IPL 2023: ಹ್ಯಾಟ್ರಿಕ್ ಸೋಲಿನಿಂದ ಪಾರಾಗುತ್ತಾ ಡೆಲ್ಲಿ ಕ್ಯಾಪಿಟಲ್ಸ್‌?

Published : Apr 08, 2023, 11:00 AM IST
IPL 2023: ಹ್ಯಾಟ್ರಿಕ್ ಸೋಲಿನಿಂದ ಪಾರಾಗುತ್ತಾ ಡೆಲ್ಲಿ ಕ್ಯಾಪಿಟಲ್ಸ್‌?

ಸಾರಾಂಶ

16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿಂದು ಡಬಲ್ ಹೆಡ್ಡರ್‌ ಪಂದ್ಯ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ರಾಜಸ್ಥಾನ ರಾಯಲ್ಸ್ ಸತತ ಎರಡು ಸೋಲು ಕಂಡಿರುವ ಡೆಲ್ಲಿಗೆ ಮೊದಲ ಗೆಲುವಿನ ನಿರೀಕ್ಷೆ

ಗುವಾ​ಹಟಿ(ಏ.08): ಸತತ 2 ಸೋಲು​ಗ​ಳೊಂದಿಗೆ ಅಭಿಯಾನ ಆರಂಭಿಸಿರುವ ಡೆಲ್ಲಿ ಕ್ಯಾಪಿ​ಟ​ಲ್ಸ್‌ ಶನಿ​ವಾರ ರಾಜ​ಸ್ಥಾನ ರಾಯಲ್ಸ್‌ ವಿರುದ್ಧ ಸೆಣ​ಸಾ​ಡ​ಲಿದ್ದು, ಹ್ಯಾಟ್ರಿಕ್‌ ಸೋಲು ತಪ್ಪಿ​ಸಿಕೊಳ್ಳಬೇಕಾದ ಒತ್ತ​ಡ​ದ​ಲ್ಲಿದೆ. ಮತ್ತೊಂದೆಡೆ ಭರ್ಜರಿ ಗೆಲು​ವಿ​ನೊಂದಿಗೆ ಶುಭಾ​ರಂಭ ಮಾಡಿ​ದರೂ, ಪಂಜಾಬ್‌ ವಿರುದ್ಧ ವೀರೋ​ಚಿತ ಸೋಲುಂಡಿದ್ದ ರಾಜ​ಸ್ಥಾನ ರಾಯಲ್ಸ್‌ ತನ್ನ 2ನೇ ತವರು ಗುವಾಹಟಿಯಲ್ಲಿ ಮೊದಲ ಜಯಕ್ಕಾಗಿ ಕಾತರಿಸು​ತ್ತಿ​ದೆ.

ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌ ಪಡೆ 2 ಪಂದ್ಯ​ಗ​ಳಲ್ಲೂ ಮುಗ್ಗ​ರಿ​ಸಿದ್ದು, ಈ ಸಮ​ಸ್ಯೆಗೆ ಶೀಘ್ರ ಪರಿ​ಹಾರ ಕಂಡು​ಕೊ​ಳ್ಳ​ಬೇ​ಕಿದೆ. ಡೇವಿಡ್‌ ವಾರ್ನರ್‌ ಲಯ​ದ​ಲ್ಲಿ​ದ್ದರೂ ಮಿಚೆಲ್ ಮಾರ್ಷ್‌ ವೈಫಲ್ಯ ತಂಡಕ್ಕೆ ತಲೆ​ನೋ​ವಾ​ಗಿದೆ. ಪೃಥ್ವಿ ಶಾ, ಸರ್ಫ​ರಾಜ್‌ ಖಾನ್ ರನ್‌ ಗಳಿಸಲು ತಿಣುಕಾಡುತ್ತಿದ್ದಾರೆ. ಇವರಿಬ್ಬರ ಸ್ಥಾನ ತುಂಬ​ಬಲ್ಲ ಅನು​ಭವಿ ಬ್ಯಾಟ​ರ್‌​ಗಳೂ ತಂಡ​ದ​ಲ್ಲಿ ಇಲ್ಲ​ದಿ​ರು​ವುದು ಮತ್ತೊಂದು ಸಮಸ್ಯೆ ಏನ್ರಿಚ್. ನೋಕಿಯ ಮುನ್ನ​ಡೆ​ಸ​ಲಿ​ರುವ ವೇಗದ ಬೌಲಿಂಗ್‌ ಪಡೆಗೆ ಬಲ ತುಂಬಬೇಕಾದ ಅನಿ​ವಾ​ರ್ಯತೆ ಖಲೀಲ್‌ ಅಹಮ್ಮದ್, ಮುಕೇಶ್‌ ಕುಮಾ​ರ್‌ ಮೇಲಿ​ದೆ.

