
ದೆಹಲಿ(ಏ.20) IPL 2023 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಗೆಲುವಿನ ವಿಶ್ವಾಸದಲ್ಲಿದೆ. ಇಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಅಖಾಡಕ್ಕಿಳಿಯುತ್ತಿದೆ. ಆದರೆ ಈ ಪಂದ್ಯ ವಿಳಂಭವಾಗಿದೆ. ಮಳಯಿಂದಾಗಿ ಟಾಸ್ ವಿಳಂಭವಾಗಿದೆ. 6.50 ರಿಂದ ದೆಹಲಿಯಲ್ಲಿ ಮಳೆಯಾಗುತ್ತಿದೆ. 7 ಗಂಟೆಗೆ ಟಾಸ್ ವೇಳೆ ಪಿಚ್ ಮುಚ್ಚಲಾಗಿತ್ತು. ಸದ್ಯ ಮಳೆ ನಿಂತಿಲ್ಲ. ತುಂತುರು ಮಳೆ ಪಂದ್ಯ ಆರಂಭಕ್ಕೆ ಅಡ್ಡಿಮಾಡಿದೆ. ಪಿಚ್ ಕವರ್ ಮಾಡಲಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಮಳೆ ನಿಲ್ಲಲು ಪ್ರಾರ್ಥಿಸುತ್ತಿದ್ದಾರೆ. ಡೆಲ್ಲಿ ಆಟಗಾರರು ಫಟ್ಬಾಲ್ ಆಡುತ್ತಾ ವಾರ್ಮ್ ಅಪ್ ಮಾಡುತ್ತಿದ್ದಾರೆ. ಇತ್ತ ಕೆಕೆಆರ್ ಆಟಾಗಾರರು ಮಳೆ ನಿಲ್ಲುವುದನ್ನೇ ಕಾಯುತ್ತಿದ್ದಾರೆ.
ಇದು ಡೆಲ್ಲಿ ಹಾಗೂ ಕೆಕೆಆರ್ ತಂಡಕ್ಕೆ ಮಹತ್ವದ ಪಂದ್ಯ. ಕಾರಣ ಡೆಲ್ಲಿ ಇದುವರೆಗೂ ಗೆಲುವುದಾಖಲಿಸಿಲ್ಲ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸಿ ಪ್ಲೇ ಆಫ್ ಹಾದಿಯಲ್ಲಿ ಸಾಗಲು ಈ ಪಂದ್ಯ ನೆರವಾಗಲಿದೆ. ಇತ್ತ ಕೋಲ್ಕತಾ ನೈಟ್ ರೈಡರ್ಸ್ ಸದ್ಯ 8ನೇ ಸ್ಥಾನದಲ್ಲಿದೆ. ಆದರೆ ಇಂದಿನ ಪಂದ್ಯದ ಗೆಲುವು ಕೆಕೆಆರ್ ತಂಡವನ್ನು 3ನೇ ಸ್ಥಾನಕ್ಕೆ ಕೊಂಡೊಯ್ಯಲಿದೆ.
IPL 2023 ಸಿರಾಜ್ ಬೆಂಕಿ ಬೌಲಿಂಗ್, ಪಂಜಾಬ್ ಬಗ್ಗುಬಡಿದ ಆರ್‌ಸಿಬಿ..!
ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಪಂದ್ಯಜಲ್ಲಿ ಲಖನೌ ವಿರುದ್ಧ ಹೋರಾಟ ಮಾಡಿತ್ತು. ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಲಖನೌ ವಿರುದ್ಧ 50 ರನ್ ಸೋಲು ಕಂಡಿತ್ತು. 2ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 6 ವಿಕೆಟ್ ಸೋಲು ಕಂಡಿತ್ತು. ಇತ್ತ 3ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 57 ರನ್ ಸೋಲು ಕಂಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ ಸೋಲು ಕಂಡ ಡೆಲ್ಲಿ ಕ್ಯಾಪಿಟಲ್ಸ್, ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ 23 ರನ್ ಸೋಲು ಕಂಡಿತ್ತು. ಆಡಿದ 5 ಪಂದ್ಯಗಳನ್ನು ಸೋತು ನಿರಾಸೆ ಅನುಭವಿಸಿದೆ.
ರಿಷಬ್ ಪಂತ್ ಅಪಘಾತದಿಂದ ವಿಶ್ರಾಂತಿಯಲ್ಲಿದ್ದಾರೆ. ಕ್ರಿಕೆಟ್‌ನಿಂದ ದೂರ ಉಳಿದಿರುವ ಪಂತ್ ಅಲಭ್ಯತೆ ಡೆಲ್ಲಿ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಡೇವಿಡ್ ವಾರ್ನರ್ ತಂಡದ ನಾಯಕತ್ವ ವಹಿಸಿಕೊಂಡರೂ ಗೆಲುವಿನ ನಗೆ ಬೀರುತ್ತಿಲ್ಲ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಡೆಲ್ಲಿ ವಿಫಲವಾಗಿದೆ.
ಫಾಫ್ ಡು ಪ್ಲೆಸಿಸ್ ಇದ್ದೂ ವಿರಾಟ್ ಕೊಹ್ಲಿ RCB ನಾಯಕರಾಗಿದ್ದು ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ..!
ಕೋಲ್ಕತಾ ನೈಟ್ ರೈಡರ್ಸ್ ಉತ್ತಮ ಹೋರಾಟ ನೀಡಿದರೂ 3 ಪಂದ್ಯದಲ್ಲಿ ಮುಗ್ಗರಿಸಿದೆ. ಕೋಲ್ಕತಾ ತಂಡ ತನ್ನ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಿತ್ತು. ಈ ಪಂದ್ಯದ ಅಂತ್ಯದಲ್ಲಿ ಮಳೆ ವಕ್ಕರಿಸಿತ್ತು. ಹೀಗಾಗಿ ಡಕ್‌ವರ್ತ್ ನಿಯಮದನ್ವಯ ಪಂಜಾಬ್ 7 ರನ್ ಗೆಲುವು ದಾಖಲಿಸಿತ್ತು. ಇದೀಗ ಕೆಕೆಆರ್‌ಗೆ ಮತ್ತೆ ಮಳೆರಾಯ ಅಡ್ಡಿಪಡಿಸಿದ್ದಾನೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.