IPL 2023 ಜೋಸ್ ಬಟ್ಲರ್ 95, ಸ್ಯಾಮ್ಸನ್ 67 ; ಹೈದರಾಬಾದ್‌ಗೆ 215 ರನ್ ಟಾರ್ಗೆಟ್!

Published : May 07, 2023, 09:09 PM ISTUpdated : May 07, 2023, 09:35 PM IST
IPL 2023 ಜೋಸ್ ಬಟ್ಲರ್ 95, ಸ್ಯಾಮ್ಸನ್  67 ; ಹೈದರಾಬಾದ್‌ಗೆ 215 ರನ್ ಟಾರ್ಗೆಟ್!

ಸಾರಾಂಶ

ಜೋಸ್ ಬಟ್ಲರ್ ಕೇವಲ 5 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡರೆ, ಇತ್ತ ಸಂಜು ಸ್ಯಾಮ್ಸನ್ ಸ್ಫೋಟಕ ಫಿಫ್ಟ್ ಸಿಡಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ಅಬ್ಬರದಿಂದ 214 ರನ್ ಸಿಡಿಸಿದೆ 

ಜೈಪುರ(ಮೇ.07): ಜೋಸ್ ಬಟ್ಲರ್ ಸ್ಫೋಟಕ ಬ್ಯಾಟಿಂಗ್, ನಾಯಕ ಸಂಜು ಸ್ಯಾಮ್ಸನ್ ಹಾಫ್ ಸೆಂಚುರಿ ನೆರವಿನಿಂದ ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ 214 ರನ್ ಸಿಡಿಸಿದೆ. ಬಟ್ಲರ್ ಕೇವಲ 5 ರನ್‌ನಿಂದ ಶತಕ ಮಿಸ್ ಮಾಡಿಕೊಂಡರು. ಇತ್ತ ಸ್ಯಾಮ್ಸನ್ ಅಜೇಯ 67 ರನ್ ಸಿಡಿಸಿದರು. ಈ ಮೂಲಕ ಹೈದರಾಬಾದ್ ತಂಡಕ್ಕೆ 215 ರನ್ ಟಾರ್ಗೆಟ್ ನೀಡಲಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಸ್ಫೋಟಕ ಬ್ಯಾಟಿಂಗ್ ಮೂಲಕ ಹೈದರಾಬಾದ್ ತಂಡದ ತಲೆನೋವು ಹೆಚ್ಚಿಸಿತು. ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಆರಂಭಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಬೆಚ್ಚಿ ಬಿದ್ದಿತು. ಮೊದಲ ವಿಕೆಟ್‌ಗೆ ಈ ಜೋಡಿ 54 ರನ್ ಜೊತೆಯಾಟ ನೀಡಿತು. ಜೈಸ್ವಾಲ್ 18 ಎಸೆತದಲ್ಲಿ 35 ರನ್ ಕಾಣಿಕೆ ನೀಡಿದರು. ಮೊದಲ ವಿಕೆಟ್ ಕಬಳಿಸಿದ ಸಂಭ್ರಮದಲ್ಲಿದ್ದ ಹೈದರಾಬಾದ್ ತಂಡಕ್ಕೆ ಡಬಲ್ ಶಾಕ್ ಎದುರಾಯಿತು. ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಪ್ರದರ್ಶನಕ್ಕೆ ಉತ್ತರವೇ ಇಲ್ಲದಾಯಿತು.

IPL 2023 ಸಹೋದರರ ಸವಾಲ್ ಗೆದ್ದ ಹಾರ್ದಿಕ್ ಪಾಂಡ್ಯ, ಪ್ಲೇ ಆಫ್‌ಗೆ ಇನ್ನೊಂದೇ ಹೆಜ್ಜೆ..!

ಹೊಡಿ ಬಡಿ ಆಟದಿಂದ ರಾಜಸ್ಥಾನ ರಾಯಲ್ಸ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಇತ್ತ ಬಟ್ಲರ್ ಅಬ್ಬರಿಸಿದರೆ, ಮತ್ತೊಂದೆಡೆಯಿಂದ ಸಂಜು ಸ್ಯಾಮ್ಸನ್ ಸಿಕ್ಸರ್ ಮೂಲಕ ಘರ್ಜಿಸಿದರು. ಜೋಸ್ ಬಟ್ಲರ್ ಶತಕದ ಸನಿಹದಲ್ಲಿ ವಿಕೆಟ್ ಕೈಚೆಲ್ಲಿದರು. 59 ಎಸೆತದಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಜೋಸ್ ಬಟ್ಲರ್ 95 ರನ್ ಸಿಡಿಸಿದರು. ಸಂಜು ಸ್ಯಾಮ್ಸನ್ 37 ಎಸೆತದಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ ಅಜೇಯ 62 ರನ್ ಸಿಡಿಸಿದರು. ಇತ್ತ ಶಿಮ್ರೊನ್ ಹೆಟ್ಮೆಯರ್ ಅಜೇಯ 7 ರನ್ ಸಿಡಿಸಿದರು.

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ಜೋ ರೂಟ್, ಧ್ರುವ್ ಜುರೆಲ್, ಶಿಮ್ರೊನ್ ಹೆಟ್ಮೆಯರ್, ಆರ್ ಅಶ್ವಿನ್, ಮರುಗನ್ ಅಶ್ವಿನ್, ಸಂದೀಪ್ ಶರ್ಮಾ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್ 

ಇತಿಹಾಸ ಬರೆದ ಪಾಂಡ್ಯ ಬ್ರದರ್ಸ್‌: ಐಪಿಎಲ್‌ನಲ್ಲಿ ಹೊಸ ದಾಖಲೆ ನಿರ್ಮಾಣ..!

ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಆ್ಯಂಡಿನ್ ಮರ್ಕ್ರಮ್(ನಾಯಕ), ಹೆನ್ರಿಚ್ ಕಾಲ್ಸೀನ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮಾದ್, ಮಾರ್ಕೋ ಜಾನ್ಸೆನ್, ವಿವ್ರಾಂತ್ ಶರ್ಮಾ, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್ 
 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?