಸಿಬಿಯ ಅಗ್ರ ಬ್ಯಾಟರ್‌ಗಳ ಮೇಲೆ ಪಂಜಾಬ್ ವೇಗಿ ಕಗಿಸೋ ರಬಾಡ ಉತ್ತಮ ದಾಖಲೆ ಹೊಂದಿದ್ದಾರೆ. ಟಿ20ಯಲ್ಲಿ ಕೊಹ್ಲಿ, ಕಾರ್ತಿಕ್ರನ್ನು ತಲಾ 4, ಮ್ಯಾಕ್ಸ್‌ವೆಲ್, ಡು ಪ್ಲೆಸಿಯನ್ನು ತಲಾ 3 ಬಾರಿ ಔಟ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್‌್ಸಗೆ ರಬಾಡ ಅವರೇ ಟ್ರಂಪ್ ಕಾರ್ಡ್ ಆಗಬಹುದು. ಇನ್ನು ಮೊಹಮದ್ ಸಿರಾಜ್ ಹೊರತುಪಡಿಸಿ ಉಳಿದ ಬೌಲರ್‌ಗಳು ದುಬಾರಿಯಾಗುತ್ತಿದ್ದಾರೆ. ಬೌಲರ್‌ಗಳಿಂದ ಸಂಘಟಿತ ಪ್ರದರ್ಶನ ಮೂಡಿಬಂದರಷ್ಟೇ ಗೆಲುವು ಒಲಿಯಲಿದೆ.
ಧವನ್ ಆಡ್ತಾರಾ?: ಮತ್ತೊಂದೆಡೆ ಪಂಜಾಬ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಭುಜದ ಗಾಯದಿಂದ ಚೇತರಿಸಿಕೊಳ್ಳದ ಧವನ್ ಈ ಪಂದ್ಯದಲ್ಲೂ ಆಡುವ ಸಾಧ್ಯತೆ ಕಡಿಮೆ. ಸ್ಯಾಮ್ ಕರ್ರನ್ ಈ ಪಂದ್ಯದಲ್ಲೂ ನಾಯಕತ್ವ ವಹಿಸುವುದು ಬಹುತೇಕ ಖಚಿತ. ಲಿವಿಂಗ್ಸ್ಟೋನ್ ತಂಡ ಸೇರಿದ್ದರೂ ಇನ್ನಷ್ಟೇ ಫಿಟ್ ಆಗಬೇಕಿದ್ದು, ಈ ಪಂದ್ಯದಲ್ಲೂ ಆಡುವ ಬಗ್ಗೆ ಖಚಿತತೆ ಇಲ್ಲ.
ಒಟ್ಟು ಮುಖಾಮುಖಿ: 30
ಆರ್‌ಸಿಬಿ: 13
ಪಂಜಾಬ್: 17
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ಫಾಫ್ ಡು ಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಶಾಬಾಜ್ ಅಹಮ್ಮದ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ವೈಶಾಖ್ ವಿಜಯ್‌ಕುಮಾರ್.
ಪಂಜಾಬ್: ಪ್ರಭ್‌ಸಿಮ್ರನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಹಪ್ರೀರ್ತ್ ಬ್ರಾರ್, ಶಿಖರ್ ಧವನ್(ನಾಯಕ), ಸಿಕಂದರ್ ರಾಜಾ, ಕರ್ರನ್, ಜಿತೇಶ್ ಶರ್ಮಾ, ಶಾರೂಖ್ ಖಾನ್, ರಿಷಿ ಧವನ್, ರಾಹುಲ್ ಚಹಲ್, ಅಶ್‌ರ್‍ದೀಪ್ ಸಿಂಗ್, ಕಗಿಸೋ ರಬಾಡ
ಪಂದ್ಯ: ಮ 3.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ
ಪಿಚ್ ರಿಪೋರ್ಚ್
ಮೊಹಾಲಿಯಲ್ಲಿ 2018ರ ಬಳಿಕ ಐಪಿಎಲ್‌ನಲ್ಲಿ ಮೊದಲ ಇನ್ನಿಂಗ್‌್ಸನ ಸರಾಸರಿ ಮೊತ್ತ 175 ರನ್. ಆದರೆ ಮೊದಲ ಇನ್ನಿಂಗ್‌್ಸನ ಗೆಲುವಿನ ಸರಾಸರಿ ಮೊತ್ತ 186 ರನ್ ಆಗಿದೆ. ಈ ವರ್ಷ ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 191 ರನ್ ಗಳಿಸಿ ಪಂಜಾಬ್ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲೂ ಬ್ಯಾಟರ್‌ಗಳೇ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.