'ಯಾವುದಕ್ಕೆ ಅರ್ಹವೋ ಅದನ್ನೇ ಪಡೆಯುತ್ತೀಯ': ಮತ್ತೆ ಕಿಂಗ್ ಕೊಹ್ಲಿಯನ್ನು ಕೆಣಕಿದ ನವೀನ್ ಉಲ್ ಹಕ್‌..!

Published : May 02, 2023, 02:27 PM IST
'ಯಾವುದಕ್ಕೆ ಅರ್ಹವೋ ಅದನ್ನೇ ಪಡೆಯುತ್ತೀಯ': ಮತ್ತೆ ಕಿಂಗ್ ಕೊಹ್ಲಿಯನ್ನು ಕೆಣಕಿದ ನವೀನ್ ಉಲ್ ಹಕ್‌..!

ಸಾರಾಂಶ

* ಲಖನೌ ಸೂಪರ್ ಜೈಂಟ್ಸ್‌ ಪಡೆ ಬಗ್ಗುಬಡಿದ ಆರ್‌ಸಿಬಿ * ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾದ ಏಕಾನ ಕ್ರಿಕೆಟ್ ಸ್ಟೇಡಿಯಂ * ಕೊಹ್ಲಿ-ನವೀನ್ ನಡುವೆ ಮುಂದುವರೆದ ಆಫ್‌ಫೀಲ್ಡ್ ಗಲಾಟೆ

ಲಖನೌ(ಮೇ.02): ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಇಲ್ಲಿನ ಏಕಾನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಲಖನೌ ಸೂಪರ್ ಜೈಂಟ್ಸ್ ಎದುರು 18 ರನ್ ರೋಚಕ ಜಯ ಸಾಧಿಸಿದೆ. ಮೈದಾನದಲ್ಲಿ ನಡೆದ ವಾಗ್ವಾದದ ಬಳಿಕ ವಿರಾಟ್ ಕೊಹ್ಲಿ ಮತ್ತಷ್ಟು ಬ್ಯುಸಿಯಾಗಿದ್ದಾರೆ. 

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ಪಂದ್ಯ ಮುಕ್ತಾಯವಾಗುತ್ತಿದ್ದಂತೆಯೇ ಲಖನೌ ಸೂಪರ್ ಜೈಂಟ್ಸ್‌ ತಂಡದ ಮೆಂಟರ್ ಗೌತಮ್ ಗಂಭೀರ್ ಜತೆ ಮಾತಿನ ಚಕಮಕಿ ನಡೆದದ್ದು ಸಾಕಷ್ಟು ಸುದ್ದಿಯಾಯಿತು. ಈ ಘಟನೆಗೂ ಮುನ್ನ ನವೀನ್ ಉಲ್‌ ಹಕ್ ಬ್ಯಾಟಿಂಗ್ ಮಾಡುವ ವೇಳೆ ವಿರಾಟ್ ಕೊಹ್ಲಿ ಜತೆ ವಾಗ್ವಾದ ನಡೆದಿದ್ದು, ಬಹುತೇಕರ ಗಮನಕ್ಕೆ ಬರಲಿಲ್ಲ. ಇನ್ನು ಪಂದ್ಯ ಮುಕ್ತಾಯದ ಬಳಿಕ ನವೀನ್ ಉಲ್ ಹಕ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ ಸ್ಟೋರಿ, ವಿರಾಟ್ ಕೊಹ್ಲಿಯನ್ನೇ ಗುರಿ ಮಾಡಿ ಹಾಕಿದಂತಿದೆ.

"ನೀನು ಯಾವುದನ್ನು ಪಡೆಯಲು ಅರ್ಹನೋ ಅದನ್ನೇ ಪಡೆಯುತ್ತೀಯ, ಅದೇ ನಿಯಮ, ಅದು ಹಾಗೆಯೇ ನಡೆಯುತ್ತದೆ" ಎಂದು ನವೀನ್ ಉಲ್‌ ಹಕ್‌ ಇನ್‌ಸ್ಟಾಗ್ರಾಂ ಸ್ಟೋರಿ ಪೋಸ್ಟ್‌ ಮಾಡಿದ್ದಾರೆ.

