ಇಳಕಲ್‌ ಸೀರೆಯಲ್ಲಿ 'ಈ ಸಲ ಕಪ್‌ ನಮ್ದೇ' ಘೋಷವಾಕ್ಯ! ಆರ್‌ಸಿಬಿ ಅಭಿಮಾನಿ ಸೀರೆಗೆ ಮಹಿಳೆಯರ ಬೇಡಿಕೆ

By Sathish Kumar KH  |  First Published Apr 10, 2023, 5:44 PM IST

ಕರ್ನಾಟಕದ ಪ್ರಸಿದ್ಧ ಇಳಕಲ್‌ ಸೀರೆಯಲ್ಲಿ ಈ ಸಲ ಕಪ್‌ ನಮ್ದೇ ಎಂಬ ಘೋಷವಾಕ್ಯ ಮೂಡಿಬಂದಿದೆ. ಆರ್‌ಸಿಬಿ ಅಭಿಮಾನಿ ಮೇಘರಾಜ್‌ ನೇಯ್ಗೆ ಮಾಡಿದ ಸೀರೆಗೆ ಭಾರಿ ಬೇಡಿಕೆ ಬಂದಿದೆ. 


ಬಾಗಲಕೋಟೆ (ಏ.10): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಈ ಬಾರಿ ಐಪಿಎಲ್ ಕಪ್ ಗೆಲ್ಲುತ್ತೆ, ಮುಂದಿನ ಬಾರಿ ಕಪ್ ಗೆಲ್ಲುತ್ತೆ ಅಂತ ಅಂದುಕೊಂಡಿದ್ದೇ ಬಂತು. ಆದರೆ 15 ಆವೃತ್ತಿಗಳು ಪೂರ್ಣಗೊಂಡರೂ ಆರ್‌ಸಿಬಿ ಪಾಲಿಗೆ ಕಪ್ ಒಲಿದಿಲ್ಲ. ಈಗ ಕರ್ನಾಟಕದ ಪ್ರಸಿದ್ಧ ಇಳಕಲ್‌ ಸೀರೆಯಲ್ಲಿ ಈ ಸಲ ಕಪ್‌ ನಮ್ದೇ ಎಂಬ ಘೋಷವಾಕ್ಯ ಮೂಡಿಬಂದಿದೆ. ಆರ್‌ಸಿಬಿ ಅಭಿಮಾನಿ ಮೇಘರಾಜ್‌ ನೇಯ್ಗೆ ಮಾಡಿದ ಸೀರೆಗೆ ಭಾರಿ ಬೇಡಿಕೆ ಬಂದಿದೆ. 

ಹೌದು, ಇಳಕಲ್ ಸೀರೆಯಲ್ಲೂ ಮೂಡಿ ಬಂತು, ಈ ಸಲ ಕಪ್ ನಮ್ಮದೇ ಎಂಬ ಘೋಷವಾಕ್ಯ. ಆರ್ ಸಿಬಿ ಅಭಿಮಾನಿಯೊಬ್ಬ ಇಳಕಲ್‌ ಸೀರೆಯಲ್ಲಿ ಘೋಷವಾಕ್ಯ ಬರೆಯುವ ಮೂಲಕ ತನ್ನ ತನ್ನ ಅಭಿಮಾನವನ್ನು ಅಭಿವ್ಯಕ್ತ ಪಡಿಸಿದ್ದಾನೆ. ಇನ್ನು ನೇಕಾರ ಯುವಕ ಆರ್‌ಸಿಬಿ ಕ್ರಿಕೆಟ್ ತಂಡದ ಮೇಲಿನ ಅಭಿಮಾನವನ್ನು ಕಂಡು ಸ್ಥಳೀಯರು ಕೂಡ ಆತನ ಬೆನ್ನು ತಟ್ಟಿ ಪ್ರೋತ್ಸಾಹ ನಿಡಿದ್ದಾರೆ. ಮೇಘರಾಜ್ ತನ್ನ ಮನೆಯಲ್ಲಿ ನೇಯುವ ಇಳಕಲ್ ಸೀರೆಯಲ್ಲಿ ಈ ಸಲ ಕಪ್ ನಮ್ದೆ ಎಂದು ನೇಯ್ದಿದ್ದಾನೆ. 2023ರ ಐಪಿಎಲ್ ಕಪ್ ನಮ್ದೆ ಎಂದು ಕಪ್ ಸಮೇತ ಸೀರೆಯಲ್ಲಿ ನೇಯ್ಗೆ ಮಾಡಿದ್ದಾನೆ. ಇನ್ನು ಸೀರೆಯನ್ನು ಎಲ್ಲರ ಮುಂದೆ ಪ್ರದರ್ಶನ ಮಾಡಿದ್ದು, ಈ ಸೀರೆ ಮಾರಾಟ ಮಾಡೊಲ್ಲ ಎಂದಿದ್ದಾನೆ. ಈ ಸಲ ಕಪ್‌ ಗೆಲ್ಲುವ ಆರ್‌ಸಿಬಿ ತಂಡಕ್ಕೆ ಸೀರೆಯನ್ನು ಕೊಡುಗೆ ನೀಡುವುದಾಗಿ ಹೇಳಿಕೊಂಡಿದ್ದಾನೆ. 

