IPL 2023 ಮಳೆಯಿಂದ ಪಂದ್ಯ ಸ್ಥಗಿತ , 125 ರನ್‌ಗೆ ಕುಸಿದ ಲಖನೌ!

Published : May 03, 2023, 05:44 PM IST
IPL 2023 ಮಳೆಯಿಂದ ಪಂದ್ಯ ಸ್ಥಗಿತ , 125 ರನ್‌ಗೆ ಕುಸಿದ ಲಖನೌ!

ಸಾರಾಂಶ

ಲಖನೌ ಇನ್ನಿಂಗ್ಸ್ ಅಂತ್ಯಗೊಳ್ಳಲು ಇನ್ನು 4 ಎಸೆತ ಮಾತ್ರ ಬಾಕಿ ಇತ್ತು. ಅಷ್ಟರಲ್ಲೇ ಮಳೆ ವಕ್ಕರಿಸಿದೆ. ಇದರ ಪರಿಣಾಮ ಪಂದ್ಯ ಸ್ಥಗಿತಗೊಂಡಿದೆ. ಲಖನೌ 19.2 ಓವರ್‌ಗಳಲ್ಲಿ 125 ರನ್‌ಗೆ ಕುಸಿತ ಕಂಡಿದೆ.

ಲಖನೌ(ಮೇ.03): ಲಖನೌ ಹಾಗೂ ಚೆನ್ನೈ ನಡುವಿನ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಗಿದೆ. ಟಾಸ್ ವೇಳೆ ಮಳೆ ಸುರಿದ ಕಾರಣ ವಿಳಂಬವಾಗಿ ಪಂದ್ಯ ಆರಂಭಗೊಂಡಿತ್ತು. ಇದೀಗ 19.2 ಓವರ್ ಮುಕ್ತಾಯದ ವೇಳೆ ಮತ್ತೆ ಮಳೆ ಸುರಿದಿದೆ. ಮಾರಕ ದಾಳಿ ಸಂಘಟಿಸಿದ ಚೆನ್ನೈ ಸೂಪರ್ ಕಿಂಗ್ಸ್, ಲಖನೌ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ಅಂತಿಮ ಹಂತದಲ್ಲಿ ಆಯುಷ್ ಬದೋನಿ ಸ್ಪೋಟಕ ಬ್ಯಾಟಿಂಗ್ ಮೂಲಕ 59 ರನ್ ಸಿಡಿಸು ಮೂಲಕ ಲಖನೌ 7 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿದೆ. 19.2 ಓವರ್ ಮುಕ್ತಾಯದ ವೇಳೆ ಮಳೆ ಸುರಿದ ಕಾರಣ ಮತ್ತೆ ಪಂದ್ಯ ಸ್ಥಗಿತಗೊಂಡಿದೆ. ಲಖನೌ ಇನ್ನಿಂಗ್ಸ್‌ನಲ್ಲಿ 4 ಎಸೆತ ಮಾತ್ರ ಬಾಕಿ ಇದೆ.

ತುಂತುರ ಮಳೆಯಿಂದ 3.30ಕ್ಕೆ ಆರಂಭಗೊಳ್ಳಬೇಕಿದ್ದ ಪಂದ್ಯ 3.45ಕ್ಕೆ ಆರಂಭಗೊಂಡಿತು. ಟಾಸ್ ಸೋತು ಬ್ಯಾಟಿಂಗ್ ಇಳಿದ ಲಖನೌ ಸೂಪರ್ ಜೈಂಟ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು. ಕೈಲ್ ಮೇಯರ್ಸ್ 14 ರನ್ ಸಿಡಿಸಿ ಔಟಾದರು. ಇತ್ತ ಮನನ್ ವೋಹ್ರಾ 10 ರನ್ ಸಿಡಿಸಿ ನಿರ್ಗಮಿಸಿದರು. ಕರಣ್ ಶರ್ಮಾ ಕೇವಲ 9 ರನ್‌ಗೆ ಸುಸ್ತಾದರು. ಇತ್ತ ನಾಯಕ ಕ್ರುನಾಲ್ ಪಾಂಡ್ಯ ತನ್ನ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು. ಖಾತೆ ತೆರೆಯುವ ಮುನ್ನವೇ ಕ್ರುನಾಲ್ ಪಾಂಡ್ಯ ವಿಕೆಟ್ ಕೈಚೆಲ್ಲಿದರು. 

ಅಭಿಮಾನಿಗಳಿಗೆ ಗುಡ್ ನ್ಯೂಸ್,ನಿವೃತ್ತಿ ನಿರ್ಧರಿಸಿಲ್ಲ; ಕೊನೆಯ ಐಪಿಎಲ್ ಮಾತು ತಳ್ಳಿಹಾಕಿದ ಧೋನಿ!

ಮಾರ್ಕಸ್ ಸ್ಟೋಯ್ನಿಸ್ 6 ರನ್ ಸಿಡಿಸಿ ಔಟಾದರು. ಆದರೆ ನಿಕೋಲಸ್ ಪೂರನ್ ಹಾಗೂ ಆಯುಷ್ ಬದೋನಿ ಹೋರಾಟದಿಂದ ಲಖನೌ ಲಕ್ ಬದಲಾಯಿತು. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡ ದಿಢೀರ್ ಪುಟಿದೆದ್ದಿತ್ತು. ಪೂರನ 20 ರನ್ ಸಿಡಿಸಿ ಔಟಾದರು. ಆದರೆ ಆಯುಷ್ ಬದೋನಿ ಸ್ಫೋಟಕ ಬ್ಯಾಟಿಂಗ್ ಮೂಲಕ ಹಾಫ್ ಸೆಂಚುರಿ ಸಿಡಿಸಿದರು. ಬದೋನಿ 33 ಎಸತದಲ್ಲಿ ಅಜೇಯ 59 ರನ್ ಸಿಡಿಸಿದರು. ಇದೇ ವೇಳೆ ಮಳೆ ಕಾರಣ ಪಂದ್ಯ ಸ್ಥಗಿತಗೊಂಡಿತು.

ಲಖನೌದಲ್ಲಿ ಆರ್‌ಸಿಬಿ ಏರಿಸಿದ ಬಿಸಿಗೆ ತಂಪೆರೆದ ಮಳೆರಾಯ, LSG vs CSK ಟಾಸ್ ವಿಳಂಬ!

19.2 ಓವರ್‌ಗಳಲ್ಲಿ ಲಖನೌ ಸೂಪರ್ ಜೈಂಟ್ಸ್ 7 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿತು. ಇನ್ನೂ ನಾಲ್ಕು ಪಂದ್ಯ ಬಾಕಿ ಇರುವಂತೆ ಪಂದ್ಯ ಅನಿವಾರ್ಯವಾಗಿ ಸ್ಥಗಿತಗೊಂಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೊಂಡಿ ಬೀಚ್ ಗುಂಡಿನ ದಾಳಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಕ್ರಿಕೆಟಿಗ ವಾನ್, ಭಯಾನಕ ಘಟನೆ
IPL 2026 ಮಿನಿ ಹರಾಜಿನಲ್ಲಿ ಈ 4 ಆಟಗಾರರ ಮೇಲೆ ಕಣ್ಣಿಟ್ಟಿವೆ ಎಲ್ಲಾ ಫ್ರಾಂಚೈಸಿಗಳು!