IPL 2023: ಟಾಸ್‌ ಗೆದ್ದ ಲಖನೌ, ಆರ್‌ಸಿಬಿ ಮೊದಲು ಬ್ಯಾಟಿಂಗ್‌

Published : Apr 10, 2023, 07:05 PM ISTUpdated : Apr 10, 2023, 07:26 PM IST
IPL 2023: ಟಾಸ್‌ ಗೆದ್ದ ಲಖನೌ, ಆರ್‌ಸಿಬಿ ಮೊದಲು ಬ್ಯಾಟಿಂಗ್‌

ಸಾರಾಂಶ

ಕೆಕೆಆರ್‌ ವಿರುದ್ಧದ ಆಘಾತಕಾರಿ ಸೋಲಿನಿಂದ ಕಂಗೆಟ್ಟಿರುವ ಆರ್‌ಸಿಬಿ ತಂಡ ಸೋಮವಾರದ ಪಂದ್ಯದಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ಸಾರಥ್ಯದ ಲಖನೌ ಸೂಪರ್‌ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಲಖನೌ ಟಾಸ್‌ ಗೆಲುವು ಕಂಡಿದೆ.

ಬೆಂಗಳೂರು (ಏ.10): ಗೆಲುವಿನ ಹಳಿಗೆ ಏರುವ ನಿರೀಕ್ಷೆಯಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ 2023ಯ ತನ್ನ ಮೂರನೇ ಪಂದ್ಯದಲ್ಲಿ ಸೋಮವಾರ ಕನ್ನಡಿಗ ಕೆಎಲ್‌ ರಾಹುಲ್‌ ಸಾರಥ್ಯದ ಲಖನೌ ಸೂಪರ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟಾಸ್‌ ಗೆಲುವು ಸಾಧಿಸಿದ ಕೆಎಲ್‌ ರಾಹುಲ್‌, ಮೊದಲು ಬೌಲಿಂಗ್‌ ಮಾಡುವ ನಿರ್ಧಾರ ಮಾಡಿದ್ದಾರೆ. ತವರಿನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ದೊಡ್ಡ ಗೆಲುವಿನೊಂದಿಗೆ ಆರ್‌ಸಿಬಿ ಅಭಿಯಾನ ಆರಂಭ ಮಾಡಿತ್ತು. ಆದರೆ, ನಂತರದ ಪಂದ್ಯದಲ್ಲಿ ಕೆಕೆಕಾರ್‌ ವಿರುದ್ದ ತಂಡ ದೊಡ್ಡ ಅಂತರದ ಸೋಲು ಕಂಡಿತ್ತು. ಆರ್‌ಸಿಬಿ ತಂಡ ಪಂದ್ಯಕ್ಕಾಗಿ ಕರ್ಣ್‌ ಶರ್ಮ, ಆಕಾಶ್‌ ದೀಪ್‌ ಸಿಂಗ್‌ ಹಾಗೂ ಮಿಚೆಲ್‌ ಬ್ರೇಸ್‌ವೆಲ್‌ರನ್ನು ಹೊರಹಾಕಿದೆ. ಲಖನೌ ತಂಡ ಯಶ್‌ ಠಾಕೂರ್‌ ಹಾಗೂ ಟಿಮ್‌ ಶೆಫರ್ಡ್‌ರನ್ನು ಕೈಬಿಟ್ಟಿದ್ದು, ಮಾರಕ ವೇಗಿ ಮಾರ್ಕ್‌ ವುಡ್‌ ತಂಡಕ್ಕೆ ವಾಪಸಾಗಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿ.ಕೀ), ಜಯದೇವ್ ಉನದ್ಕತ್, ಅಮಿತ್ ಮಿಶ್ರಾ, ಅವೇಶ್ ಖಾನ್, ಮಾರ್ಕ್ ವುಡ್, ರವಿ ಬಿಷ್ಣೋಯ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿ.ಕೀ), ಅನುಜ್ ರಾವತ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.\