ಮತ್ತೊಂದೆಡೆ ರಾಜ​ಸ್ಥಾನ ಸ್ಫೋಟಕ ಬ್ಯಾಟ​ರ್‌​ಗಳ ದಂಡೇ ಹೊಂದಿ​ದ್ದರೂ ಮಧ್ಯಮ ಕ್ರಮಾಂಕದ ಸಮ​ಸ್ಯೆ​ಯಿಂದ ಇನ್ನೂ ಹೊರ​ಬಂದಿಲ್ಲ. ಪಡಿ​ಕ್ಕಲ್‌, ರಿಯಾನ್‌ ಪರಾ​ಗ್‌ ನಿರೀಕ್ಷೆ ಉಳಿಸಿಕೊಳ್ಳುತ್ತಿಲ್ಲ. ಪಂಜಾಬ್‌ ವಿರುದ್ಧ ಕೈ ಬೆರ​ಳಿಗೆ ಗಾಯ​ ಮಾ​ಡಿ​ಕೊಂಡಿದ್ದ ಜೋಸ್ ಬಟ್ಲರ್‌ ಈ ಪಂದ್ಯ​ದಿಂದ ಹೊರ​ಗು​ಳಿ​ಯುವ ಸಾಧ್ಯತೆ ಇದ್ದು, ಜೋ ರೂಟ್‌ಗೆ ಅವ​ಕಾಶ ಸಿಗ​ಬ​ಹುದು. ಟ್ರೆಂಟ್‌ ಬೌಲ್ಟ್‌, ಯುಜುವೇಂದ್ರ ಚಹಲ್‌, ರವಿಚಂದ್ರನ್ ಅಶ್ವಿನ್‌ ಬೌಲಿಂಗ್‌​ನಲ್ಲಿ ಮತ್ತೆ ಎದು​ರಾ​ಳಿ​ಗ​ಳನ್ನು ಕಾಡಲು ಸಜ್ಜಾ​ಗಿ​ದ್ದಾ​ರೆ.

IPL 2023 ರಾಹುಲ್, ಕ್ರುನಾಲ್ ಹೋರಾಟಕ್ಕೆ ಶರಣಾದ ಸನ್‌ರೈಸರ್ಸ್, ಮೊದಲ ಸ್ಥಾನಕ್ಕೇರಿದ ಲಖನೌ!

ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಒಟ್ಟು 26 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಉಭಯ ತಂಡಗಳು ಸಮಾನ ಹೋರಾಟ ಮಾಡಿವೆ. ರಾಜಸ್ಥಾನ ರಾಯಲ್ಸ್‌ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಾ 13 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ರಾಜ​ಸ್ಥಾ​ನ ರಾಯಲ್ಸ್‌: ಯಶಸ್ವಿ ಜೈಸ್ವಾಲ್‌, ಜೋಸ್‌ ಬಟ್ಲರ್‌/ ಜೋ ರೂಟ್‌, ಸಂಜು ಸ್ಯಾಮ್ಸನ್‌ ​(​ನಾ​ಯ​ಕ), ದೇವ​ದ​ತ್‌ ಪಡಿಕ್ಕಲ್, ಶಿಮ್ರೊನ್ ಹೆಟ್ಮೇ​ಯರ್‌, ರಿಯಾನ್‌ ಪರಾಗ್, ಜೇಸನ್ ಹೋಲ್ಡರ್‌, ರವಿಚಂದ್ರನ್‌ ಅಶ್ವಿನ್‌, ಟ್ರೆಂಟ್‌ ಬೌಲ್ಟ್‌, ಆಸಿ​ಫ್‌, ಯುಜುವೇಂದ್ರ ಚಹ​ಲ್‌

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್‌(ನಾಯಕ), ಪೃಥ್ವಿ ಶಾ, ಮಿಚೆಲ್‌ ಮಾರ್ಷ್‌, ರಿಲೇ ರೊಸ್ಸೌ, ಸರ್ಫರಾಜ್‌ ಖಾನ್, ಅಕ್ಷರ್‌ ಪಟೇಲ್, ಅಭಿ​ಷೇಕ್‌, ಕುಲ್ದೀಪ್‌, ನೋಕಿಯಾ, ಖಲೀಲ್‌, ಮುಕೇ​ಶ್‌.

ಪಂದ್ಯ: ಮಧ್ಯಾ​ಹ್ನ 3.30ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಚ್‌

ಗುವಾ​ಹಟಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿ​ಯಾ​ಗಿದ್ದು, ಮೊದಲ ಪಂದ್ಯ​ದಂತೆಯೇ ಮತ್ತೊಮ್ಮೆ ರನ್‌ ಮಳೆ ಹರಿ​ಯುವುದು ಬಹು​ತೇಕ ಖಚಿತ. ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡುವ ನಿರೀ​ಕ್ಷೆ​ಯಿ​ದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