ಲಖನೌ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಲೀಗ್ ಪಂದ್ಯ ಮಳೆಯಿಂದ ರದ್ದಾಗಿದೆ. ಐಪಿಎಲ್ ಇತಿಹಾಸದಲ್ಲಿ ಬೆಂಗಳೂರಿನಿಂದ ಹೊರಗಡೆ ಮಳೆಯಿಂದ ರದ್ದಾದ 2ನೇ ಪಂದ್ಯವಾಗಿದೆ. ಇದೀಗ ಪಾಯಿಂಟ್ಸ್ ಹಂಚಲಾಗಿದೆ.
ಲಖನೌ(ಮೇ.03): ಲಖನೌ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ 45ನೇ ಲೀಗ್ ಪಂದ್ಯ ಮಳೆಯಿಂದ ರದ್ದಾಗಿದೆ. ಇದರೊಂದಿಗೆ ಅಂಕ ಎರಡೂ ತಂಡಗಳು ಹಂಚಿಕೊಂಡಿದೆ. ಒಟ್ಟು 11 ಅಂಕ ಸಂಪಾದಿಸಿರುವ ಲಖನೌ ಸೂಪರ್ ಜೈಂಟ್ಸ್ 2ನೇ ಸ್ಥಾನಕ್ಕೆಲಗ್ಗೆ ಇಟ್ಟಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಐಪಿಎಲ್ ಇತಿಹಾಸದಲ್ಲಿ ಬೆಂಗಳೂರಿನಿಂದ ಹೊರಗಡೆ ಪಂದ್ಯ ಫಲಿತಾಂಶ ಕಾಣದೇ ರದ್ದಾಗಿರುವ ಎರಡನೇ ಉದಾಹರಣೆಯಾಗಿದೆ. ಮಳೆಯಿಂದ ಸ್ಥಗಿತಗೊಂಡಿದ್ದ ಪಂದ್ಯಗಳು 5 ಓವರ್, ಸೂಪರ್ ಓವರ್ ಮೂಲಕ ಫಲಿತಾಂಶ ನಿರ್ಧರಿಸಲಾಗಿದೆ. 2021ರಲ್ಲಿ ಡೆಲ್ಲಿ ಹಾಗೂ ಪುಣೆ ವಾರಿಯರ್ಸ್ ನಡುವಿನ ಡೆಲ್ಲಿಯಲ್ಲಿ ನಡೆದ ಪಂದ್ಯ ಮಳೆಯಿಂದ ರದ್ದಾಗಿತ್ತು.
ಲಖನೌ ಹಾಗೂ ಚೆನ್ನೈ ನಡುವಿನ ಪಂದ್ಯಕ್ಕೆ ಆರಂಭದಲ್ಲೇ ಮಳೆ ಅಡ್ಡಿಯಾಗಿತ್ತು. ಟಾಸ್‌ಗೂ ಮೊದಲು ಮಳೆ ಕಾರಣ ವಿಳಂಬವಾಗಿತ್ತು. ಮಳೆ ನಿಂತ ಬೆನ್ನಲ್ಲೇ ಟಾಸ್ ಮುಗಿಸಿ ಪಂದ್ಯ ಆರಂಭಗೊಂಡಿತ್ತು. 3.03ಕ್ಕೆ ಆರಂಭಗೊಳ್ಳಬೇಕಿದ್ದ ಪಂದ್ಯ 3.45ಕ್ಕೆ ಆರಂಭಗೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿತ್ತು.
ಅಭಿಮಾನಿಗಳಿಗೆ ಗುಡ್ ನ್ಯೂಸ್,ನಿವೃತ್ತಿ ನಿರ್ಧರಿಸಿಲ್ಲ; ಕೊನೆಯ ಐಪಿಎಲ್ ಮಾತು ತಳ್ಳಿಹಾಕಿದ ಧೋನಿ!
ಲಖನೌ ಸೂಪರ್ ಜೈಂಟ್ಸ್ ಆರಂಭಿಕ ಕೈಲ್ ಮೇಯರ್ಸ್ 14 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಮನನ್ ವೋಹ್ರ 10 ರನ್ ಸಿಡಿಸಿ ಔಟಾದರು. ಕರಣ್ ಶರ್ಮಾ, ನಾಯಕ ಕ್ರುನಾಲ್ ಪಾಂಡ್ಯ ಅಬ್ಬರಿಸಲಿಲ್ಲ. ಮಾರ್ಕಸ್ ಸ್ಟೊಯ್ನಿಸ್ ಕೇವಲ 6 ರನ್ ಸಿಡಿಸಿ ಔಟಾದರು. ಆದರೆ ನಿಕೋಲಸ್ ಪೂರನ್ ಹಾಗೂ ಆಯುಷ್ ಬದೋನಿ ಹೋರಾಟ ಲಖನೌ ತಂಡಕ್ಕೆ ಚೇತರಿಕೆ ನೀಡಿತು.
ನಿಕೋಲಸ್ ಪೂರನ್ 20 ರನ್ ಸಿಡಿಸಿ ಔಟಾದರು. ಆದರೆ ಆಯುಷ್ ಬದೋನಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಬ್ಬರಿಸಿದ ಬದೋನಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. 33 ಎಸೆತದಲ್ಲಿ ಅಜೇಯ 59 ರನ್ ಸಿಡಿಸಿ ಮಿಂಚಿದರು. ಇತ್ತ ಕೆ ಗೌತಮ್ ಅಜೇಯ 1 ರನ್ ಸಿಡಿಸಿದರು. 19.2 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 125 ರನ್ ಸಿಡಿಸಿತು. ಇದೇ ವೇಳೆ ಮಳೆ ಅಡ್ಡಿಯಾಯಿತು. ಬಳಿಕ ಪಂದ್ಯ ಮುಂದುವರಿಸಲು ಮಳೆ ಅನುವು ಮಾಡಿಕೊಡಲಿಲ್ಲ. ಹೀಗಾಗಿ ಪಂದ್ಯ ರದ್ದು ಮಾಡಲಾಯಿತು.
ಬಿಸಿಸಿಐ ಪ್ರವಾಸಗಳಲ್ಲಿ ವೇಶ್ಯೆಯರೊಂದಿಗೆ ಲೈಂಗಿಕ ಸಂಬಂಧ: ಮೊಹಮ್ಮದ್ ಶಮಿ ವಿರುದ್ಧ ಸುಪ್ರೀಂ ಮೊರೆ ಹೋದ ಪತ್ನಿ
ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. 2 ಅಂಕಗಳ ಪೈಕಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಲಾ ಒಂದೊಂದು ಅಂಕ ಹಂಚಿಕೊಂಡಿದೆ. ಲಖನೌ ಸೂಪರ್ ಜೈಂಟ್ಸ್ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದರೆ, ಚೆನ್ನೈ 3ನೇ ಸ್ಥಾನಕ್ಕೇರಿದೆ. ಇತ್ತ 2ನೇ ಸ್ಥಾನದಲ್ಲಿದ್ದ ರಾಜಸ್ಥಾನ ರಾಯಲ್ಸ್ 4ನೇ ಸ್ಥಾನಕ್ಕೆ ಕುಸಿದಿದೆ.