ಕೆ ಎಲ್ ರಾಹುಲ್‌ ಬಗ್ಗೆ ಎಚ್ಚರಿಕೆಯಿಂದರಿ: RCB ಪಡೆಗೆ ಟೀಂ ಇಂಡಿಯಾ ಮಾಜಿ ಕೋಚ್‌ ರವಿಶಾಸ್ತ್ರಿ ಕಿವಿಮಾತು

ಟಾಸ್‌ ವೇಳೆ ಮಾತನಾಡಿದ ಫಾಫ್‌ ಡು ಪ್ಲೆಸಿಸ್‌, ಪಿಚ್‌ ಸ್ವಲ್ಪ ಒಣವಾಗಿರುವಂತೆ ಕಾಣುತ್ತಿದೆ. ಕಳೆದ ಪಂದ್ಯದಲ್ಲಿ ನಾವು ಇಲ್ಲಿ ಚೇಸಿಂಗ್‌ ಮಾಡಿದ್ದೆವು. ಈ ಬಾರಿ ಇದು ಬದಲಾಗುವ ಸಾಧ್ಯತೆ ಇದೆ. ಈ ಮುಖಾಮುಖಿಯನ್ನು ಎದುರು ನೋಡುತ್ತಿದ್ದೇನೆ. ನಾಲ್ವರು ವೇಗಿಗಳ ಟೀಮ್‌ ನಮ್ಮದಾಗಿದೆ ಎಂದು ಹೇಳಿದರು.

ನೆಲ ಒರೆಸುವ ಕೆಲಸ ಬಿಟ್ಟು ಓಡಿ ಹೋಗಿದ್ದ ರಿಂಕು ಸಿಂಗ್‌ ಈಗ ಐಪಿಎಲ್ ಸೂಪರ್‌ ಸ್ಟಾರ್‌..!

'ಮೊದಲು ಬೌಲಿಂಗ್‌ ಮಾಡುವ ಆಯ್ಕೆ ಮಾಡಿದ್ದೇವೆ. ಈ ಮೈದಾನದ ಇತಿಹಾಸದ ಆಧಾರದಲ್ಲಿ ಇದರ ನಿರ್ಧಾರ ಮಾಡಿದ್ದೇನೆ. ಅದರಲ್ಲಿ ಯಾವುದೇ ಅನುಮಾನಗಳಿಲ್ಲ. ಈಗಲೂ ಇದು ನನಗೆ ಮನೆ. ಇಲ್ಲಿಯೇ ಬೆಳೆದವನು ನಾನು. ಸಾಕಷ್ಟು ಕ್ರಿಕೆಟ್‌ಅನ್ನು ಈ ಮೈದಾನದಲ್ಲಿ ಆಡಿದ್ದೇನೆ. ಚೆನ್ನೈ ವಿರುದ್ಧ 220 ರನ್‌ ಚೇಸಿಂಗ್‌ ಮಾಡುವ ಸನಿಹ ಬಂದಿದ್ದೆವು. ಇಲ್ಲಿ ಫ್ಯಾನ್ಸ್‌ ಕೂಡ ತಂಡಕ್ಕೆ ಬೆಂಬಲ ನೀಡುತ್ತಾರೆ. ಕೆಲ ಬದಲಾವಣೆಗಳಿವೆ. ಯಶ್‌ ಠಾಕೂರ್‌ ಹೊರಬಿದ್ದಿದ್ದು,ಮಾರ್ಕ್‌ ವುಡ್‌ ತಂಡಕ್ಕೆ ಬಂದಿದ್ದಾರೆ. ಇನ್ನೂ ಕೆಲ ಬದಲಾವಣೆ ಆಗಿದೆ' ಎಂದು ಕೆಎಲ್‌ ರಾಹುಲ್‌ ಟಾಸ್‌ ವೇಳೆ ಹೇಳಿದರು.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