IPL 2023 ಅಯ್ಯರ್ ಹಾಫ್ ಸೆಂಚುರಿ, ರಾಜಸ್ಥಾನ ರಾಯಲ್ಸ್‌ಗೆ 150 ರನ್ ಗುರಿ!

By Suvarna NewsFirst Published May 11, 2023, 9:20 PM IST
Highlights

ಕೆಕೆಆರ್ ಹಾಗೂ ರಾಜಸ್ಥಾನ ನಡುವಿನ ರೋಚಕ ಹೋರಾಟ ತೀವ್ರ ಕುತೂಹಲ ಕೆರಳಿಸಿದೆ. ವೆಂಕಟೇಶ್ ಅಯ್ಯರ್ ಹಾಫ್ ಸೆಂಚುರಿ ನೆರವಿನಿಂದ ಕೆಕೆಆರ್149  ರನ್ ಸಿಡಿಸಿದೆ

ಕೋಲ್ಕತಾ(ಮೇ.11): ಐಪಿಎಲ್ ಟೂರ್ನಿ ಹೋರಾಟ ತೀವ್ರಗೊಳ್ಳುತ್ತಿದೆ. ಒಂದೆಡೆ ಪ್ಲೇ ಆಫ್ ಲೆಕ್ಕಾಚಾರ, ಮತ್ತೊಂದೆಡೆ ಗೆಲ್ಲಲೇಬೇಕಾದ ಒತ್ತಡ ಹೆಚ್ಚಾಗುತ್ತಿದೆ. ಇಂದಿನ ಪಂದ್ಯದಲ್ಲಿ   ವೆಂಕಟೇಶ್ ಅಯ್ಯರ್ ದಿಟ್ಟ ಹೋರಾಟದಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ ಕೆಕೆಆರ್ 8 ವಿಕೆಟ್ ನಷ್ಟಕ್ಕೆ 149 ರನ್ ಸಿಡಿಸಿದೆ. ಇದೀಗ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡಕ್ಕೆ ರನ್ ಟಾರ್ಗೆಟ್ ಸಿಕ್ಕಿದೆ. 

ತವರಿನಲ್ಲಿ ಬೃಹತ್ ಮೊತ್ತದ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಕೋಲ್ಕತಾ ನೈಟ್ ರೈಡರ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜೇಸನ್ ರಾಯ್ ಹಾಗೂ ರಹಮಾನುಲ್ಲಾ ಗುರ್ಬಾಜ್ ಆರಂಭ 14 ರನ್‌ಗಳಿಗೆ ಅಂತ್ಯವಾಯಿತು. ಜೇಸನ್ ರಾಯ್ 10 ರನ್ ಸಿಡಿಸಿ ಔಟಾದರು. ಇತ್ತ ಗುರ್ಬಾಜ್ 18 ರನ್ ಸಿಡಿಸಿ ನಿರ್ಗಮಿಸಿದರು. ಕುಸಿದ ತಂಡಕ್ಕೆ ವೆಂಕಟೇಶ್ ಅಯ್ಯರ್ ಹಾಗೂ ನಾಯಕ ನಿತೀಶ್ ರಾಣಾ ಆಸರೆಯಾದರು. ವೆಂಕಟೇಶ್ ಅಯ್ಯರ್ ದಿಟ್ಟ ಹೋರಾಟದ ಮೂಲಕ ಕೆಕೆಆರ್ ತಂಡಕ್ಕೆ ಚೇತರಿಕೆ ನೀಡಿದರು.

Latest Videos

IPL 2023: ರಾಜಸ್ಥಾನ ರಾಯಲ್ಸ್‌ ತಂಡ ಎದುರಿಸುವ ಮುನ್ನವೇ ಆರ್‌ಸಿಬಿ ಪ್ಲೇಯರ್‌ಗೆ ಸಿಕ್ತು ಬಂಪರ್‌ ಸುದ್ದಿ!

ನಿತೀಶ್ ರಾಣಾ ಹೋರಾಟ 22 ರನ್‌ಗೆ ಅಂತ್ಯವಾಯಿತು. ರಾಣಾ ವಿಕೆಟ್ ಕಬಳಿಸಿದ ಯಜುವೇಂದ್ರ ಚಹಾಲ್ ಐಪಿಎಲ್ ಟೂರ್ನಿಯಲ್ಲಿ ಹೊಸ ಇತಿಹಾಸ ದಾಖಲಿಸಿದ್ದಾರೆ. 
ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ದಾಖಲೆ
184 ವಿಕೆಟ್: ಯಜುವೇಂದ್ರ ಚಹಾಲ್
183 ವಿಕೆಟ್: ಡ್ವೇನ್ ಬ್ರಾವೋ
174 ವಿಕೆಟ್: ಪಿಯುಷ್ ಚಾವ್ಲಾ
172 ವಿಕೆಟ್: ಅಮಿತ್ ಮಿಶ್ರಾ
171 ವಿಕೆಟ್ : ಆರ್ ಅಶ್ವಿನ್

ಇತ್ತ ಆ್ಯಂಡ್ರೆ ರಸೆಲ್ ಅಬ್ಬರಿಸಲಿಲ್ಲ. 10 ರನ್ ಸಿಡಿಸಿ ರಸೆಲ್ ನಿರ್ಗಮಿಸಿದರು. ವೆಂಕಟೇಶ್ ಅಯ್ಯರ್ ಹಾಫ್ ಸೆಂಚುರಿ ಸಿಡಿಸಿ ಸಂಭ್ರಮಿಸಿದರು. ಆದರೆ ಅಯ್ಯರ್ 57 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಅಬ್ಬರಿಸುವ ಶಾರ್ದೂಲ್ ಠಾಕೂರ್ ಈ ಬಾರಿ 1 ರನ್  ಸಿಡಿಸಿ ಔಟಾದರು. 

IPL 2023 ಧೋನಿ ಜಾದುಗೆ ಮಕಾಡೆ ಮಲಗಿದ ಡೆಲ್ಲಿ, ಸಿಎಸ್‌ಕೆ‌ಗೆ 27 ರನ್ ಗೆಲುವು!

ರಿಂಕು ಸಿಂಗ್ ಹೋರಾಟ ಸೂಚನೆ ನೀಡಿದರು. ಆದರೆ 16 ರನ್ ಸಿಡಿಸಿ ರಿಂಕು ನಿರ್ಗಮಿಸಿದರು. ಅಂಕುಲ್ ರಾಯ್ 6 ರನ್ ಸಿಡಿಸಿ ಔಟಾದರು. ಸುನಿಲ್ ನರೈನ್ ಅಜೇಯ 6 ರನ್  ಸಿಡಿಸಿದರು. ಈ ಮೂಲಕ ಕೆಕೆಆರ್ 7 ವಿಕೆಟ್ ನಷ್ಟಕ್ಕೆ ರನ್ ಸಿಡಿಸಿದೆ. 

click me!