Tap to resize

Latest Videos

undefined

IPL 2023: ಲಖನೌ ಸೂಪರ್‌ಜೈಂಟ್ಸ್‌ ಸವಾಲಿಗೆ ಸಜ್ಜಾದ ಆರ್‌ಸಿಬಿ

ಆರ್‌ಸಿಬಿ ಕಪ್‌ ಸೀರೆಗೆ ಭಾರಿ ಬೇಡಿಕೆ:  ಇನ್ನು ಬಾಗಲಕೋಟೆ ಜಿಲ್ಲೆಯ ಇಳಕಲ್‌ ಸೀರೆಯಲ್ಲಿ ಈ ಸಲ ಕಪ್‌ ನಮ್ದೇ ಎಂಬ ನೇಯ್ಗೆ ಹಾಗೂ ಟ್ರೋಫಿ ಹಿಡಿದ ಆರ್‌ಸಿಬಿಯ ನೇಯ್ಗೆ ಇರುವ ಸೀರೆಗೆ ಭಾರಿ ಬೇಡಿಕೆ ಬಂದಿದೆ. ಈ ಸೀರೆ ನೇಯ್ಗೆ ಮಾಡಿ ಪ್ರದರ್ಶನ ಂಆಡುತ್ತಿದ್ದಂತೆ ಎಲ್ಲೆಡೆ ವೀಡಿಯೋ ಹಾಗೂ ಫೋಟೋಗಳು ವೈರಲ್‌ ಆಗಿವೆ. ಆರ್‌ಸಿಬಿ ತಂಡಕ್ಕೆ ಕೋಟ್ಯಂತರ ಅಭಿಮಾನಿಗಳು ಇದ್ದು, ಈ ಸೀರೆಯನ್ನು ತಮಗೆ ಮಾರಾಟ ಮಾಡುವಂತೆಯೂ ಬೇಡಿಕೆ ಇಟ್ಟಿದ್ದಾರೆ. ಇನ್ನು ಬೇಡಿಕೆ ಹೆಚ್ಚಾಗುತ್ತಿದ್ದು, ಭಾರಿ ಬೆಲೆಗೆ ಮಾರಾಟ ಆಗುತ್ತದೆ. ನಿಮ್ಮ ಅಭಿಮಾನದ ಈ ಕಾರ್ಯ ಉತ್ತಮ ಆದಾಯ ತಂದುಕೊಡುತ್ತದೆ ಎಂದು ಕೆಲವರು ಹೇಳಿದ್ದಾರೆ.

16ನೇ ಆವೃತ್ತಿಯಲ್ಲಾದರೂ ಕಪ್‌ ಗೆಲ್ಲುವರೇ ಆರ್‌ಸಿಬಿ: ಆದರೆ 15 ಆವೃತ್ತಿ ಕಳೆದರೂ ಐಪಿಎಲ್ ಟ್ರೋಫಿ ಎನ್ನುವುದು RCB ಪಾಲಿಗೆ ಗಗನ ಕುಸಮವಾಗಿಯೇ ಉಳಿದಿದೆ. ಹೀಗಿರುವಾಗಲೇ ಕಳೆದ ಏಳೆಂಟು ಆವೃತ್ತಿಗಳಿಂದಲೂ 'ಈ ಸಲ ಕಪ್ ನಮ್ದೇ' ಎನ್ನುವ ಘೋಷಣೆ RCB  ಅಭಿಮಾನಿಗಳ ಪಾಲಿಗೆ ಹೊಸ ಹುರುಪನ್ನು ನೀಡಿತ್ತು. ತಂಡಕ್ಕೆ ಅಭಿಮಾನಿಗಳು ಇನ್ನಿಲ್ಲದಂತೆ ಸಫೋರ್ಟ್ ಮಾಡಿದರು RCB ಮಾತ್ರ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಸ್ವತಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸಹಾ ಈ ಸಲ ಕಪ್ ನಮ್ದೇ ಅಂದಿದ್ದರು. ಆದರೆ ಕಪ್ ಮಾತ್ರ ನಮ್ಮದಾಗಿರಲಿಲ್ಲ. ಈಗ ನಾಯಕ ಬದಲಾಗಿದ್ದು, ಕಪ್‌ ಗೆಲ್ಲುತ್ತಾರೆಯೋ ಎಂಬುದನ್ನು ಕಾದು ನೊಡಬೇಕಿದೆ.

ಕೆ ಎಲ್ ರಾಹುಲ್‌ ಬಗ್ಗೆ ಎಚ್ಚರಿಕೆಯಿಂದರಿ: RCB ಪಡೆಗೆ ಟೀಂ ಇಂಡಿಯಾ ಮಾಜಿ ಕೋಚ್‌ ರವಿಶಾಸ್ತ್ರಿ ಕಿವಿಮಾತು

3 ಬಾರಿ ಫೈನಲ್‌ ತಲುಪಿದರೂ ಕಪ್‌ ಸಿಕ್ಕಿಲ್ಲ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದೆಯಾದರೂ ಒಮ್ಮೆಯೂ ಕಪ್ ಗೆಲ್ಲಲು ಸಫಲವಾಗಿಲ್ಲ. ಈ ಬಾರಿ ಹೊಸ ಜೋಶ್‌ನಲ್ಲಿ ಕಪ್ ಗೆಲ್ಲಲು ಬೆಂಗಳೂರು ಮೂಲದ ಫ್ರಾಂಚೈಸಿ ರಣತಂತ್ರ ರೂಪಿಸಿದೆ. ಈ ಸಲನಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆದ್ದು, ಈ ಘೋಷಣೆಗೆ ಅರ್ಥ ಬರುವಂತೆ ಮಾಡಲಿ ಎನ್ನುವುದು ಅಸಂಖ್ಯಾತ ಅಭಿಮಾನಿಗಳ ಬಯಕೆಯಾಗಿದೆ. ಈ ಬಾರಿ ಕಪ್ ನಮ್ಮದಾಗುತ್ತೋ, ಚಿಪ್ ನಮ್ಮದಾಗುತ್ತೋ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ.

click me!