ಇನ್ನು ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಕೂಡಾ ಪಂದ್ಯ ಮುಕ್ತಾಯದ ಬಳಿಕ ಗೂಢಾರ್ಥದ ಸ್ಟೋರಿಯನ್ನು ಪೋಸ್ಟ್‌ ಮಾಡಿದ್ದು, ರೋಮನ್‌ನ ಮಾಜಿ ಸಾಮ್ರಾಟ ಮಾರ್ಕಸ್ ಆರ್ಲಿಯಸ್‌ ಅವರ " ನಾವು ಕೇಳುವ ಪ್ರತಿಯೊಂದು ಅಭಿಪ್ರಾಯವಾಗಿರುತ್ತದೆ. ಆದರೆ ಸತ್ಯವಾಗಿರುವುದಿಲ್ಲ. ಪ್ರತಿಯೊಂದು ನಾವು ನೋಡುವುದು ದೃಷ್ಟಿಕೋನವಾಗಿರುತ್ತದೆ, ಆದರೆ ಸತ್ಯವಾಗಿರುವುದಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನು ಪಂದ್ಯ ನಡೆಯುವ ವೇಳೆ ನವೀನ್ ಉಲ್ ಹಕ್ ಅವರನ್ನು ಉದ್ದೇಶಿಸಿ ವಿರಾಟ್ ಕೊಹ್ಲಿ, ನೀನು ನನ್ನ ಕಾಲಿನ ಧೂಳಿಗೆ ಸಮ ಎಂಬರ್ಥದ ರೀತಿಯಲ್ಲಿ ಸನ್ನೆ ಮಾಡಿದ್ದರು. ಈ ವಿಡಿಯೋ ಕೂಡಾ ಸಾಕಷ್ಟು ವೈರಲ್ ಆಗಿದೆ. 

ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್‌ಗೆ ಪಂದ್ಯದ ಸಂಭಾವನೆಯ ಶೇ.100ರಷ್ಟು ದಂಡ ವಿಧಿಸಲಾಗಿದೆ. 

ಐಪಿಎಲ್ ಕೋಡ್ ಆಫ್ ಕಂಡಕ್ಟ್ ಪ್ರಕಾರ ಗೌತಮ್ ಗಂಭೀರ್ ಆರ್ಟಿಕಲ್ 2.21 ನಿಯಮ ಉಲ್ಲಂಘಿಸಿದ್ದಾರೆ. ಲೆವಲ್ 2 ನಿಯಮ ಉಲ್ಲಂಘಿಸಿದ ಕಾರಣ ಶೇ.100 ರಷ್ಟು ದಂಡ ವಿಧಿಸಲಾಗಿದೆ. ಇತ್ತ ವಿರಾಟ್ ಕೊಹ್ಲಿ ಕೂಡ ಆರ್ಟಿಕಲ್ 2.21 ನಿಯಮದಡಿ ಲೆವಲ್ 2 ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಪಂದ್ಯದ ಸಂಭಾವನೆಯ ಶೇಕಡಾ 100 ರಷ್ಟು ದಂಡ ವಿಧಿಸಲಾಗಿದೆ.

ಇನ್ನು ವಿರಾಟ್ ಕೊಹ್ಲಿ ಜೊತೆ ಹ್ಯಾಂಡ್‌ಶೇಕ್ ವೇಳೆ ನಿಯಮ ಉಲ್ಲಂಘಿಸಿದ ಲಖನೌ ತಂಡದ ನವೀನ್ ಉಲ್ ಹಕ್‌ಗೆ ಪಂದ್ಯದ ಸಂಭಾವನೆಯ ಶೇಕಡಾ 50 ರಷ್ಟು ದಂಡ ವಿಧಿಸಲಾಗಿದೆ. ನವೀನ್ ಐಪಿಎಲ್ ಕೋಡ್ ಆಫ್ ಕಂಡಕ್ಟ್‌ನ ಆರ್ಟಿಕಲ್ 2.21 ನಿಯಮದಡಿ ಲೆವಲ್ 1 ನಿಯಮ ಉಲ್ಲಂಘಿಸಿದ್ದಾರೆ. ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಎಲ್ಲರೊಂದಿಗೂ ಹಸ್ತಲಾಘವ ಮಾಡಿದರು. ಆದರೆ ನವೀನ್ ಉಲ್ ಹಕ್ ಹ್ಯಾಂಡ್‌ಶೇಕ್ ವೇಳೆ ಕೊಹ್ಲಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?