ಕೆಕೆಆರ್ ಎದುರು ಮೋಹನ್‌ ಬಗಾನ್‌ ಜೆರ್ಸಿ ತೊಡಲಿರುವ ಜೈಂಟ್ಸ್‌! ಯಾಕೆ ಹೀಗೆ?

By Naveen Kodase  |  First Published May 19, 2023, 11:30 AM IST

* ಲಖನೌ-ಕೋಲ್ಕತಾ ನಡುವಿನ ಪಂದ್ಯಕ್ಕೆ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ
* ಮಹತ್ವದ ಪಂದ್ಯದಲ್ಲಿ ಮೋಹನ್ ಬಗಾನ್ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ ಲಖನೌ
* ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ ಪಂದ್ಯ


ಕೋಲ್ಕತಾ(ಮೇ.19): ಕೋಲ್ಕತಾ ನೈಟ್ ರೈಡರ್ಸ್‌ ವಿರುದ್ಧ ಶನಿವಾರ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್‌ ತಂಡ ದೇಶದ ಹಳೆಯ ಫುಟ್ಬಾಲ್‌ ಕ್ಲಬ್‌ಗಳಲ್ಲಿ ಒಂದಾದ ಮೋಹನ್‌ ಬಗಾನ್‌ನ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಐತಿಹಾಸಿಕ ಫುಟ್ಬಾಲ್‌ ಕ್ಲಬ್‌ಗೆ ಗೌರವ ಸಮರ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಂಡದ ಮಾಲಿಕ ತಿಳಿಸಿದ್ದಾರೆ. ಲಖನೌ ಹಾಗೂ ಬಗಾನ್‌ ಎರಡೂ ತಂಡಗಳ ಮಾಲಿಕತ್ವ ಸಂಜೀವ್‌ ಗೋಯೆಂಕಾ ಅವರ ಬಳಿ ಇದೆ.

ಮೋಹನ್‌ ಬಗಾನ್‌ ಎನ್ನುವುದು ಒಂದು ಸಂಸ್ಥೆಯಲ್ಲ, ಬದಲಾಗಿ ಅದೊಂದು ಎಮೋಷನ್. ಇದು ಕೋಲ್ಕತಾ ನಗರವನ್ನು ಪ್ರತಿನಿಧಿಸಿದ ಪರಂಪರೆಯಾಗಿದೆ ಎಂದು ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕರಾದ ಶಾಶ್ವತ್ ಗೋಯೆಂಕಾ ಅಭಿಪ್ರಾಯಪಟ್ಟಿದ್ದಾರೆ. 

Tap to resize

Latest Videos

ಈ ವಿಚಾರವನ್ನು ಮನದಲ್ಲಿಟ್ಟುಕೊಂಡು, ಲಖನೌ ಸೂಪರ್ ಜೈಂಟ್ಸ್ ತಂಡವು ಐತಿಹಾಸಿಕ ಮೋಹನ್ ಬಗಾನ್ ತಂಡವು ತೊಡುವ ಜೆರ್ಸಿಯೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಕಣಕ್ಕಿಳಿಯಲು ತೀರ್ಮಾನಿಸಲಾಗಿದೆ. ನಮ್ಮ ಕೋಲ್ಕತಾ ನಗರವನ್ನು ಪ್ರತಿನಿಧಿಸಿದ ಮೋಹನ್ ಬಗಾನ್‌ಗೆ ಗೌರವ ಸೂಚಿಸುವ ಸಲುವಾಗಿ ಈ ತೀರ್ಮಾನ ಮಾಡಲಾಗಿದೆ ಎಂದು ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕರು ತಿಳಿಸಿದ್ದಾರೆ.

ತಂಡದೊಳಗೆ ಏನಾಗುತ್ತಿದೆ ತಿಳೀತಿಲ್ಲ: ಸನ್‌ರೈಸರ್ಸ್ ನಾಯಕ ಮಾರ್ಕ್‌ರಮ್ ಅಚ್ಚರಿಯ ಹೇಳಿಕೆ..!

ಕೇವಲ ಮೋಹನ್ ಬಗಾನ್‌ ಅಭಿಮಾನಿಗಳು ಮಾತ್ರವಲ್ಲ, ಕೋಲ್ಕತಾದ ನಿವಾಸಿಗಳೆಲ್ಲರೂ ನಮ್ಮನ್ನು ಬೆಂಬಲಿಸಲಿದ್ದಾರೆ ಎನ್ನುವ ವಿಶ್ವಾಸವಿದೆ. ನಮ್ಮ ಪಾಲಿಗೆ ಕೋಲ್ಕತಾವೂ ಒಂದು ರೀತಿಯಲ್ಲಿ ತವರು ಇದ್ದ ಹಾಗೆ, ಹಾಗಾಗಿ ಹೆಚ್ಚಿನ ರೀತಿಯಲ್ಲಿ ಕೋಲ್ಕತಾದ ಮಂದಿ ನಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಗೋಯೆಂಕಾ ಹೇಳಿದ್ದಾರೆ.

ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಕೃನಾಲ್ ಪಾಂಡ್ಯ, ಲಖನೌ ಸೂಪರ್ ಜೈಂಟ್ಸ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ಲಖನೌ ಸೂಪರ್ ಜೈಂಟ್ಸ್ ತಂಡವು ಇದುವರೆಗೂ 13 ಪಂದ್ಯಗಳನ್ನಾಡಿ  7 ಗೆಲುವು, 5 ಸೋಲು ಸಹಿತ ಒಟ್ಟು 15 ಅಂಕಗಳೊಂದಿಗೆ 15 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಇನ್ನೊಂದು ಗೆಲುವು ಲಖನೌ ತಂಡವನ್ನು ಪ್ಲೇ ಆಫ್‌ಗೆ ಅಧಿಕೃತ ಎಂಟ್ರಿ ಕೊಡುವಂತೆ ಮಾಡಲಿದೆ.

ಮುಂಬೈ ಬೌಲ​ರ್ಸ್‌ ಮೇಲೆ ಕೋಚ್‌ ಬಾಂಡ್‌ ಕೆಂಡ!

ಲಖನೌ: ನಿರ್ಣಾಯಕ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್‌ ವಿರುದ್ಧ ತಮ್ಮ ತಂಡ ಸೋತ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಂಬೈ ಇಂಡಿಯನ್ಸ್‌ನ ಬೌಲಿಂಗ್‌ ಕೋಚ್‌ ಶೇನ್‌ ಬಾಂಡ್‌, ಬೌಲರ್‌ಗಳ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ. ‘ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಸಭೆ ನಡೆಸಿದಾಗ ಪ್ಲ್ಯಾನ್‌ ಮಾಡುವುದೇ ಬೇರೆ, ಆದರೆ ಮೈದಾನದಲ್ಲಿ ನಡೆಯುವುದೇ ಬೇರೆ. ಯೋಜನೆಯಂತೆ ಯಾವದೂ ಆಗುತ್ತಿಲ್ಲ. ಪದೇಪದೇ ಬೌಲರ್‌ಗಳ ವೈಫಲ್ಯವೇ ತಂಡದ ಈ ಸ್ಥಿತಿಗೆ ಕಾರಣ’ ಎಂದು ಬಾಂಡ್‌ ಹತಾಶೆಯಿಂದ ನುಡಿದಿದ್ದಾರೆ.

click me!