IPL 2023 ಅಬ್ಬರಿಸಲು ವಿಫಲವಾದ ಲಖನೌ, ರಾಜಸ್ಥಾನ ರಾಯಲ್ಸ್‌ಗೆ 155 ರನ್ ಟಾರ್ಗೆಟ್!

By Suvarna NewsFirst Published Apr 19, 2023, 9:23 PM IST
Highlights

ಕೈಲ್ ಮೇಯರ್ಸ್ ಅರ್ಧಶತಕ, ನಾಯಕ ರಾಹುಲ್ 39 ರನ್, ಅಂತಿಮ ಹಂತದಲ್ಲಿ ಪೂರನ್ ಹಾಗೂ ಸ್ಟೊಯ್ನಿಸ್ ಬ್ಯಾಟಿಂಗ್‌ನಿಂದ ಲಖನೌ ಸೂಪರ್ ಜೈಂಟ್ಸ್ 154 ರನ್ ಸಿಡಿಸಿದೆ.

ಜೈಪುರ(ಏ.19): ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ದಿಟ್ಟ ಹೋರಾಟ ನೀಡಿದರೂ ರನ್ ರೇಟ್ ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೈಲ್ ಮೇಯರ್ಸ್, ನಾಯಕ ಕೆಎಲ್ ರಾಹುಲ್, ನಿಕೋಲಸ್ ಪೂರನ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ಪ್ರಯತ್ನದಿಂದ ಲಖನೌ 7 ವಿಕೆಟ್ ನಷ್ಟಕ್ಕೆ 154 ರನ್ ಸಿಡಿಸಿತು.

ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಕೆಎಲ್ ರಾಹುಲ್ ಹಾಗೂ ಕೈಲ್ ಮೇಯರ್ಸ್ ಉತ್ತಮ ಆರಂಭ ನೀಡಿದರು. ಆದರೆ ರನ್ ರೇಟ್ ಮಾತ್ರ ಟಿ20 ಮಾದರಿಯಲ್ಲಿ ಇರಲಿಲ್ಲ. ಮೊದಲ ವಿಕೆಟ್‌ಗೆ ಈ ಜೋಡಿ 82 ರನ್ ಜೊತೆಯಾಟ ನೀಡಿತ್ತು. ಆದರೆ 11 ಓವರ್ ಬಳಸಿಕೊಂಡಿತ್ತು. ಕೆಎಲ್ ರಾಹುಲ್ 32 ಎಸೆತದಲ್ಲಿ 39  ರನ್ ಸಿಡಿಸಿ ಔಟಾದರು. ಇತ್ತ  ಕೈಲ್ ಮೇಯರ್ಸ್ ಹೋರಾಟ ಮುಂದುವರಿಸಿ ಹಾಫ್ ಸೆಂಚುರಿ ಸಿಡಿಸಿದರು.

Latest Videos

ಇದರ ನಡುವೆ ಆಯುಷ್ ಬದೋನಿ ಹಾಗೂ ದೀಪಕ್ ಹೂಡ ಅಬ್ಬರಿಸಲಿಲ್ಲ. ಹೂಡ ಮತ್ತೆ ಕಳಪೆ ಫಾರ್ಮ್ ಲಖನೌ ತಂಡದ ಚಿಂತೆ ಹೆಚ್ಚಿಸಿತು. ಇತ್ತ ಕೈಲ್ ಮೇಯರ್ಸ್ 51 ರನ್ ಸಿಡಿಸಿ ನಿರ್ಗಮಿಸಿದರು. ಮಾರ್ಕಸ್ ಸ್ಟೊಯ್ನಿಸ್ ಹಾಗೂ ನಿಕೋಲ್ ಪೂರನ್ ಕೊಂಚ ಹೋರಾಟ ನೀಡಿದರು. ಆದರೆ ಹೆಚ್ಚು ಹೊತ್ತು ಇರಲಿಲ್ಲ. ಸ್ಟೊಯ್ನಿಸ್ 16 ಎಸೆತದಲ್ಲಿ 21 ರನ್ ಸಿಡಿಸಿ ಔಟಾದರು. ಪೂರನ್ 20 ಎಸೆತದಲ್ಲಿ 28 ರನ್ ಸಿಡಿಸಿ ಔಟಾದರು.

ಕ್ರುನಾಲ್ ಪಾಂಡ್ಯ ಅಜೇಯ 4 ರನ್ ಸಿಡಿಸಿದರೆ, ಯುಧ್ವೀರ್ ಸಿಂಗ್ 1 ರನ್ ಸಿಡಿಸಿ ಔಟಾದರು. ಈ ಮೂಲಕ ಲಖನೌ ಸೂಪರ್ ಜೈಂಟ್ಸ್ 7 ವಿಕೆಟ್ ನಷ್ಟಕ್ಕೆ 145 ರನ್ ಸಿಡಿಸಿತು.  

click me!